Virat Kohli : ಇನ್‌ಸ್ಟಾಗ್ರಾಮ್‌ನಲ್ಲಿ 250 ಮಿಲಿಯನ್‌ ಫಾಲೋವರ್ಸ್‌;ದಾಖಲೆ ಬರೆದ ವಿಕೆ

Virat Kohli : ಕಿಂಗ್‌ ಅಂತಾನೇ ಕರೆಸಿಕೊಳ್ಳೊ ವಿರಾಟ್‌ ಕೊಹ್ಲಿ ಅವರು ಇತ್ತೀಚೆಗೆ ಮುಟ್ಟಿದ್ದೆಲ್ಲವು ಚಿನ್ನವಾಗುತ್ತಿದೆ. ಐಪಿಲ್‌ನಲ್ಲಿ ಭರ್ಜರಿ ಫಾರ್ಮ್‌ ಪ್ರದರ್ಶಿಸಿ ಟೀಕೆಗಳಿಗೆ ಸರಿಯಾಗಿ ಉತ್ತರ ನೀಡಿದ್ದ ಟೀಮ್‌ ಇಂಡಿಯಾದ ಮಾಜಿ ನಾಯಕ ಇವರು. ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆಯಲ್ಲಿ ದಾಖಲೆ ಬರೆದಿದ್ದಾರೆ.  

Written by - Zee Kannada News Desk | Last Updated : May 26, 2023, 09:02 AM IST
  • ವಿರಾಟ್‌ ಕೊಹ್ಲಿ ಇನ್‌ಸ್ಟಾಗ್ರಾಮ್‌ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಫಾಲೋವರ್ಸ್‌ಗಳ ಸಂಖ್ಯೆ ಇದೀಗ 250 ಮಿಲಿಯನ್‌ ದಾಟಿದೆ
  • 25 ಕೋಟಿ ಫಾಲೋವರ್ಸ್‌ ಹೊಂದಿದ ಏಷ್ಯಾದ ಮೊದಲ ಮತ್ತು ಜಗತ್ತಿನ ಮೂರನೇ ಕ್ರೀಡಾಪಟು
  • ಕ್ರಿಸ್ಟಯಾನೋ ರೊನಾಲ್ಡೊ ಹಾಗೂ ಲಿಯೋನೆಲ್‌ ಮೆಸ್ಸಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.
Virat Kohli : ಇನ್‌ಸ್ಟಾಗ್ರಾಮ್‌ನಲ್ಲಿ 250 ಮಿಲಿಯನ್‌ ಫಾಲೋವರ್ಸ್‌;ದಾಖಲೆ ಬರೆದ ವಿಕೆ  title=

Virat kohli Instagramn Followers : ವಿರಾಟ್‌ ಕೊಹ್ಲಿ ಇನ್‌ಸ್ಟಾಗ್ರಾಮ್‌ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಫಾಲೋವರ್ಸ್‌ಗಳ ಸಂಖ್ಯೆ ಇದೀಗ 250 ಮಿಲಿಯನ್‌ ದಾಟಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳ ಅಪ್ಲಕೇಶನ್‌ನಲ್ಲಿ 25 ಕೋಟಿ ಫಾಲೋವರ್ಸ್‌ ಹೊಂದಿದ ಏಷ್ಯಾದ ಮೊದಲ ಮತ್ತು ಜಗತ್ತಿನ ಮೂರನೇ ಕ್ರೀಡಾಪಟು ಎಂಬ ಹರಿಮೆಯ ಜೊತೆಗೆ ಗರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆದರೆ ಅದೇ ಟೀಮ್‌ ಇಂಡಿಯಾದ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ 40.4 ಮಿಲಿಯನ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ 42.4 ಮಿಲಿಯನ್‌ ಫಾಲೋವರ್ಸ್ ಹೊಂದಿದ್ದು, ಕಿಂಗ್‌ ಕೊಹ್ಲಿ ಇವರನ್ನು ಹಿಂದಿಕ್ಕಿದ್ದಾರೆ. ಅತೀ ಹೆಚ್ಚು ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಹೊಂದಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಫುಟ್ಬಾಲ್‌ ದಿಗ್ಗಜರಾದ ಕ್ರಿಸ್ಟಯಾನೋ ರೊನಾಲ್ಡೊ ಹಾಗೂ ಲಿಯೋನೆಲ್‌ ಮೆಸ್ಸಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ-IPL 2023: ಗುಜರಾತ್ ಟೈಟಾನ್ಸ್ ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್

ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ 585 ಫಾಲೋವರ್ಸ್‌ ಹೊಂದಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಅದೇ ರೀತಿ 464 ಮಿಲಿಯನ್‌ ಫಾಲೋವರ್ಸ್‌ ಹೊಂದಿದ ಲಿಯೋನೆಲ್‌ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ವಿರಾಟ್‌ ಕೊಹ್ಲಿ ಅತಿಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಹೊಂದಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಇಲ್ಲಿಯವರೆಗೂ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 1,601 ಪೋಸ್ಟ್ ಗಳನ್ನು ಮಾಡಿದ್ದಾರೆ. ಸಚಿನ್‌ ತೆಂಡೂಲ್ಕರ್‌, ಎಬಿ ಡಿವಿಲಿಯರ್ಸ್‌ ಹಾಗೂ ರೋನಾಲ್ಡೊ ಸೇರಿದಂತೆ 278 ಜನರನ್ನು ಮಾತ್ರ ಕೊಹ್ಲಿ ಫಾಲೋ ಮಾಡುತ್ತಿದ್ದಾರೆ. ಕಿಂಗ್‌ ಕೊಹ್ಲಿ ಅವರು ತಮ್ಮ ಪ್ರತಿ ಜಾಹೀರಾತಿನ ಪೋಸ್ಟ್‌ಗೆ ಬರೋಬ್ಬರಿ 8 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎಂದು ಹಾಪ್ಪರ್‌ ಎಚ್‌ಕ್ಯೂ ಸೋಷಿಯಲ್‌ ಎನ್ನುವ ಸಂಸ್ಥೆ ಈ ಹಿಂದೆ ವರದಿ ಮೂಲಕ ತಿಳಿಸಿತ್ತು. 

ಇದನ್ನೂ ಓದಿ-ʼವಿಶ್ವದ ನಂ.1 ಜಾವೆಲಿನ್‌ ಪಟುʼ ಸ್ಥಾನಕ್ಕೇರಿದ ಚಿನ್ನದ ಹುಡುಗ ʼನೀರಜ್‌ ಚೋಪ್ರಾʼ..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News