T20 World Cup : ಸ್ಕಾಟ್ಲೆಂಡ್ ತಂಡದ T20 ವಿಶ್ವಕಪ್ ಜರ್ಸಿಯಲ್ಲಿ ನಂದಿನಿ ಬ್ರಾಂಡ್ ಲೋಗೋ

Nandini logo on Scotland Jersey :ಕರ್ನಾಟಕದ ನಂದಿನಿ ಡೈರಿಯ ಲೋಗೋದೊಂದಿಗೆ ಸ್ಕಾಟ್ಲೆಂಡ್ ಜರ್ಸಿಯನ್ನು ಅನಾವರಣಗೊಳಿಸಲಾಗಿದೆ. ಬುಧವಾರ ಬಿಡುಗಡೆಯಾದ ಸ್ಕಾಟ್ಲೆಂಡ್ ಜರ್ಸಿಯ ತೋಳುಗಳಲ್ಲಿ ಕನ್ನಡದಲ್ಲಿ ನಂದಿನಿ  ಬ್ರಾಂಡ್ ಹೆಸರು ಮತ್ತು ಲೋಗೋವನ್ನು ಕಾಣಬಹುದು.

Written by - Ranjitha R K | Last Updated : May 16, 2024, 12:01 PM IST
  • T20 ವಿಶ್ವಕಪ್‌ಗಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಜರ್ಸಿಯನ್ನು ಅನಾವರಣ
  • ಜರ್ಸಿಯಲ್ಲಿ ಕರ್ನಾಟಕದ ನಂದಿನಿ ಡೈರಿಯ ಲೋಗೋ
  • ಜರ್ಸಿಯ ತೋಳುಗಳಲ್ಲಿ ನಂದಿನಿ ಬ್ರಾಂಡ್ ಹೆಸರು ಮತ್ತು ಲೋಗೋ
T20 World Cup : ಸ್ಕಾಟ್ಲೆಂಡ್ ತಂಡದ  T20 ವಿಶ್ವಕಪ್ ಜರ್ಸಿಯಲ್ಲಿ ನಂದಿನಿ ಬ್ರಾಂಡ್ ಲೋಗೋ  title=

Nandini logo on Scotland Jersey : ಮುಂಬರುವ T20 ವಿಶ್ವಕಪ್‌ಗಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಜರ್ಸಿಯನ್ನು ಅನಾವರಣಗೊಳಿಸಲಾಗಿದೆ.  ಕರ್ನಾಟಕದ ನಂದಿನಿ ಡೈರಿಯ ಲೋಗೋದೊಂದಿಗೆ ಈ ಜರ್ಸಿಯನ್ನು ಅನಾವರಣಗೊಳಿಸಲಾಗಿದೆ. ಬುಧವಾರ ಬಿಡುಗಡೆಯಾದ ಸ್ಕಾಟ್ಲೆಂಡ್ ಜರ್ಸಿಯ ತೋಳುಗಳಲ್ಲಿ ಕನ್ನಡದಲ್ಲಿ ನಂದಿನಿ  ಬ್ರಾಂಡ್ ಹೆಸರು ಮತ್ತು ಲೋಗೋವನ್ನು ಕಾಣಬಹುದು. ನಂದಿನಿ ಬ್ರಾಂಡ್ ಅನ್ನು ನಡೆಸುತ್ತಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸ್ಕಾಟ್ಲೆಂಡ್ ತಂಡದ ಅಧಿಕೃತ ಪ್ರಾಯೋಜಕರಾಗಿದ್ದಾರೆ. 

 ಈ ಬಗ್ಗೆ ಕ್ರಿಕೆಟ್ ಸ್ಕಾಟ್‌ಲ್ಯಾಂಡ್ X ಪೋಸ್ಟ್‌ನಲ್ಲಿ ಪೋಸ್ಟ್ ಮಾಡಿದೆ. " ಐಸಿಸಿ ಪುರುಷರ T20 ವಿಶ್ವಕಪ್ 2024 ನಲ್ಲಿ ಸ್ಕಾಟ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಕ್ರಿಕೆಟ್ ಸ್ಕಾಟ್‌ಲ್ಯಾಂಡ್ ಮತ್ತು ಕರ್ನಾಟಕ ಹಾಲು ಒಕ್ಕೂಟ ಸಂತಸ ವ್ಯಕ್ತಪಡಿಸುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. 

ಇದನ್ನೂ ಓದಿ : ರಾಹುಲ್ ಅದ್ಭುತ ಕ್ಯಾಚ್ ಕಂಡು ಎದ್ದು ನಿಂತು ಚಪ್ಪಾಳೆ ತಟ್ಟಿದ ಸಂಜೀವ್ ಗೋಯಂಕಾ! “ಇದಪ್ಪಾ ಕನ್ನಡಿಗನ ಛಲ ಅಂದ್ರೆ” ಅಂತಿದ್ದಾರೆ ಫ್ಯಾನ್ಸ್

ನಂದಿನಿ ಐರ್ಲೆಂಡ್ ಕ್ರಿಕೆಟ್ ತಂಡಕ್ಕೂ ಅಧಿಕೃತ ಪ್ರಾಯೋಜಕರಾಗಿದ್ದಾರೆ. ಈ ಹಿಂದೆ ಈ ಬಗ್ಗೆ ಮಾತನಾಡಿದ್ದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್, ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲಿದ್ದೇವೆ.ಪಂದ್ಯಗಳ ಸಮಯದಲ್ಲಿ ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದರು. 

ಇನ್ನು ‘Nandini Splash,’ ಮೂಲಕ ಎನರ್ಜಿ ಡ್ರಿಂಕ್ ಮಾರುಕಟ್ಟೆಗೂ ನಂದಿನಿ ಕಾಲಿಡುತ್ತಿದೆ.ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಎನೆರ್ಜಿ ಡ್ರಿಂಕ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಪಂದ್ಯಾವಳಿಯ ಸಮಯದಲ್ಲಿ ಈ ಎನರ್ಜಿ ಡ್ರಿಂಕ್ ಯುಎಸ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದು ಜಾಗತಿಕ ಬ್ರ್ಯಾಂಡ್ ಆಗಲಿದೆ ಎಂದು ಜಗದೀಶ್ ಹೇಳಿದ್ದಾರೆ.ಜೂನ್ 4 ರಿಂದ ಟಿ20 ಕ್ರಿಕೆಟ್ ವಿಶ್ವಕಪ್ ಆರಂಭವಾಗಲಿದೆ.

ಇದನ್ನೂ ಓದಿ : IPL : ಪೊರೆಲ್-ಹೋಪ್ ಸಿಕ್ಸ್ ಗಳ ಸಮಾಗಮ, ಲಕ್ನೋ ಗೆ 209ರನ್ ಗಳ ಗೆಲುವಿನ ಗುರಿ ನೀಡಿದ ಡೆಲ್ಲಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News