IND vs WI: ವಿಂಡೀಸ್ ವಿರುದ್ಧ 5 ವಿಕೆಟ್ ಕಿತ್ತು 34 ವರ್ಷಗಳಷ್ಟು ಹಳೆಯ ವಿಶ್ವದಾಖಲೆ ಮುರಿದ ಮೊಹಮ್ಮದ್ ಸಿರಾಜ್!

IND vs WI 2nd Test Mohammed Siraj: ಪಂದ್ಯದ ನಂತರ ಸಿರಾಜ್ ಮಾತನಾಡಿ" ಮೊದಲನೆಯದಾಗಿ, ಈ ಪ್ರದರ್ಶನವು ನಿಜವಾಗಿಯೂ ಉತ್ತಮವಾಗಿದೆ. ಸರಳ ಯೋಜನೆಯನ್ನು ಕಾರ್ಯಗತಗೊಳಿಸಿ 5 ವಿಕೆಟ್ ಕಬಳಿಸಿದೆ.

Written by - Bhavishya Shetty | Last Updated : Jul 24, 2023, 02:41 PM IST
    • ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ 5 ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ.
    • ಮೊಹಮ್ಮದ್ ಸಿರಾಜ್ ಭಾರತದ ಅತ್ಯಂತ ಯಶಸ್ವಿ ಬೌಲರ್
    • 60 ರನ್ ನೀಡಿ 5 ವಿಕೆಟ್ ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ
IND vs WI: ವಿಂಡೀಸ್ ವಿರುದ್ಧ 5 ವಿಕೆಟ್ ಕಿತ್ತು 34 ವರ್ಷಗಳಷ್ಟು ಹಳೆಯ ವಿಶ್ವದಾಖಲೆ ಮುರಿದ ಮೊಹಮ್ಮದ್ ಸಿರಾಜ್! title=
Mohammed Siraj

IND vs WI 2nd Test Mohammed Siraj: ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯ ರೋಚಕ ತಿರುವಿನಲ್ಲಿದೆ. ಇನ್ನು ಮೊಹಮ್ಮದ್ ಸಿರಾಜ್ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, ಅವರು 60 ರನ್ ನೀಡಿ 5 ವಿಕೆಟ್ ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:  ವಿಶ್ವ ಕ್ರಿಕೆಟ್’ನಲ್ಲಿ ಅತೀ ದೊಡ್ಡ ಸಿಕ್ಸರ್ ಬಾರಿಸಿದವರು ಯಾರು ಗೊತ್ತಾ? ಈ ಪಟ್ಟಿಯಲ್ಲಿ ಭಾರತದ ಒಬ್ಬರಿಗೆ ಮಾತ್ರ ಸ್ಥಾನ

ಪಂದ್ಯದ ನಂತರ ಸಿರಾಜ್ ಮಾತನಾಡಿ" ಮೊದಲನೆಯದಾಗಿ, ಈ ಪ್ರದರ್ಶನವು ನಿಜವಾಗಿಯೂ ಉತ್ತಮವಾಗಿದೆ. ಸರಳ ಯೋಜನೆಯನ್ನು ಕಾರ್ಯಗತಗೊಳಿಸಿ 5 ವಿಕೆಟ್ ಕಬಳಿಸಿದೆ. ಆದರೆ ಈ ಪಿಚ್ ಹೆಚ್ಚೇನು ಮಾಡಲಿಲ್ಲ. ತುಂಬಾ ಫ್ಲಾಟ್ ಆಗಿದ್ದರೂ ಐದು ವಿಕೆಟ್ ಕಬಳಿಸಿದ್ದೇನೆ. ಇದು ಸುಲಭದ ಮಾತಲ್ಲ. ನಾಳೆಯಿಂದ ಹಳೆಯ ಬಾಲ್ ನೊಂದಿಗೆ ಆಟ ಪ್ರಾರಂಭಿಸುತ್ತೇವೆ. ಸರಳವಾದ ಯೋಜನೆಗಳನ್ನು ಮಾಡಿ, ಹೆಚ್ಚು ರನ್ ನೀಡದಂತೆ ಕೆಲಸ ಮಾಡುತ್ತೇವೆ” ಎಂದು ತಮ್ಮ ಈ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟರು.

ಮೊಹಮ್ಮದ್ ಸಿರಾಜ್ ದಾಖಲೆ:

ಮೊಹಮ್ಮದ್ ಸಿರಾಜ್ ಎರಡನೇ ಇನ್ನಿಂಗ್ಸ್‌ನಲ್ಲಿ 5 ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ 5 ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ 34 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಿರಾಜ್ ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಜೋಶುವಾ ಡಿ ಸಿಲ್ವಾ, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್ ಮತ್ತು ಶಾನನ್ ಗೇಬ್ರಿಯಲ್ ಅವರನ್ನು ಔಟ್ ಮಾಡಿದ್ದರು. ಪೋರ್ಟ್ ಆಫ್ ಸ್ಪೇನ್‌ನ’ಲ್ಲಿ ನಡೆದ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಸಿರಾಜ್ ಪಾತ್ರರಾದರು. ಸಿರಾಜ್‌ಗಿಂತ ಮೊದಲು, 1989 ರಲ್ಲಿ, ಭಾರತದ ಮಾಜಿ ನಾಯಕ ಕಪಿಲ್ ದೇವ್ ಪೋರ್ಟ್ ಆಫ್ ಸ್ಪೇನ್‌ನಲ್ಲಿ 5 ವಿಕೆಟ್ ಪಡೆದ ಅಗ್ರ ಬೌಲರ್ ಆಗಿದ್ದರು. ಇದೀಗ ಮೊಹಮ್ಮದ್ ಸಿರಾಜ್ ಆ 35 ವರ್ಷಗಳ ಹಳೆಯ ದಾಖಲೆಯನ್ನು ಪುನರಾವರ್ತಿಸಿದ್ದಾರೆ.

ಇದನ್ನೂ ಓದಿ:  ಪಾಕಿಸ್ತಾನವನ್ನು ಸೋಲಿಸಲು ದಾವೂದ್ ಇಬ್ರಾಹಿಂನಿಂದ Team Indiaಗೆ ಬಂತು ಈ ಆಫರ್!

ಭಾರತಕ್ಕೆ ಗೆಲ್ಲಲು 8 ವಿಕೆಟ್‌ಗಳ ಅಗತ್ಯ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ರೋಚಕ ತಿರುವಿನಲ್ಲಿದೆ. ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಸದ್ಯ ಬಲಿಷ್ಠ ಸ್ಥಿತಿಯಲ್ಲಿದೆ. ಗೆಲುವಿಗೆ 365 ರನ್ ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 2 ವಿಕೆಟ್ ನಷ್ಟಕ್ಕೆ 76 ಸ್ಕೋರ್ ಮಾಡಿದ್ದು, ಕೆರಿಬಿಯನ್ ತಂಡಕ್ಕೆ 289 ರನ್ ಗಳ ಅವಶ್ಯಕತೆಯಿದೆ. ಪಂದ್ಯದ ಕೊನೆಯ ದಿನ ಭಾರತ 8 ವಿಕೆಟ್ ಪಡೆಯಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News