Orleans Masters:ಓರ್ಲಿಯನ್ಸ್ ಮಾಸ್ಟರ್ಸ್- ತೋಮಾ ವಿನ್ನರ್‌, ಬೆಳ್ಳಿಗೆ ತೃಪ್ತಿಪಟ್ಟ ಮಿಥುನ್

79ನೇ ಶ್ರೇಯಾಂಕದ ಭಾರತೀಯ ಷಟ್ಲರ್ ಮಿಥುನ್‌, ಪಲೈಸ್ ಡೆಸ್ ಸ್ಪೋರ್ಟ್ಸ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 21-11, 21-19, 21-11, 21-19 ಅಂಕಗಳ ಅಂತರದಿಂದ ಫ್ರಾನ್ಸ್‌ನ ಆಟಗಾರ  ಪೊಪೊವ್ ವಿರುದ್ಧ ಮುಗ್ಗರಿಸಿದ್ದಾರೆ.   

Written by - Zee Kannada News Desk | Last Updated : Apr 4, 2022, 01:44 PM IST
  • ಓರ್ಲಿಯನ್ಸ್ ಮಾಸ್ಟರ್ಸ್ 2022 ರ ಪುರುಷರ ಸಿಂಗಲ್ಸ್
  • ಭಾರತದ ಷಟ್ಲರ್ ಮಿಥುನ್ ಮಂಜುನಾಥ್‌ಗೆ ಬೆಳ್ಳಿ ಪದಕ
  • ಚಾಂಪಿಯನ್‌ ಆಗಿ ಹೊರಹೊಮ್ಮಿದ ತೋಮಾ ಜೂನಿಯರ್ ಪೊಪೊವ್
Orleans Masters:ಓರ್ಲಿಯನ್ಸ್ ಮಾಸ್ಟರ್ಸ್- ತೋಮಾ ವಿನ್ನರ್‌, ಬೆಳ್ಳಿಗೆ ತೃಪ್ತಿಪಟ್ಟ ಮಿಥುನ್  title=
Orleans Masters

ಓರ್ಲಿಯನ್ಸ್ (ಫ್ರಾನ್ಸ್): ಭಾನುವಾರ ಫ್ರಾನ್ಸ್‌ನಲ್ಲಿ ನಡೆದ ಓರ್ಲಿಯನ್ಸ್ ಮಾಸ್ಟರ್ಸ್ 2022(Orleans Masters Super 100) ರ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಷಟ್ಲರ್ ಮಿಥುನ್ ಮಂಜುನಾಥ್ (Mithun Manjunath), ಟೊಮಾ ಜೂನಿಯರ್ ಪೊಪೊವ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. 

79ನೇ ಶ್ರೇಯಾಂಕದ ಭಾರತೀಯ ಷಟ್ಲರ್ ಮಿಥುನ್‌, ಪಲೈಸ್ ಡೆಸ್ ಸ್ಪೋರ್ಟ್ಸ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 21-11, 21-19, 21-11, 21-19 ಅಂಕಗಳ ಅಂತರದಿಂದ ಫ್ರಾನ್ಸ್‌ನ ಆಟಗಾರ  ಪೊಪೊವ್ ವಿರುದ್ಧ ಮುಗ್ಗರಿಸಿದ್ದಾರೆ. 

ಇದನ್ನು ಓದಿIPL 2022: ಐಪಿಎಲ್‌ನಲ್ಲಿ ವಿಶ್ವದ ನಂಬರ್ 1 ಬೌಲರ್‌ನ ಪ್ರವೇಶ- ಕೆಕೆಆರ್ ತಂಡಕ್ಕೆ ದೊಡ್ಡ ಅಸ್ತ್ರ

ಟೂರ್ನಮೆಂಟ್‌ನ ಎರಡನೇ ಸುತ್ತಿನಲ್ಲಿ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಕೆಲ ತಪ್ಪುಗಳಿಂದ  ಭಾರತದ ಷಟ್ಲರ್ ಮಿಥುನ್ ಮಂಜುನಾಥ್, ಟೊಮಾ ಜೂನಿಯರ್ (Toma Junior Popov) ವಿರುದ್ಧ ಸೋಲನ್ನೊಪ್ಪಿಕೊಂಡರು. 

ಈ ಹಿಂದೆ ಜ್ಯೂನಿಯರ್‌ ಯುರೋಪಿಯನ್ ಚಾಂಪಿಯನ್  ಆಗಿ ಟೊಮಾ ಜೂನಿಯರ್ ಪೊಪೊವ್ ಹೊರಹೊಮ್ಮಿದ್ದರು. ಇದೀಗ ಓರ್ಲಿಯನ್ಸ್ ಮಾಸ್ಟರ್ಸ್ 2022ರ ಕಿರೀಟವನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. 

ಇದನ್ನು ಓದಿIPL2022: ಪಂಜಾಬ್ ಕಿಂಗ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಗೆ ಹೀನಾಯ ಸೋಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News