RCB vs GT match updates : ಪ್ಲೇ ಆಫ್ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆರಾಯ ಅಡ್ಡಿಯುಂಟು ಮಾಡಿದ್ದಾನೆ. ಭಾರೀ ಆಲಿಕಲ್ಲು ಮಳೆಯಿಂದಾಗಿ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಆತಂಕ ಆರ್ಸಿಬಿ ಅಭಿಮಾನಿಗಳಲ್ಲಿ ಮೂಡಿದೆ. ಈಗ ಮಳೆ ನಿಂತಿದ್ದರೂ ಪಂದ್ಯದ ವೇಳೆಗೆ ಮತ್ತೆ ಮಳೆ ಸುರಿಯುವ ಲಕ್ಷಣ ಗೋಚರಿಸುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೆ ಮುಂಬೈ ತಂಡ SRH ಕೈಯಲ್ಲಿ ಸೋಲಬೇಕಾಗುತ್ತದೆ. ಮುಂಬೈ ಗೆದ್ದರೆ ಈ ಪಂದ್ಯ ರದ್ದಾಗಿ ಆರ್‌ಸಿಬಿ ಪಯಣ ಅಂತ್ಯವಾಗಲಿದೆ. ಬೆಂಗಳೂರು ಅಭಿಮಾನಿಗಳು ಮಳೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ವ್ಯರ್ಥವಾದ ರಿಂಕು ಸಿಂಗ್ ಹೋರಾಟ, ಲಕ್ನೋ ಗೆ 1 ರನ್ ಗಳ ರೋಚಕ ಗೆಲುವು
ಚಿನ್ನಸ್ವಾಮಿ ಕ್ರೀಡಾಂಗಣವು ಉತ್ತಮ ಗುಣಮಟ್ಟದ ಸಬ್ ಏರ್ ಡ್ರೈನೇಜ್ ವ್ಯವಸ್ಥೆಯನ್ನು ಹೊಂದಿದೆ. ಮಳೆ ಮಧ್ಯದಲ್ಲಿ ನಿಂತರೂ ಬೇಗ ನೆಲವನ್ನು ಸಿದ್ಧಪಡಿಸಲು ಸಾಧ್ಯ. ಭಾನುವಾರ ಸಂಜೆ 7 ಗಂಟೆಯವರೆಗೆ ತಾಪಮಾನ 27 ಡಿಗ್ರಿ ತಲುಪಲಿದೆ. ಆಗ ಆಕಾಶದಲ್ಲಿ ಶೇ.98ರಷ್ಟು ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವರುಣ ವಿಲನ್ ಆದರೇ ಆರ್ಸಿಬಿಗೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು.
ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ರಾಜಸ್ಥಾನ, ಬೆಂಗಳೂರು ಹಾಗೂ ಮುಂಬೈ ತಂಡಗಳು 14 ಅಂಕಗಳೊಂದಿಗೆ ಸಮಾನವಾಗಿವೆ. ರಾಜಸ್ಥಾನ ಹೊರಗೆ ಹೋಗಿದೆ. ಇಂದು ನಡೆಯುತ್ತಿರುವ ಪಂದ್ಯದಲ್ಲಿ RCB ಗುಜರಾತ್ ವಿರುದ್ಧ ಸೋತರೂ ಸಹ ರೋಹಿತ್ ಸೇನೆ ಪ್ಲೇ-ಆಫ್ ತಲುಪುತ್ತದೆ. ಸದ್ಯ ಎಲ್ಲವೂ ಮಳೆರಾಯನನ್ನು ಅವಲಂಬಿಸಿದೆ. ಪಂಧ್ಯಕ್ಕೆ ವರುಣದೇವ ಅಡ್ಡಿ ಮಾಡದಿದ್ದರೆ ಗುಜರಾತ್ ವಿರುದ್ಧ ಬೆಂಗಳೂರು ಉತ್ತಮ ಅಂಕಗಳೊಂದಿಗೆ ಜಯ ಪಡೆದರೆ ಪ್ಲೇ ಆಪ್ ತಲುಪುತ್ತದೆ. ಇಲ್ಲದಿದ್ದರೆ ಮುಂದಿನ ಸಲ ಕಪ್ ನಮ್ದೆ ಅಂತ ಹೇಳಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ