ಸಾವಿರ ಪಟ್ಟು ಹೆಚ್ಚಾದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯ..!

ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಬ್ರಾಂಡ್ ಎಂಡಾರ್ಸ್‌ಮೆಂಟ್ ಶುಲ್ಕಗಳು ಈಗ ವರ್ಷಕ್ಕೆ ಸುಮಾರು 2.5 ಕೋಟಿ ರೂ. ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

Written by - Puttaraj K Alur | Last Updated : Sep 7, 2021, 10:21 AM IST
  • ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಬಳಿಕ ಸಾವಿರಪಟ್ಟು ಹೆಚ್ಚಾದ ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯ
  • ಆಟೋಮೊಬೈಲ್ ಕಂಪನಿಗಳು ಮತ್ತು ಸಿದ್ಧ ಉಡುಪುಗಳ ಬ್ರಾಂಡ್‌ನೊಂದಿಗೆ ಐದಾರು ಒಪ್ಪಂದಗಳಿಗೆ ಸಹಿ
  • ಗೋಲ್ಡನ್ ಬಾಯ್ ನೀರಜ್ ಬ್ರಾಂಡ್ ಎಂಡಾರ್ಸ್‌ಮೆಂಟ್ ಶುಲ್ಕಗಳು ವರ್ಷಕ್ಕೆ 2.5 ಕೋಟಿ ರೂ. ಆಗಲಿದೆ
ಸಾವಿರ ಪಟ್ಟು ಹೆಚ್ಚಾದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯ..! title=
ಸಾವಿರಪಟ್ಟು ಹೆಚ್ಚಾದ ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯ (Photo Courtesy: @Zee News)

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ(Tokyo Olympics 2020)ದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ನೀರಜ್ ಚೋಪ್ರಾ(Neeraj Chopra) ಬ್ರಾಂಡ್ ಮೌಲ್ಯವು ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಕಳೆದ ತಿಂಗಳು ಟೋಕಿಯೊದಲ್ಲಿ ಮುಕ್ತಾಯವಾದ ಒಲಿಂಪಿಕ್ಸ್ ನಲ್ಲಿ 87.58 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡು ಐತಿಹಾಸಿಕ ದಾಖಲೆ ಬರೆದಿದ್ದರು. ಟೋಕಿಯೊದಿಂದ ಮರಳಿ ಬಂದ ನಂತರ ಗೋಲ್ಡನ್ ಬಾಯ್ ಬ್ರಾಂಡ್ ಮೌಲ್ಯವು ಶೇ.1000 ರಷ್ಟು ಏರಿಕೆಯಾಗಿದೆ.   

ನೀರಜ್ ಚೋಪ್ರಾ(Neeraj Chopra)ರ ಸಾರ್ವಜನಿಕ ಸಂಪರ್ಕ ಖಾತೆ ನಿರ್ವಹಿಸುವ ಹಾಗೂ ಭಾರತೀಯ ಜಾವೆಲಿನ್ ತಾರೆಯನ್ನು ಪ್ರತಿನಿಧಿಸುವ ಜೆಎಸ್‌ಡಬ್ಲ್ಯೂ(JSW) ಪ್ರಕಾರ, ಭಾರತೀಯ ತಾರೆಯ ಅನುಮೋದನೆ ಶುಲ್ಕ(Endorsement Fees)ವು ಈಗ ಕನಿಷ್ಠ 10 ಪಟ್ಟು ಹೆಚ್ಚಾಗಿದೆಯಂತೆ. ‘ನೀರಜ್ ಅವರ ಬ್ರ್ಯಾಂಡ್ ಮೌಲ್ಯ ಇಷ್ಟು ಹೆಚ್ಚಾಗಲು ಕಾರಣ ಕ್ರಿಕೆಟ್ ಹೊರತಾದ ಅವರ ಕ್ರೀಡಾ ಸಾಧನೆಗಳೇ ಕಾರಣ. ಇದಲ್ಲದೇ ಮುಂದಿನ ಕೆಲವು ವಾರಗಳಲ್ಲಿ ಅವರು ಐಷಾರಾಮಿ ಆಟೋಮೊಬೈಲ್ ಕಂಪನಿಗಳು ಮತ್ತು ಸಿದ್ಧ ಉಡುಪುಗಳ ಬ್ರಾಂಡ್‌ನೊಂದಿಗೆ ಐದಾರು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ’ ಎಂದು ಜೆಎಸ್‌ಡಬ್ಲ್ಯೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Richest Indian Cricketer: ವಿರಾಟ್,ಧೋನಿ ಅಲ್ಲ ಈ ಕ್ರಿಕೆಟಿಗ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ, ಒಂದೂ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ

ನೀರಜ್ ಚೋಪ್ರಾ ಈಗಾಗಲೇ ಬೈಜುಸ್(Byju’s), ಟಾಟಾ AIA ಲೈಫ್ ಇನ್ಶೂರೆನ್ಸ್(Tata AIA Life Insurance) ಮತ್ತು ಟಾಪ್ ಫಾರ್ಮಾಸ್ಯುಟಿಕಲ್ ಕಂಪನಿ, ಎಕ್ಸಾನ್ ಮೊಬೈಲ್(Exon Mobile) ಮತ್ತು ಮಸಲ್ ಬ್ಲೇಜ್(Muscle Blaze)ಜೊತೆಗೆ ಬ್ರಾಂಡ್ ಅಂಬಾಸಿಡರ್ ಆಗಿ  ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಬ್ರಾಂಡ್ ಎಂಡಾರ್ಸ್‌ಮೆಂಟ್ ಶುಲ್ಕಗಳು ಈಗ ವರ್ಷಕ್ಕೆ ಸುಮಾರು 2.5 ಕೋಟಿ ರೂ. ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ಅಗ್ರ ಭಾರತೀಯ ಕ್ರಿಕೆಟಿಗರ ಸಾಲಿಗೆ ಸೇರಿಸುತ್ತದೆ. ಕೊಹ್ಲಿ, ಎಂ.ಎಸ್.ಧೋನಿ ವಾರ್ಷಿಕ 1 ರಿಂದ 5 ಕೋಟಿ ರೂ. ಗಳಿಸುತ್ತಾರೆ. ಅದರಂತೆ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್(KL Rahul) ವರ್ಷಕ್ಕೆ 50 ಲಕ್ಷ ರೂ.ನೀಂದ 1 ಕೋಟಿ ರೂ.ವರೆಗೆ ಗಳಿಸುತ್ತಾರೆ.

ಇದನ್ನೂ ಓದಿ: India vs England: ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಂಜಯ್ ಮಾಂಜ್ರೇಕರ್ ಹೇಳಿದ್ದೇನು ಗೊತ್ತಾ..?

ವಿವಿಧ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಅನೇಕ ಭಾರತೀಯ ಕ್ರೀಡಾಪಟುಗಳು, ಕ್ರಿಕೆಟಿಗರು ಕೋಟಿ ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಅವರ ಸಾಲಿಗೆ ಇದೀಗ ಗೋಲ್ಡನ್ ಬಾಯ್ ನೀರಜ್ ಕೂಡ ಸೇರಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಚಿನ್ನದ ಹುಡುಗನ ಬ್ರಾಂಡ್ ಮೌಲ್ಯ(Brand Value)ವು ಸಾವಿರ ಪಟ್ಟು ಹೆಚ್ಚಾಗಿರುವುದು ಅವರ ಸಾಧನೆಗೆ ಸಂದ ಪ್ರತಿಫಲವೇ ಸರಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News