ODI World Cup 2023: ಏಕದಿನ ವಿಶ್ವಕಪ್​ನಿಂದ ವೆಸ್ಟ್ ಇಂಡೀಸ್ ಔಟ್..!

ODI World Cup 2023: 182 ರನ್​ಗಳ ಸುಲಭ ಗುರಿ ಪಡೆದ ಸ್ಕಾಟ್ಲೆಂಡ್ 43.3 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿ 7 ವಿಕೆಟ್‍ಗಳ ಭರ್ಜರಿ  ಗೆಲುವು ಸಾಧಿಸಿತು. ಹೀನಾಯ ಸೋಲು ಕಂಡ ವಿಂಡೀಸ್ ತಂಡ ನಿರಾಸೆ ಮೂಡಿಸಿದೆ.  

Written by - Puttaraj K Alur | Last Updated : Jul 1, 2023, 09:20 PM IST
  • ವಿಶ್ವಕಪ್​ನ ಅರ್ಹತಾ ಸುತ್ತಿನ ಸೂಪರ್ 6​ ಪಂದ್ಯದಲ್ಲಿ ಸ್ಕಾಟ್​​ಲ್ಯಾಂಡ್ ವಿರುದ್ಧ ವೆಸ್ಟ್ ಇಂಡೀಸ್‍ಗೆ ಸೋಲು
  • ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‍ ಟೂರ್ನಿಯಿಂದ ಔಟಾದ 1975 & 1979ರ ವಿಶ್ವ ಚಾಂಪಿಯನ್
  • ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ ಸ್ಕಾಟ್​ಲ್ಯಾಂಡ್
ODI World Cup 2023: ಏಕದಿನ ವಿಶ್ವಕಪ್​ನಿಂದ ವೆಸ್ಟ್ ಇಂಡೀಸ್ ಔಟ್..! title=
ಹೊಸ ಇತಿಹಾಸ ನಿರ್ಮಿಸಿದ ಸ್ಕಾಟ್​ಲ್ಯಾಂಡ್!

ODI World Cup 2023: ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಸೂಪರ್ 6​ ಪಂದ್ಯದಲ್ಲಿ ಸ್ಕಾಟ್​​ಲ್ಯಾಂಡ್ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ವೆಸ್ಟ್ ಇಂಡೀಸ್ ತಂಡವು ಏಕದಿನ ವಿಶ್ವಕಪ್‍ನಿಂದ ಹೊರಬಿದ್ದಿದೆ. 1975 & 1979ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್​ ಟೂರ್ನಿಯಿಂದ ಔಟ್ ಆಗಿದ್ದು, ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿದೆ.

ಕಳೆದ 12 ಏಕದಿನ ವಿಶ್ವಕಪ್​ಗಳಲ್ಲಿಯೂ ಪಾಲ್ಗೊಂಡಿದ್ದ ವೆಸ್ಟ್ ಇಂಡೀಸ್ ತಂಡ ಈ ಬಾರಿ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ಭಾರೀ ಮುಖಭಂಗಕ್ಕೆ ಈಡಾಗಿದೆ. ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವು USA ಮತ್ತು ನೇಪಾಳ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಝಿಂಬಾಬ್ವೆ ಮತ್ತು ನೆದರ್​ಲ್ಯಾಂಡ್ಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು. 2 ಗೆಲುವಿನೊಂದಿಗೆ ಅರ್ಹತಾ ಸುತ್ತಿನ ಸೂಪರ್ 6 ಹಂತ ತಲುಪಿದ್ದ ತಂಡಕ್ಕೆ ದೊಡ್ಡ ಆಘಾತವುಂಟಾಗಿದೆ.

ಇದನ್ನೂ ಓದಿ: ಮೊದಲ ಓವರ್’ನಲ್ಲೇ 4 ವಿಕೆಟ್ ಉಡೀಸ್! ಕ್ರಿಕೆಟ್ ದಿಗ್ಗಜನ ಅಳಿಯನ ಸ್ಫೋಟಕ ಬೌಲಿಂಗ್’ಗೆ ವಿಶ್ವದಾಖಲೆ ಸೃಷ್ಟಿ

ಸೂಪರ್ 6​ನ ಮೊದಲ ಪಂದ್ಯದಲ್ಲೇ ಸ್ಕಾಟ್​ಲ್ಯಾಂಡ್ ವಿರುದ್ಧ ವೆಸ್ಟ್ ಇಂಡೀಸ್‍ ಸೋಲು ಕಂಡಿದೆ. ಈ ಮೂಲಕ ಭಾರತದಲ್ಲಿ ಏಕದಿನ ವಿಶ್ವಕಪ್ ಆಡುವ ವಿಂಡೀಸ್ ತಂಡದ ಕನಸು ಕಮರಿದೆ. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್​ಲ್ಯಾಂಡ್​ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು.

182 ರನ್​ಗಳ ಸುಲಭ ಗುರಿ ಪಡೆದ ಸ್ಕಾಟ್ಲೆಂಡ್ 43.3 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿ 7 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು. ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಕ್ರಾಸ್(ಅಜೇಯ 74) ಭರ್ಜರಿ ಅರ್ಧಶತಕ ಭಾರಿಸಿದರು. 3ನೇ ಕಮ್ರಾಂಕದ ಬ್ಯಾಟರ್ ಬ್ರಾಂಡನ್ ಮೆಕ್‌ಮುಲ್ಲೆನ್(69) ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಸ್ಕಾಟ್​ಲ್ಯಾಂಡ್ ಹೊಸ ಇತಿಹಾಸ ನಿರ್ಮಿಸಿದೆ. ಹೀನಾಯ ಸೋಲು ಕಂಡ ವಿಂಡೀಸ್ ತಂಡ ನಿರಾಸೆ ಮೂಡಿಸಿದೆ.  

ಇದನ್ನೂ ಓದಿ: ಬೆಂಗಳೂರಲ್ಲಿನ ಇಂಡಿಯನ್ ನ್ಯಾಷನಲ್ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ ನಲ್ಲಿ 120 ಬೈಕರ್ ಗಳು ಭಾಗಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News