ಬೆಂಗಳೂರಲ್ಲಿನ ಇಂಡಿಯನ್ ನ್ಯಾಷನಲ್ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ ನಲ್ಲಿ 120 ಬೈಕರ್ ಗಳು ಭಾಗಿ 

ರೇ ಭಾರತೀಯ ರಾಷ್ಟ್ರೀಯ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ಭಾನುವಾರ ಇಲ್ಲಿ ನಡೆಯಲಿದ್ದು, ಭಾರತದ ಅಗ್ರ ಬೈಕರ್‌ಗಳು ಸೇರಿ ಒಟ್ಟು ದಾಖಲೆಯ 120 ಮಂದಿ ಪಾಲ್ಗೊಳ್ಳಲಿದ್ದಾರೆ.

Written by - Manjunath N | Last Updated : Jul 1, 2023, 08:55 PM IST
  • ರ‌್ಯಾಲಿ ಸ್ಪ್ರಿಂಟ್ ಒಂದು ರೋಚಕ ಮಾದರಿಯ ರೇಸ್ ಆಗಿದ್ದು, ಚಾಲಕರು ಬಹಳ ಇಷ್ಟಪಡಲಿದ್ದಾರೆ. ಪ್ರೇಕ್ಷಕರಿಗೂ ಅಪಾರ ಮನರಂಜನೆ ದೊರೆಯಲಿದೆ.
  • ಈ ವರ್ಷ ಘಟಾನುಘಟಿ ಬೈಕರ್‌ಗಳು ಕಣದಲ್ಲಿದ್ದು, ಸ್ಪರ್ಧೆ ತೀವ್ರವಾಗಿರಲಿದೆ’
  • ಚಾಂಪಿಯನ್‌ಶಿಪ್‌ನ ಆಯೋಜಕರು ಹಾಗೂ ಪ್ರಚಾರಕರು ಆಗಿರುವ ಮೋಟರ್‌ಸ್ಪೋರ್ಟ್ ಐಎನ್‌ಸಿಯ ಜೈ ದಾಸ್ ಮೆನನ್ ಹೇಳಿದ್ದಾರೆ.
ಬೆಂಗಳೂರಲ್ಲಿನ ಇಂಡಿಯನ್ ನ್ಯಾಷನಲ್ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ ನಲ್ಲಿ 120 ಬೈಕರ್ ಗಳು ಭಾಗಿ  title=

ಬೆಂಗಳೂರು: ರೇ ಭಾರತೀಯ ರಾಷ್ಟ್ರೀಯ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ಭಾನುವಾರ ಇಲ್ಲಿ ನಡೆಯಲಿದ್ದು, ಭಾರತದ ಅಗ್ರ ಬೈಕರ್‌ಗಳು ಸೇರಿ ಒಟ್ಟು ದಾಖಲೆಯ 120 ಮಂದಿ ಪಾಲ್ಗೊಳ್ಳಲಿದ್ದಾರೆ.

ರಾಜೇಂದ್ರ ಆರ್., ಸ್ಯಾಮುಯಲ್ ಜೇಕಬ್ ಹಾಗೂ ಸಚಿನ್ ಡಿ., ಪ್ರಮುಖ ಆಕರ್ಷಣೆ ಎನಿಸಿದ್ದು ಮುಕ್ತ ವಿಭಾಗದಲ್ಲಿ 550 ಸಿಸಿ ಚಾಂಪಿಯನ್‌ಶಿಪ್‌ಗೆ ಸೆಣಸಲಿದ್ದಾರೆ. ಈ ಮೂವರು ರಾಷ್ಟ್ರೀಯ ಚಾಂಪಿಯನ್ನರಾಗಿದ್ದರು, ವಿವಿಧ ಪ್ರಶಸ್ತಿ, ರೇಸ್‌ಗಳನ್ನು ಜಯಿಸಿದ ಹಿರಿಮೆ ಹೊಂದಿದ್ದಾರೆ.

ರ‌್ಯಾಲಿ ಸ್ಪ್ರಿಂಟ್ ಎನ್ನುವುದು ರೇಸಿಂಗ್ ಹಾಗೂ ರ‌್ಯಾಲಿಯಿಂಗ್‌ನ ಹಿಬ್ರಿಡ್ ಮಾದರಿಯಾಗಿದ್ದರು, ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಮಾದರಿಯನ್ನು ರೂಪಿಸಲಾಗಿದೆ. ಇದೊಂದು ರೀತಿ ಟಿ20 ಕ್ರಿಕೆಟ್ ಪಂದ್ಯವಿದ್ದಂತೆ.

ಆರಂಭಿಕ ದಕ್ಷಿಣ ವಲಯ ಸುತ್ತು ಬೆಂಗಳೂರಿನ ಸರ್ಜಾಪುರ ಬಳಿಕ ನಡೆಯಲಿದ್ದು, ಆ ಬಳಿಕ ಉತ್ತರ ವಲಯದ ಸುತ್ತು ಚಂಡೀಗಢ, ಪಶ್ಚಿಮ ವಲಯದ ಸುತ್ತು ಬರೋಡಾ, ಪೂರ್ವ ವಲಯದ ಸುತ್ತು ಗುವಾಹಟಿ ಹಾಗೂ ಗ್ರ್ಯಾಂಡ್ ಫಿನಾಲೆ ಗೋವಾದಲ್ಲಿ ನಡೆಯಲಿದೆ.

ಇದನ್ನೂ ಓದಿ: Viral Video: ಸಿಗರೇಟು ಸೇದುವುದರಲ್ಲಿ ಹೆಣ್ಮಕ್ಳೆ ಸ್ಟ್ರಾಂಗು ಗುರು; ಈ ಪಟ್ಟಣಕ್ಕೆ ಏನಾಗಿದೆ ಎಂದ ನೆಟ್ಟಿಗರು

ರ‌್ಯಾಲಿ ಸ್ಪ್ರಿಂಟ್ ಒಂದು ರೋಚಕ ಮಾದರಿಯ ರೇಸ್ ಆಗಿದ್ದು, ಚಾಲಕರು ಬಹಳ ಇಷ್ಟಪಡಲಿದ್ದಾರೆ. ಪ್ರೇಕ್ಷಕರಿಗೂ ಅಪಾರ ಮನರಂಜನೆ ದೊರೆಯಲಿದೆ. ಈ ವರ್ಷ ಘಟಾನುಘಟಿ ಬೈಕರ್‌ಗಳು ಕಣದಲ್ಲಿದ್ದು, ಸ್ಪರ್ಧೆ ತೀವ್ರವಾಗಿರಲಿದೆ’ ಎಂದು ಚಾಂಪಿಯನ್‌ಶಿಪ್‌ನ ಆಯೋಜಕರು ಹಾಗೂ ಪ್ರಚಾರಕರು ಆಗಿರುವ ಮೋಟರ್‌ಸ್ಪೋರ್ಟ್ ಐಎನ್‌ಸಿಯ ಜೈ ದಾಸ್ ಮೆನನ್ ಹೇಳಿದ್ದಾರೆ.

10 ಕಿಲೋ ಮೀಟರ್‌ನ ಐಎನ್‌ಆರ್‌ಸಿಎ ಸ್ಪರ್ಧೆಯು ವಿವಿಧ ವಿಭಾಗಗಳನ್ನು ಹೊಂದಿದೆ. 131 ಸಿಸಿ ಯಿಂದ 165 ಸಿಸಿ, 166 ಸಿಸಿ ಯಿಂದ 260 ಸಿಸಿ, 261 ಸಿಸಿ ಯಿಂದ 400 ಸಿಸಿ ಹಾಗೂ ಅಂತಿಮವಾಗಿ 550 ಸಿಸಿ ವರೆಗಿನ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಇದಷ್ಟೇ ಅಲ್ಲದೇ ವಿವಿಧ ವಾಹನಗಳ ವಿಭಾಗಗಳಲ್ಲೂ ಪ್ರಶಸ್ತಿಗಳಿಗಾಗಿ ಪೈಪೋಟಿ ಏರ್ಪಡಲಿದೆ. ಸ್ಕೂಟರ್ ಕ್ಲಾಸ್, ಬುಲೆಟ್ ಕ್ಲಾಸ್ ಹಾಗೂ ಮಹಿಳಾ ವಿಭಾಗವೂ ಇದೆ. 6 ಮಹಿಳೆಯರು ಸ್ಪರ್ಧೆಗಿಳಿಯಲಿದ್ದಾರೆ.

ಇದನ್ನೂ ಓದಿ: ವಿಕೇಂಡ್ ನಲ್ಲಿ ಯುವಕನ ಹುಚ್ಚಾಟ: ಅಪಘಾತದ ರಭಸಕ್ಕೆ ಕಾರು ಪೀಸ್ ಪೀಸ್..!

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಬೈಕರ್‌ಗಳು ಈ ಚಾಂಪಿಯನ್‌ಶಿಪ್‌ನ ಕಳೆ ಹೆಚ್ಚಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News