ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಮಿಥಾಲಿ ರಾಜ್

ಭಾರತದ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರು ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ ಅವರ ದಾಖಲೆಯನ್ನು ಅಳಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಹೊಂದಿದ್ದಾರೆ.

Written by - Zee Kannada News Desk | Last Updated : Jul 4, 2021, 01:51 AM IST
  • ಭಾರತದ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರು ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ ಅವರ ದಾಖಲೆಯನ್ನು ಅಳಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಹೊಂದಿದ್ದಾರೆ.
 ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಮಿಥಾಲಿ ರಾಜ್ title=
file photo

ನವದೆಹಲಿ: ಭಾರತದ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರು ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ ಅವರ ದಾಖಲೆಯನ್ನು ಅಳಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಖೇಲ್ ರತ್ನಾ ಪುರಸ್ಕಾರಕ್ಕೆ ಆರ್.ಅಶ್ವಿನ್, ಮಿಥಾಲಿ ರಾಜ್ ಹೆಸರು ಶಿಫಾರಸ್ಸು

ವೋರ್ಸೆಸ್ಟರ್‌ನಲ್ಲಿ ಶನಿವಾರ ನಡೆದ ಇಂಗ್ಲೆಂಡ್ ಮಹಿಳಾ ಮತ್ತು ಭಾರತ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ 
(Mithali Raj) ಅವರು ಎಡ್ವರ್ಡ್ ಅವರ 10,273 ರನ್ ಗಳ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.ಮಿಥಾಲಿ ರಾಜ್‌ಗೆ 10,273 ರನ್‌ಗಳ ಮೊತ್ತವನ್ನು ದಾಟಲು ಕೇವಲ 12 ರನ್‌ಗಳ ಅಗತ್ಯವಿತ್ತು.ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಕ್ರಿಕೆಟ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಕೂಡ ಅವರ ಹೆಸರಿನಲ್ಲಿದೆ.

ಇದನ್ನೂ ಓದಿ: IND W vs ENG W: ಎರಡನೇ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತವನ್ನು 5 ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್

ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿರುವ ಮಿಥಾಲಿ ರಾಜ್ ಅವರು ಏಕದಿನ ಸರಣಿಯ ಫೈನಲ್‌ನಲ್ಲಿ ಭಾರತದ 220 ರನ್‌ಗಳ ಗುರಿ ಮುಟ್ಟುವ ಸಂದರ್ಭದಲ್ಲಿ ಈ ಸಾಧನೆಗೈದಿದ್ದಾರೆ.

ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್ ಗಳಿಸಿದವರು.

ಮಿಥಾಲಿ ರಾಜ್ - 317 ಪಂದ್ಯಗಳಲ್ಲಿ 10,277  ರನ್

ಷಾರ್ಲೆಟ್ ಎಡ್ವರ್ಡ್ಸ್ - 309 ಪಂದ್ಯಗಳಲ್ಲಿ 10,273 ರನ್

ಸುಜೀ ಬೇಟ್ಸ್ - 247 ಪಂದ್ಯಗಳಲ್ಲಿ 7849 ರನ್

ಸ್ಟೆಫಾನಿ ಟೇಲರ್ - 256 ಪಂದ್ಯಗಳಲ್ಲಿ 7834 ರನ್

ಮೆಗ್ ಲ್ಯಾನಿಂಗ್ - 199 ಪಂದ್ಯಗಳಲ್ಲಿ 7024 ರನ್

ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿ ಎನ್ನುವ ದಾಖಲೆಯನ್ನು ಹೊಂದಿದ್ದಾರೆ. 2020 ರಲ್ಲಿ, ಅವರು ದಶಕದ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದರು. ಅವರು 2017 ರಲ್ಲಿ ನಡೆದ ಮಹಿಳಾ ವಿಶ್ವಕಪ್‌ನ ಫೈನಲ್‌ಗೆ ತಂಡವನ್ನು ಮುನ್ನಡೆಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News