IPLನಲ್ಲಿ 5.5 ಕೋಟಿಗೆ ಮಾರಾಟವಾದ 29 ವರ್ಷದ ಈ ಆಟಗಾರ ಟೀಂ ಇಂಡಿಯಾಗೆ ಎಂಟ್ರಿ! ಬುಮ್ರಾ ಸ್ಥಾನಕ್ಕೆ ಈತನೇ ಬೆಸ್ಟ್…

Mukhesh Kumar: ಟೆಸ್ಟ್ ಸರಣಿಯಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಮುಖೇಶ್ ಕುಮಾರ್ ಅವರು ಕ್ರಿಕೆಟಿಗರಾಗುವವರೆಗೆ ತಮ್ಮ ಪ್ರಯಾಣದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ.

Written by - Bhavishya Shetty | Last Updated : Jul 4, 2023, 07:25 AM IST
    • ವೆಸ್ಟ್ ಇಂಡೀಸ್ ಭಾರತ ಪ್ರವಾಸಕ್ಕಾಗಿ ಟೀಮ್ ಇಂಡಿಯಾ ಬಾರ್ಬಡೋಸ್ ತಲುಪಿದೆ
    • ಈ ಟೆಸ್ಟ್ ಸರಣಿಯಲ್ಲಿ 29 ವರ್ಷದ ಆಟಗಾರನಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು.
    • ಈ ಆಟಗಾರ ಇತ್ತೀಚಿನ ದಿನಗಳಲ್ಲಿ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
IPLನಲ್ಲಿ 5.5 ಕೋಟಿಗೆ ಮಾರಾಟವಾದ 29 ವರ್ಷದ ಈ ಆಟಗಾರ ಟೀಂ ಇಂಡಿಯಾಗೆ ಎಂಟ್ರಿ! ಬುಮ್ರಾ ಸ್ಥಾನಕ್ಕೆ ಈತನೇ ಬೆಸ್ಟ್… title=
Mukesh Kumar

India vs West Indies Test Series: ಟೀಮ್ ಇಂಡಿಯಾದ 2023-25 ​​ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಚಕ್ರವು ವೆಸ್ಟ್ ಇಂಡೀಸ್ ವಿರುದ್ಧ 2-ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಜುಲೈ 12 ರಿಂದ ಡೊಮಿನಿಕಾದಲ್ಲಿ ಪ್ರಾರಂಭವಾಗುವ ಮುಂಬರುವ ವೆಸ್ಟ್ ಇಂಡೀಸ್ ಭಾರತ ಪ್ರವಾಸಕ್ಕಾಗಿ ಟೀಮ್ ಇಂಡಿಯಾ ಬಾರ್ಬಡೋಸ್ ತಲುಪಿದೆ. ಈ ಟೆಸ್ಟ್ ಸರಣಿಯಲ್ಲಿ 29 ವರ್ಷದ ಆಟಗಾರನಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು. ಈ ಆಟಗಾರ ಇತ್ತೀಚಿನ ದಿನಗಳಲ್ಲಿ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ: ODIನಲ್ಲಿ ದ್ವಿಶತಕ ಬಾರಿಸಿದ ಸ್ಫೋಟಕ ಬ್ಯಾಟ್ಸ್’ಮನ್’ಗಳು ಇವರೇ: ಭಾರತದ ಈ ಆಟಗಾರರೂ ಇದ್ದಾರೆ…

ಈ ಆಟಗಾರ ಟೀಂ ಇಂಡಿಯಾಗೆ ಪದಾರ್ಪಣೆ!

ಟೆಸ್ಟ್ ಸರಣಿಯಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಮುಖೇಶ್ ಕುಮಾರ್ ಅವರು ಕ್ರಿಕೆಟಿಗರಾಗುವವರೆಗೆ ತಮ್ಮ ಪ್ರಯಾಣದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಇದೀಗ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಿಹಾರದ ಗೋಪಾಲಗಂಜ್ ನಿವಾಸಿ ಮುಖೇಶ್ ಕುಮಾರ್ ಅವರ ಬದುಕು ಹೋರಾಟಗಳಿಂದ ತುಂಬಿತ್ತು ಎಂದರೆ ತಪ್ಪಾಗಲ್ಲ. ಆದರೆ ಆ ಸವಾಲುಗಳನ್ನು ಮೆಟ್ಟಿ ನಿಂತು ಟೀಂ ಇಂಡಿಯಾದವರೆಗೂ ಪ್ರಯಾಣಿಸಿದ್ದಾರೆ.

ದೇಶೀಯ ಕ್ರಿಕೆಟ್‌’ನಲ್ಲಿ ಅದ್ಭುತ ಸಾಧನೆ:

ಮುಖೇಶ್ ಕುಮಾರ್ ಇದುವರೆಗೆ 39 ಪ್ರಥಮ ದರ್ಜೆ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಲಿಸ್ಟ್-ಎಯಲ್ಲಿ 24 ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ-ಎ ವಿರುದ್ಧದ ಸರಣಿಯಲ್ಲಿ ಮುಕೇಶ್ ಕುಮಾರ್ ಭಾರತ ಎ ತಂಡದ ಪರ ಆಡಿದ್ದರು. ಆ ಸರಣಿಯಲ್ಲಿ ಅವರು 2 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದರು. ಜೊತೆಗೆ ಈ ವರ್ಷ ಅವರು ಐಪಿಎಲ್‌ ನಲ್ಲಿಯೂ ಆಡುವ ಅವಕಾಶವನ್ನು ಪಡೆದಿದ್ದರು.

ಇದನ್ನೂ ಓದಿ: Mahindra Best Selling Car: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ SUV

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತೀಯ ಟೆಸ್ಟ್ ತಂಡ:

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3COfPCC 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News