ಅಂದು ಶೂಟಿಂಗ್‌ ತ್ಯಜಿಸಲು ನಿರ್ಧರಿಸಿದ್ದಾಕೆ ಇಂದು ಫೈನಲ್‌ʼಗೆ ಎಂಟ್ರಿ: ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್‌ ಚಿನ್ನದ ಪದಕದ ಆಟ ನಾಳೆ ಎಷ್ಟೊತ್ತಿಗೆ?

Manu Bhaker: ಭಾಕರ್ ಮೊದಲ ಸಿರೀಸ್‌ʼನಲ್ಲಿ 97, ಎರಡನೇಯಲ್ಲಿ 97, ಮೂರನೇಯಲ್ಲಿ 98, ನಾಲ್ಕನೇಯಲ್ಲಿ 96, ಐದನೇಯಲ್ಲಿ 96 ಮತ್ತು ಆರನೇ ಸಿರೀಸ್ʼನಲ್ಲಿ 96 ಅಂಕಗಳನ್ನು ಗಳಿಸಿದ್ದರು. ಇನ್ನು ಫೈನಲ್ ಪಂದ್ಯವು ನಾಳೆ  ಅಂದರೆ ಜುಲೈ 28 ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. 

Written by - Bhavishya Shetty | Last Updated : Jul 27, 2024, 07:57 PM IST
    • ಪ್ಯಾರಿಸ್ ಒಲಿಂಪಿಕ್ಸ್ 2024ರ ಮೊದಲ ದಿನ ಶೂಟಿಂಗ್‌ʼನಲ್ಲಿ ಭಾರತಕ್ಕೆ ಶುಭಸುದ್ದಿ
    • ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮನು ಭಾಕರ್
    • 580 ಪಾಯಿಂಟ್‌ʼಗಳೊಂದಿಗೆ ಮೂರನೇ ಸ್ಥಾನ ಪಡೆದು ಫೈನಲ್‌ ಪ್ರವೇಶ
ಅಂದು ಶೂಟಿಂಗ್‌ ತ್ಯಜಿಸಲು ನಿರ್ಧರಿಸಿದ್ದಾಕೆ ಇಂದು ಫೈನಲ್‌ʼಗೆ ಎಂಟ್ರಿ: ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್‌ ಚಿನ್ನದ ಪದಕದ ಆಟ ನಾಳೆ ಎಷ್ಟೊತ್ತಿಗೆ? title=
File Photo

Manu Bhaker: ಪ್ಯಾರಿಸ್ ಒಲಿಂಪಿಕ್ಸ್ 2024ರ ಮೊದಲ ದಿನ (ಜುಲೈ 27) ಶೂಟಿಂಗ್‌ʼನಲ್ಲಿ ಭಾರತಕ್ಕೆ ಶುಭಸುದ್ದಿ ಸಿಕ್ಕಿದೆ. ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. 60 ಶಾಟ್‌ʼಗಳ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಪಾಯಿಂಟ್‌ʼಗಳೊಂದಿಗೆ ಮೂರನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ಮನೆಯ ಮುಂದೆ ಈ ನೀರನ್ನು ಸಿಂಪಡಿಸಿದರೆ ಸಾಕು... ಒಂದೇ ಒಂದು ಹಾವು ಕೂಡ ಅತ್ತಕಡೆ ತಲೆಹಾಕಲ್ಲ!

ಭಾಕರ್ ಮೊದಲ ಸಿರೀಸ್‌ʼನಲ್ಲಿ 97, ಎರಡನೇಯಲ್ಲಿ 97, ಮೂರನೇಯಲ್ಲಿ 98, ನಾಲ್ಕನೇಯಲ್ಲಿ 96, ಐದನೇಯಲ್ಲಿ 96 ಮತ್ತು ಆರನೇ ಸಿರೀಸ್ʼನಲ್ಲಿ 96 ಅಂಕಗಳನ್ನು ಗಳಿಸಿದ್ದರು. ಇನ್ನು ಫೈನಲ್ ಪಂದ್ಯವು ನಾಳೆ  ಅಂದರೆ ಜುಲೈ 28 ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. 

ಅಂದಹಾಗೆ ಕಳೆದ ಬಾರಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ʼನಲ್ಲಿ ಮನು ಭಾಕರ್‌, ವಿಶೇಷವಾದ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ, ಬೇಸರಗೊಂಡಿದ್ದ ಮನು, ಶೂಟಿಂಗ್‌ ತ್ಯಜಿಸಲು ಮುಂದಾಗಿದ್ದರು. 

"ಇದು ನನ್ನ ಮೊದಲ ಒಲಿಂಪಿಕ್ಸ್​​​. ಸೋಲುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ತುಂಬಾ ಚಿಂತೆ ಕಾಡುತ್ತಿತ್ತು. ಶೂಟಿಂಗ್ ತ್ಯಜಿಸುವ ನಿರ್ಧಾರಕ್ಕೂ ಬಂದಿದ್ದೆ" ಎಂದು ಟೊಕಿಯೊ ಒಲಿಂಪಿಕ್ಸ್​​ʼನಲ್ಲಿ ಸೋತ ಬಳಿಕ ಹೇಳಿಕೆ ನೀಡಿದ್ದರು. 

ಇದನ್ನೂ ಓದಿ: ಕೊನೆಗೂ ಕೂಡಿಬಂತಾ ಸಲ್ಮಾನ್‌ ಖಾನ್‌ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ...

ಇಂದು ನಡೆದ ಅರ್ಹತಾ ಸುತ್ತಿನಲ್ಲಿ ಹಂಗೇರಿಯ ವೆರೋನಿಕಾ ಮೇಜರ್ (582) ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕೊರಿಯಾ ದಓ ಯೆ ಜಿನ್ (582) ಎರಡನೇ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಮನು ಇದ್ದು, 580 ಅಂಕ ಪಡೆದುಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News