Irfan Pathan: ಭಾರತದ ಗೆಲುವಿಗೆ ಈ ಆಟಗಾರ ಫಾರ್ಮ್ಗೆ ಬರುವುದು ಬಹಳ ಮುಖ್ಯ: ಇರ್ಫಾನ್ ಪಠಾಣ್ ಹೇಳಿದ್ದು ಯಾರಿಗೆ ಗೊತ್ತಾ?

IND vs SL 1st ODI Match: ಗುವಾಹಟಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಸಜ್ಜಾಗಿದೆ. ಈ ಅನುಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳುವುದು ತಂಡಕ್ಕೆ ಬಹಳ ಮುಖ್ಯ ಎಂದು ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.

Written by - Bhavishya Shetty | Last Updated : Jan 10, 2023, 10:43 AM IST
    • ಶ್ರೀಲಂಕಾ ಸರಣಿಯಿಂದಲೇ ಭಾರತ ತಂಡ ಏಕದಿನ ವಿಶ್ವಕಪ್‌ಗೆ ತಯಾರಿ ಆರಂಭಿಸಲಿದೆ
    • ಭಾರತ ತಂಡ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ
    • ಭಾರತ ಇದುವರೆಗೆ ಎರಡು ಬಾರಿ ಮಾತ್ರ ವಿಶ್ವಕಪ್ ಗೆದ್ದಿದೆ
Irfan Pathan: ಭಾರತದ ಗೆಲುವಿಗೆ ಈ ಆಟಗಾರ ಫಾರ್ಮ್ಗೆ ಬರುವುದು ಬಹಳ ಮುಖ್ಯ: ಇರ್ಫಾನ್ ಪಠಾಣ್ ಹೇಳಿದ್ದು ಯಾರಿಗೆ ಗೊತ್ತಾ? title=
Irfan Pathan

IND vs SL 1st ODI Match: ಭಾರತ ತಂಡ ಇಂದು (ಜನವರಿ 10) ಶ್ರೀಲಂಕಾ ವಿರುದ್ಧದ ಮೂರು ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಶ್ರೀಲಂಕಾ ಸರಣಿಯಿಂದಲೇ ಭಾರತ ತಂಡ ಏಕದಿನ ವಿಶ್ವಕಪ್‌ಗೆ ತಯಾರಿ ಆರಂಭಿಸಲಿದೆ. ಭಾರತ ಇದುವರೆಗೆ ಎರಡು ಬಾರಿ ಮಾತ್ರ ವಿಶ್ವಕಪ್ ಗೆದ್ದಿದೆ. ಮೊದಲನೆಯದು 1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಮತ್ತು ಎರಡನೆಯದು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ. ಅಂದಿನಿಂದ ಟೀಂ ಇಂಡಿಯಾ ಈ ಟ್ರೋಫಿಯಿಂದ ವಂಚಿತವಾಗಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಗೆಲ್ಲಲು ಫಾರ್ಮ್‌ನಲ್ಲಿರುವುದು ಬಹಳ ಮುಖ್ಯ.

ಇದನ್ನೂ ಓದಿ: Indian Railways: ಮಹಿಳೆಯರು ಮಾತ್ರ ಕೆಲಸ ಮಾಡುವ ಭಾರತದ ರೈಲು ನಿಲ್ದಾಣ ಯಾವುದು ಗೊತ್ತಾ?

“ರೋಹಿತ್ ಫಾರ್ಮ್ ಗೆ ಬರುವುದು ಬಹಳ ಮುಖ್ಯ”

ಗುವಾಹಟಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಸಜ್ಜಾಗಿದೆ. ಈ ಅನುಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳುವುದು ತಂಡಕ್ಕೆ ಬಹಳ ಮುಖ್ಯ ಎಂದು ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ 'ಫಾಲೋ ದಿ ಬ್ಲೂಸ್' ಕಾರ್ಯಕ್ರಮದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. “ಭಾರತಕ್ಕಾಗಿ ವೈಟ್-ಬಾಲ್ ಕ್ರಿಕೆಟಿಗನಾಗಿ ರೋಹಿತ್ ಶರ್ಮಾ ಕಳೆದ ಕೆಲವು ವರ್ಷಗಳಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ಅವರು ಈ ಫಾರ್ಮ್ ಅನ್ನು ಮುಂದುವರಿಸಬೇಕಾಗಿದೆ. ಅವರು ಫಾರ್ಮ್‌ಗೆ ಮರಳುವುದರ ಜೊತೆಗೆ ಫಿಟ್‌ನೆಸ್ ಒಂದು ಸವಾಲಾಗಿದೆ. ಆದರೆ ಅವರು ಈ ಸವಾಲುಗಳನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Team India: ಟೀಂ ಇಂಡಿಯಾ ಸೇರಿದ 4 ವೇಗಿಗಳು: ಇರೋದು ಮೂರು ಸ್ಥಾನ… ಯಾರಿಗೆ ಸಿಗುತ್ತೆ ಅವಕಾಶ?

ರೋಹಿತ್ ಶರ್ಮಾ ವಿಶ್ವದ ಅಪಾಯಕಾರಿ ಆರಂಭಿಕರ ಪಟ್ಟಿಯಲ್ಲಿದ್ದಾರೆ. ಆದರೆ ಕೆಲ ದಿನಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. 2019 ರಲ್ಲಿ ನಡೆದ ಕೊನೆಯ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ 18 ಇನ್ನಿಂಗ್ಸ್‌ಗಳಲ್ಲಿ 44 ಸರಾಸರಿ ಮತ್ತು 96 ಸ್ಟ್ರೈಕ್ ರೇಟ್‌ನಲ್ಲಿ 745 ರನ್ ಗಳಿಸಿದ್ದರು. ಇನ್ನು ಗಾಯದಿಂದ ಹಿಂತಿರುಗುವುದು ಎಂದಿಗೂ ಸುಲಭವಲ್ಲ ಮತ್ತು ರೋಹಿತ್ ಶರ್ಮಾಗೆ ಪುನರಾಗಮನ ಮಾಡುವುದು ದೊಡ್ಡ ಸವಾಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News