ಚಾಂಪಿಯನ್ ಆಟಗಾರನ ಹೆಗ್ಗುರುತು ಎಂದು ಸಚಿನ್ ಹೇಳಿದ್ದು ಯಾರಿಗೆ ಗೊತ್ತೇ?

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ನಂತರ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಭಾರತ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

Last Updated : Jan 3, 2021, 09:38 PM IST
  • ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ನಂತರ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಭಾರತ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
  • ಸಿರಾಜ್ ಕೂಡ ಹೇಗೆ ಬೌಲ್ ಮಾಡಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಅವರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆಂದು ನನಗೆ ಕಾಣಿಸಲಿಲ್ಲ.
 ಚಾಂಪಿಯನ್ ಆಟಗಾರನ ಹೆಗ್ಗುರುತು ಎಂದು ಸಚಿನ್ ಹೇಳಿದ್ದು ಯಾರಿಗೆ ಗೊತ್ತೇ? title=
file photo

ನವದೆಹಲಿ: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ನಂತರ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಭಾರತ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Australia vs India, 1st Test: ರಾತ್ರಿ ಕಾವಲುಗಾರನಾದ ಬುಮ್ರಾ, ಹೇಗಿತ್ತು ಉಳಿದ ಆಟಗಾರ ಪ್ರತಿಕ್ರಿಯೆ...!

ಮೊದಲ ಇನಿಂಗ್ಸ್ ನಲ್ಲಿನ ಸೋಲಿನ ನಂತರ ಭಾರತ ತಂಡವು ಆಸಿಸ್ ಗೆ ತಕ್ಕ ಉತ್ತರವನ್ನು ನೀಡಿತು.ಈ ಸಂದರ್ಭದಲ್ಲಿ ಸಚಿನ್ ಅವರು ರಹಾನೆ ಅವರನ್ನು ಹೊಗಳುವುದರ ಜೊತೆಗೆ ಜಸ್ಪ್ರೀತ್ ಬುಮ್ರಾ (Jasprit Bumrah) ಕುರಿತಾಗಿಯೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವೇಗದ ಬೌಲಿಂಗ್ ವಿಭಾಗದಲ್ಲಿ, ದಾಳಿಯ ನಾಯಕನಾಗಿ ಬುಮ್ರಾ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ ಮತ್ತು  ತಂಡದ ಪ್ರಭಾವ ಕುಸಿದಾಗಲೆಲ್ಲಾ ಅವರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಅದು ಚಾಂಪಿಯನ್ ಬೌಲರ್ ನ ಹೆಗ್ಗುರುತು ಎಂದು ಸಚಿನ್ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ: Australia vs India, 2nd Test: ಜಸ್ಪ್ರೀತ್ ಬುಮ್ರಾ, ಆಶ್ವಿನ್ ದಾಳಿಗೆ ತತ್ತರಿಸಿದ ಆಸಿಸ್ ಪಡೆ,195ಕ್ಕೆ ಆಲೌಟ್

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 195 ರನ್‌ಗಳಿಗೆ ಆಲೌಟ್ ಆಗಿದ್ದಾಗ ಬುಮ್ರಾ 56 ಕ್ಕೆ 4 ವಿಕೆಟ್ ಪಡೆದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್‌ರ ಪ್ರಮುಖ ಒಂದು ಸೇರಿದಂತೆ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರಿಂದಾಗಿ ಭಾರತಕ್ಕೆ ಅನುಕೂಲವಾಯಿತು.

ಇದೇ ವೇಳೆ ಸಿರಾಜ್ ಕುರಿತಾಗಿ ಪ್ರತಿಕ್ರಿಯಿಸಿದ ಸಚಿನ್ ಸಿರಾಜ್ ಕೂಡ ಹೇಗೆ ಬೌಲ್ ಮಾಡಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಅವರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆಂದು ನನಗೆ ಕಾಣಿಸಲಿಲ್ಲ ಎಂದರು.ಮೊಹಮ್ಮದ್ ಸಿರಾಜ್‌ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 40 ಕ್ಕೆ 2 ಮತ್ತು 37 ಕ್ಕೆ 3 ವಿಕೆಟ್‌ಗಳನ್ನು ಪಡೆದಿದ್ದರು.

Trending News