106 ODI ಪಂದ್ಯಗಳನ್ನಾಡಿದ ಬಳಿಕ ಈ ಆಟಗಾರ ಟಿ20ಗೆ ಚೊಚ್ಚಲ ಪ್ರವೇಶ: 30 ವರ್ಷದ ಪ್ಲೇಯರ್’ಗೆ ಕೊನೆಗೂ ಖುಲಾಯಿಸಿತು ಲಕ್

Rahmat Shah T20 International Debut: ಭಾರತ ವಿರುದ್ಧದ ಸರಣಿಯ ಆರಂಭಿಕ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಬ್ಯಾಟ್ಸ್‌’ಮನ್ ರಹಮತ್ ಶಾ ಅದೃಷ್ಟ ಖುಲಾಯಿಸಿದೆ. 106 ODI ಮತ್ತು 7 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ರಹಮತ್ T20 ಅಂತರಾಷ್ಟ್ರೀಯ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ.

Written by - Bhavishya Shetty | Last Updated : Jan 11, 2024, 09:42 PM IST
    • ಭಾರತ ವಿರುದ್ಧದ ಸರಣಿಯ ಆರಂಭಿಕ ಟಿ20 ಪಂದ್ಯ
    • ಅಫ್ಘಾನಿಸ್ತಾನದ ಸ್ಟಾರ್ ಬ್ಯಾಟ್ಸ್‌’ಮನ್ ರಹಮತ್ ಶಾ
    • ರಹಮತ್ T20 ಅಂತರಾಷ್ಟ್ರೀಯ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ
106 ODI ಪಂದ್ಯಗಳನ್ನಾಡಿದ ಬಳಿಕ ಈ ಆಟಗಾರ ಟಿ20ಗೆ ಚೊಚ್ಚಲ ಪ್ರವೇಶ: 30 ವರ್ಷದ ಪ್ಲೇಯರ್’ಗೆ ಕೊನೆಗೂ ಖುಲಾಯಿಸಿತು ಲಕ್ title=
India vs Afghanistan T20

Rahmat Shah T20 International Debut: ಭಾರತ ವಿರುದ್ಧದ ಸರಣಿಯ ಆರಂಭಿಕ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಬ್ಯಾಟ್ಸ್‌’ಮನ್ ರಹಮತ್ ಶಾ ಅದೃಷ್ಟ ಖುಲಾಯಿಸಿದೆ. 106 ODI ಮತ್ತು 7 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ರಹಮತ್ T20 ಅಂತರಾಷ್ಟ್ರೀಯ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ.

ಇದನ್ನೂ ಓದಿ: ಮನೆಯ ಹಿತ್ತಲಲ್ಲಿ ಈ ಗಿಡಗಳು ಇದ್ದರೆ ಒಂದೇ ಒಂದು ಹಾವು ಕೂಡ ಆ ಕಡೆ ತಲೆ ಹಾಕಲ್ಲ!

ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಅಫ್ಘಾನಿಸ್ತಾನವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಈ ಪಂದ್ಯದ ಮೂಲಕ, ಆರಂಭಿಕ ಆಟಗಾರ ರೋಹಿತ್ ಶರ್ಮಾ 14 ತಿಂಗಳ ನಂತರ ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ. ಟಾಸ್ ಬಳಿಕ ಮಾತನಾಡಿದ ಅವರು, “ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ವಿಶೇಷ ಕಾರಣವಿಲ್ಲ, ಪಿಚ್ ಚೆನ್ನಾಗಿದೆ. ಇಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಸರಣಿಯ ಈ 3 ಪಂದ್ಯಗಳಿಂದ ಸಾಧಿಸುವುದು ಸಾಕಷ್ಟಿದೆ. T20 ವಿಶ್ವಕಪ್ ಹತ್ತಿರದಲ್ಲಿದೆ ಮತ್ತು ನಮ್ಮಲ್ಲಿ ಹೆಚ್ಚು T20 ಕ್ರಿಕೆಟ್ ಇಲ್ಲ. ಇದಾದ ನಂತರ ಐಪಿಎಲ್ ಇದೆ, ಆದರೆ ಇದು ಅಂತಾರಾಷ್ಟ್ರೀಯ ಪಂದ್ಯ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿ ಬೆನ್ನಲ್ಲೇ ಗಜಕೇಸರಿ ಯೋಗ: ಈ ರಾಶಿಯ ಜನರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಘಳಿಗೆ

ರಹಮತ್ ಅವರ ಚೊಚ್ಚಲ ಟಿ20

30ರ ಹರೆಯದ ರಹಮತ್ ಶಾ ಈ ಪಂದ್ಯದಲ್ಲಿ ಟಿ20 ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು. 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಹಮತ್, ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಕೇವಲ 3 ರನ್‌’ಗಳ ವೈಯಕ್ತಿಕ ಸ್ಕೋರ್‌’ನಲ್ಲಿ ಸ್ಪಿನ್ನರ್ ಅಕ್ಷರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆದರು. ಇದಕ್ಕೂ ಮೊದಲು ರಹಮತ್ 106 ಏಕದಿನ ಪಂದ್ಯಗಳಲ್ಲಿ 5 ಶತಕ ಮತ್ತು 26 ಅರ್ಧ ಶತಕಗಳ ನೆರವಿನಿಂದ ಒಟ್ಟು 3589 ರನ್ ಗಳಿಸಿದ್ದರು. ಟೆಸ್ಟ್‌’ನಲ್ಲಿ ಅವರು 14 ಇನ್ನಿಂಗ್ಸ್‌’ಗಳಲ್ಲಿ 1 ಶತಕ ಮತ್ತು 3 ಅರ್ಧ ಶತಕಗಳ ಸಹಾಯದಿಂದ 424 ರನ್‌ಗಳನ್ನು ಸೇರಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News