ಎಂ.ಎಸ್.ಧೋನಿ ಸದ್ದಿಲ್ಲದೆ ಆಟದಿಂದ ನಿವೃತ್ತರಾಗುತ್ತಾರೆ-ಸುನಿಲ್ ಗವಾಸ್ಕರ್

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗಾಗಿ ಭಾರತದ ತಂಡದಲ್ಲಿ ಎಂ.ಎಸ್ ಧೋನಿ ಸ್ಥಾನ ಪಡೆಯುವುದು ತುಂಬಾ ಕಷ್ಟಕರ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Last Updated : Mar 22, 2020, 12:10 AM IST
ಎಂ.ಎಸ್.ಧೋನಿ ಸದ್ದಿಲ್ಲದೆ ಆಟದಿಂದ ನಿವೃತ್ತರಾಗುತ್ತಾರೆ-ಸುನಿಲ್ ಗವಾಸ್ಕರ್ title=

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗಾಗಿ ಭಾರತದ ತಂಡದಲ್ಲಿ ಎಂ.ಎಸ್ ಧೋನಿ ಸ್ಥಾನ ಪಡೆಯುವುದು ತುಂಬಾ ಕಷ್ಟಕರ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ನಾನು ಖಂಡಿತವಾಗಿಯೂ ಭಾರತದ ವಿಶ್ವಕಪ್ ತಂಡದಲ್ಲಿ ಧೋನಿ ಅವರನ್ನು ನೋಡಲು ಬಯಸುತ್ತೇನೆ, ಆದರೆ ಅದು ಸಂಭವಿಸುವುದು ಹೆಚ್ಚು ಅಸಂಭವವಾಗಿದೆ" ಎಂದು ಗವಾಸ್ಕರ್ ತಿಳಿಸಿದರು. 'ಧೋನಿ ದೊಡ್ಡ ಘೋಷಣೆಗಳನ್ನು ಮಾಡುವ ವ್ಯಕ್ತಿಯಲ್ಲ, ಆದ್ದರಿಂದ ಅವರು ಸದ್ದಿಲ್ಲದೆ ಆಟದಿಂದ ನಿವೃತ್ತರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

38 ವರ್ಷದ ಧೋನಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದು 2019 ರ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ,ಆಗ ಭಾರತ ತಂಡವು ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿತ್ತು. ಅಂದಿನಿಂದ, ಅವರು ಇದುವರೆಗೆ ಯಾವುದೇ ಪಂದ್ಯಗಳನ್ನು ಆಡಿಲ್ಲ. ಇತ್ತೀಚಿಗಷ್ಟೇ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.

ಕರೋನವೈರಸ್ ನಿಂದಾಗಿ ಮಾರ್ಚ್ 29 ರಂದು ನಡೆಯಬೇಕಾಗಿದ್ದ ಐಪಿಎಲ್ 2020 ಆವೃತ್ತಿಯನ್ನು ಏಪ್ರಿಲ್ 15 ರವರೆಗೆ ಮುಂದೂಡಲಾಗಿದೆ. ಧೋನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ತರಬೇತಿ ನಡೆಸಿದರು. ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಮಧ್ಯದಲ್ಲೇ ತರಬೇತಿಯಿಂದ ಅವರು ನಿರ್ಗಮಿಸಬೇಕಾಗಿಬಂತು.

ಧೋನಿ ಆಯ್ಕೆ ಐಪಿಎಲ್‌ನಲ್ಲಿ ಅವರ ಸಾಧನೆಯ ಮೇಲೆ ಅವಲಂಬಿತವಾಗಿದೆ ಎಂದು ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚಿಗಷ್ಟೇ ತಿಳಿಸಿದ್ದರು.

Trending News