Rohit Sharma angry on Shubman Gill: ಮೊಹಾಲಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್’ನಲ್ಲಿ ಶಾಕಿಂಗ್ ಘಟನೆ ನಡೆಯಿತು. 14 ತಿಂಗಳ ಬಳಿಕ ರೋಹಿತ್ ಶರ್ಮಾ ಟಿ20ಗೆ ಪುನರಾಗಮನ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 158 ರನ್ ಗಳಿಸಿತು. ಇದಕ್ಕುತ್ತರ ನೀಡಲು ಕಣಕ್ಕಿಳಿದ ಭಾರತ ಇನ್ನಿಂಗ್ಸ್’ನ ಮೊದಲ ಓವರ್ನಲ್ಲಿ ರೋಹಿತ್ ಖಾತೆ ತೆರೆಯದೆ ಪೆವಿಲಿಯನ್’ಗೆ ಮರಳಿದರು.
ಇದನ್ನೂ ಓದಿ: ಮನೆಯ ಹಿತ್ತಲಲ್ಲಿ ಈ ಗಿಡಗಳು ಇದ್ದರೆ ಒಂದೇ ಒಂದು ಹಾವು ಕೂಡ ಆ ಕಡೆ ತಲೆ ಹಾಕಲ್ಲ!
ಈ ಸಂದರ್ಭದಲ್ಲಿ ಶುಭ್ಮನ್ ಗಿಲ್ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಲೈವ್ ಮ್ಯಾಚ್’ನಲ್ಲೇ ಬಾಯಿಗೆ ಬಂದಂತೆ ಬೈದಿದ್ದಾರೆ.
ಭಾರತೀಯ ಇನ್ನಿಂಗ್ಸ್ನ ಮೊದಲ ಓವರ್’ನ ಎರಡನೇ ಎಸೆತದಲ್ಲಿ, ರೋಹಿತ್ ಮುಂದೆ ಹೋಗಿ ಮಿಡ್-ಆಫ್’ನಲ್ಲಿ ಶಾಟ್ ಆಡಿ ರನ್ ಗಳಿಸಲು ಓಡಿದರು. ಆದರೆ ಮಿಡ್-ಆಫ್’ನಲ್ಲಿ ನಿಂತಿದ್ದ ಜದ್ರಾನ್ ಚೆಂಡನ್ನು ಹಿಡಿದು ಸ್ಟ್ರೈಕರ್ ಎಂಡ್’ನಲ್ಲಿ ಎಸೆಯುವ ಹೊತ್ತಿಗೆ ರೋಹಿತ್ ನಾನ್-ಸ್ಟ್ರೈಕರ್ ಎಂಡ್ ಅನ್ನು ತಲುಪಿದ್ದರು. ಅದೇ ಸಂದರ್ಭದಲ್ಲಿ ರೋಹಿತ್ ರನ್ ಕಾಲ್ ನೀಡಿದ್ದರು. ಅವರಿಗೆ ಪ್ರತಿಕ್ರಿಯಿಸುವ ಬದಲು, ಶುಭ್ಮನ್ ಚೆಂಡನ್ನು ನೋಡುತ್ತಲೇ ನಿಂತಿದ್ದರು. ರನ್ ಮಾಡಲು ನಿರಾಕರಿಸುವ ಹೊತ್ತಿಗೆ, ರೋಹಿತ್ ನಾನ್ ಸ್ಟ್ರೈಕರ್ ಎಂಡ್’ಗೆ ಬಂದು ತಲುಪಿದ್ದರು. ಇಬ್ಬರೂ ಒಂದೇ ತುದಿಯಲ್ಲಿದ್ದರು, ಆದರೆ ಶುಭಮನ್ ಕ್ರೀಸ್’ನಲ್ಲಿರುವುದರಿಂದ ರೋಹಿತ್ ರನ್ ಔಟ್ ಆಗಬೇಕಾಯಿತು.
ಇದರಿಂದ ರೋಹಿತ್ ಕೋಪಗೊಂಡು, ಶುಭ್ಮನ್ ಮೇಲೆ ಕೋಪ ಹೊರಹಾಕಿದರು. ಗಿಲ್ ಕೂಡ ಈ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಆದರೆ, ರೋಹಿತ್ ಅಸಮಾಧಾನದಿಂದ ಬೈದುಕೊಂಡು ಪೆವಿಲಿಯನ್’ಗೆ ಮರಳಿದರು. ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.
ಇದನ್ನೂ ಓದಿ: 106 ODI ಪಂದ್ಯಗಳನ್ನಾಡಿದ ಬಳಿಕ ಈ ಆಟಗಾರ ಟಿ20ಗೆ ಚೊಚ್ಚಲ ಪ್ರವೇಶ
ಇನ್ನು, ರೋಹಿತ್ ಪೆವಿಲಿಯನ್’ಗೆ ಮರಳಿದ ನಂತರ, ಶುಭ್ಮನ್ ಗಿಲ್ ಕೆಲವು ಉತ್ತಮ ಹೊಡೆತಗಳನ್ನು ಆಡಿದ್ದರು, ಆದರೆ ನಾಲ್ಕನೇ ಓವರ್’ನಲ್ಲಿ ಅವರು ಕೂಡ ಪೆವಿಲಿಯನ್ಗೆ ಮರಳಿದರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ