ನವದೆಹಲಿ: ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ ಟೂರ್ನಿಯ 47 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ಏಳು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ALIVE! 💗 pic.twitter.com/KtLn4kpMzy
— Rajasthan Royals (@rajasthanroyals) October 2, 2021
ರಾಜಸ್ತಾನ ರಾಯಲ್ಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು.ಈ ವೇಳೆ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಮಾಡಿತು.ಚೆನ್ನೈ ತಂಡದ ಪರವಾಗಿ ರುತುರಾಜ್ ಗಾಯಕ್ವಾಡ್ ಅವರು ಕೇವಲ 60 ಎಸೆತಗಳಲ್ಲಿ ಭರ್ಜರಿ 9 ಬೌಂಡರಿ ಹಾಗೂ 5 ಸಿಕ್ಸರ್ ಗಳ ನೆರವಿನಿಂದಾಗಿ ಅಜೇಯ 101 ರನ್ ಗಳಿಸಿದರು. ಕೊನೆಯಲ್ಲಿ ರವಿಂದ್ರ ಜಡೇಜಾ ಕೇವಲ 15 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ಚೆನ್ನೈ ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.
ಇದನ್ನೂ ಓದಿ: "ಸಂಭ್ರಮಿಸಬೇಕಾಗಿರುವುದು ಮದುವೆಗಳನ್ನಲ್ಲ, ವಿಚ್ಚೇದನಗಳನ್ನು"- ರಾಮ್ ಗೋಪಾಲ್ ವರ್ಮಾ
Sensational run-chase to seal a win! 👌 👌@rajasthanroyals put up a solid show with the bat & beat #CSK by 7⃣ wickets. 👏👏 #VIVOIPL #RRvCSK
Scorecard 👉 https://t.co/dRp6k449yy pic.twitter.com/fbv8zN02Aw
— IndianPremierLeague (@IPL) October 2, 2021
ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ರಾಜಸ್ತಾನ ರಾಯಲ್ಸ್ ತಂಡವು ಯಶಸ್ವಿ ಜೈಸ್ವಾಲ್ 50, ಶಿವಂ ದುಭೆ ಅವರ ಅಜೇಯ 64 ರನ್ ಗಳಿಂದಾಗಿ ಕೇವಲ 17.3 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಗೆಲುವಿನ ನಗೆ ಬಿರಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.