IPL 2023: ಸೋತರೂ ದಾಖಲೆ ಬರೆದ ಮುಂಬೈ: ಮಿ.360 ಸೂರ್ಯಕುಮಾರ್ ಬತ್ತಳಿಕೆ ಸೇರಿದ ಈ ಅಪರೂಪದ ರೆಕಾರ್ಡ್

Suryakumar Yadav Record: ಮಿಸ್ಟರ್ 360 ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ನಿನ್ನೆ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಹೆಸರಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರರಾಗಿದ್ದಾರೆ.

Written by - Bhavishya Shetty | Last Updated : May 27, 2023, 12:23 PM IST
    • ಗುಜರಾತ್ ಟೈಟಾನ್ಸ್ ಗೆಲುವು ದಾಖಲಿಸುವ ಮೂಲಕ ಫೈನಲ್‌ ಗೆ ಲಗ್ಗೆ ಇಟ್ಟಿದೆ.
    • ಈ ಪಂದ್ಯದಲ್ಲಿ ಮುಂಬೈನ ಸೂರ್ಯಕುಮಾರ್ ಯಾದವ್ ಅವರು ದೊಡ್ಡ ದಾಖಲೆ ಬರೆದಿದ್ದಾರೆ.
    • ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯನ್ನು ಮುರಿಯಲು ಕೆಲವೇ ರನ್‌ ಗಳ ಅಂತರದಲ್ಲಿದ್ದರು
IPL 2023: ಸೋತರೂ ದಾಖಲೆ ಬರೆದ ಮುಂಬೈ: ಮಿ.360 ಸೂರ್ಯಕುಮಾರ್ ಬತ್ತಳಿಕೆ ಸೇರಿದ ಈ ಅಪರೂಪದ ರೆಕಾರ್ಡ್ title=
Suryakumar Yadav

Suryakumar Yadav Record: ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ದಾಖಲಿಸುವ ಮೂಲಕ ಫೈನಲ್‌ ಗೆ ಲಗ್ಗೆ ಇಟ್ಟಿದೆ. ಈಗ ತಂಡವು ಮೇ 28 ರಂದು ಐಪಿಎಲ್ 2023 ರ ಫೈನಲ್‌ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಆದರೆ ಈ ಪಂದ್ಯದಲ್ಲಿ ಮುಂಬೈನ ಸೂರ್ಯಕುಮಾರ್ ಯಾದವ್ ಅವರು ದೊಡ್ಡ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ, ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯನ್ನು ಮುರಿಯಲು ಕೆಲವೇ ರನ್‌ ಗಳ ಅಂತರದಲ್ಲಿದ್ದರು.

ಇದನ್ನೂ ಓದಿ: ನನ್ನನ್ನು ಕ್ಷಮಿಸಿ ವಿರಾಟ್ ಕೊಹ್ಲಿ ಸರ್: ನವೀನ್-ಉಲ್-ಹಕ್

ಮಿಸ್ಟರ್ 360 ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ನಿನ್ನೆ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಹೆಸರಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರರಾಗಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರು 605 ರನ್ ಗಳಿಸಿದ್ದಾರೆ. ಅವರು ಇನ್ನೂ 14 ರನ್ ಗಳಿಸಿದ್ದರೆ, ಮುಂಬೈ ಪರ ಒಂದೇ ಋತುವಿನಲ್ಲಿ ಸಚಿನ್ ತೆಂಡೂಲ್ಕರ್ ಅವರ 618 ರನ್ ಗಳ ದಾಖಲೆಯನ್ನು ಮುರಿಯುತ್ತಿದ್ದರು. 2010ರಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು.

ಸೂರ್ಯಕುಮಾರ್ ಯಾದವ್ ಗುಜರಾತ್ ವಿರುದ್ಧ 61 ರನ್‌ ಗಳ ಇನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ ಜೊತೆಗೆ, ಅವರು ಐಪಿಎಲ್ 2023 ರಲ್ಲಿ ತಮ್ಮ 600 ರನ್ ಗಳನ್ನು ಪೂರೈಸಿದರು. ಅವರು ಮುಂಬೈ ಇಂಡಿಯನ್ಸ್‌ ಗಾಗಿ ಐಪಿಎಲ್ ಇತಿಹಾಸದಲ್ಲಿ ಒಂದು ಋತುವಿನಲ್ಲಿ 600 ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ 618 ರನ್ ಗಳಿಸಿದ್ದರೆ ಸೂರ್ಯ 605 ರನ್ ಗಳಿಸಿದ್ದಾರೆ.

ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಅತ್ಯಂತ ಅಪಾಯಕಾರಿ ಬ್ಯಾಟಿಂಗ್ ಮಾಡುವ ಮೂಲಕ ಮೂರನೇ ಶತಕ ಮತ್ತು ಅವರ IPL ವೃತ್ತಿಜೀವನದ ಬೆಸ್ಟ್ ಇನ್ನಿಂಗ್ಸ್ ಆಡಿದ್ದಾರೆ. ಕೇವಲ 60 ಎಸೆತಗಳಲ್ಲಿ 129 ರನ್‌ ಗಳ ಅಬ್ಬರದ ಇನ್ನಿಂಗ್ಸ್‌ ಆಡಿದ್ದಾರೆ. ಈ ವೇಳೆ ಅವರ ಬ್ಯಾಟ್‌ ನಿಂದ 7 ಬೌಂಡರಿ ಹಾಗೂ 10 ದೊಡ್ಡ ಸಿಕ್ಸರ್‌ ಗಳು ಹೊರ ಬಂದಿವೆ. ಈ ಶತಕದೊಂದಿಗೆ ಇದೀಗ ಐಪಿಎಲ್ 2023ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Virat Kohli : ಇನ್‌ಸ್ಟಾಗ್ರಾಮ್‌ನಲ್ಲಿ 250 ಮಿಲಿಯನ್‌ ಫಾಲೋವರ್ಸ್‌;ದಾಖಲೆ ಬರೆದ ವಿಕೆ

ಶುಭ್ಮನ್ ಗಿಲ್ ಇಲ್ಲಿಯವರೆಗೆ ಆಡಿದ 16 ಪಂದ್ಯಗಳಲ್ಲಿ 60.79 ರ ಅತ್ಯಂತ ಅಪಾಯಕಾರಿ ಸರಾಸರಿ ಮತ್ತು 156.43 ರ ಸ್ಟ್ರೈಕ್ ರೇಟ್‌ ನಲ್ಲಿ 851 ರನ್ ಗಳಿಸಿದ್ದಾರೆ. ಅತ್ಯುತ್ತಮ ಶತಕದ ಇನ್ನಿಂಗ್ಸ್‌ನ ಆಧಾರದ ಮೇಲೆ ಮಾತ್ರ ಗುಜರಾತ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News