ಅಫ್ಘನ್ ವಿರುದ್ಧ ಭಾರತ ಗೆಲ್ಲಲು ಇವರೇ ಕಾರಣ: ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಇಬ್ಬರಿಸಿಗೆ ಸಲ್ಲಿಸಿದ ರೋಹಿತ್ ಶರ್ಮಾ

Rohit Sharma: ಮಧ್ಯಮ ಕ್ರಮಾಂಕದಲ್ಲಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ ಐದನೇ ವಿಕೆಟ್‌ಗೆ ಮಹತ್ವದ ಜೊತೆಯಾಟ ನಡೆಸಿ ತಂಡವನ್ನು 150 ರನ್‌ಗಳ ಗಡಿ ದಾಟಿಸಿದರು.

Written by - Bhavishya Shetty | Last Updated : Jun 21, 2024, 05:42 PM IST
    • ಸೂಪರ್-8 ಪಂದ್ಯದಲ್ಲಿ ಟೀಂ ಇಂಡಿಯಾಗೆ ಅಫ್ಘಾನಿಸ್ತಾನ ವಿರುದ್ಧ 47 ರನ್‌’ಗಳ ಜಯ
    • ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಗೆ ಗೆಲುವಿನ ಕ್ರೆಡಿಟ್
    • ಪಂದ್ಯದ ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ
ಅಫ್ಘನ್ ವಿರುದ್ಧ ಭಾರತ ಗೆಲ್ಲಲು ಇವರೇ ಕಾರಣ: ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಇಬ್ಬರಿಸಿಗೆ ಸಲ್ಲಿಸಿದ ರೋಹಿತ್ ಶರ್ಮಾ title=
File Photo

Rohit Sharma: ಗುರುವಾರ ನಡೆದ ಟಿ20 ವಿಶ್ವಕಪ್‌’ನ ಸೂಪರ್-8 ಪಂದ್ಯದಲ್ಲಿ ಟೀಂ ಇಂಡಿಯಾ, ಅಫ್ಘಾನಿಸ್ತಾನ ವಿರುದ್ಧ 47 ರನ್‌’ಗಳ ಜಯ ದಾಖಲಿಸಿದೆ. ರೋಹಿತ್ ಶರ್ಮಾ ಈ ಗೆಲುವಿನ ಸಂಪೂರ್ಣ ಕ್ರೆಡಿಟ್ ಅನ್ನು ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಗೆ ನೀಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟಿಯರಿಗಿಂತಲೂ ಬ್ಯೂಟಿಫುಲ್ ಸೂರ್ಯಕುಮಾರ್ ಯಾದವ್ ಪತ್ನಿ! ಈಕೆಯ ಡ್ಯಾನ್ಸ್ ನೋಡಿಯೇ ಲವ್ವಲ್ಲಿ ಬಿದ್ದ ಭಾರತದ ಮಿ.360

ಮಧ್ಯಮ ಕ್ರಮಾಂಕದಲ್ಲಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ ಐದನೇ ವಿಕೆಟ್‌ಗೆ ಮಹತ್ವದ ಜೊತೆಯಾಟ ನಡೆಸಿ ತಂಡವನ್ನು 150 ರನ್‌ಗಳ ಗಡಿ ದಾಟಿಸಿದರು. ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 53 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 32 ರನ್ ಗಳಿಸಿ ಭಾರತ 20 ಓವರ್‌ಗಳಲ್ಲಿ 181/8 ಸ್ಕೋರ್ ಮಾಡಲು ಸಹಾಯ ಮಾಡಿದರು.

ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, “ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಿದರೆ, ಆಗ ನಾವೇ ಉತ್ತಮ ವೇದಿಕೆಯನ್ನು ರಚಿಸಬಹುದು. ಆ ಸಮಯದಲ್ಲಿ ಸೂರ್ಯ ಮತ್ತು ಹಾರ್ದಿಕ್ ಜೊತೆಯಾಟವು ನಮಗೆ ಬಹಳ ಮುಖ್ಯವಾಗಿತ್ತು, ಏಕೆಂದರೆ ನಾವು ನಿರಂತರವಾಗಿ ವಿಕೆಟ್‌’ಗಳನ್ನು ಕಳೆದುಕೊಳ್ಳುತ್ತಿದ್ದೆವು. ಆದ್ದರಿಂದ ಕ್ರೀಸ್‌’ನಲ್ಲಿ ಉಳಿಯುವ ಆಟಗಾರನ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಜೊತೆಗೂಡಿ ಸೂರ್ಯ ಈ ಸಾಧನೆ ಮಾಡಿದ್ದು, ಕೊನೆಗೂ ಅಮೋಘ ಜೊತೆಯಾಟವಾಗಿತ್ತು” ಎಂದಿದ್ದಾರೆ.

ಇದನ್ನೂ ಓದಿ: “ನಾನು ವಿಚ್ಛೇದನ ಪಡೆಯುತ್ತಿದ್ದೇನೆ…”- ಐಶ್ವರ್ಯಾ ಜೊತೆ ಡಿವೋರ್ಸ್ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ಹೇಳಿಕೆ

182 ರನ್‌ಗಳ ಗುರಿ ಬೆನ್ನತ್ತಿದ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಅಫ್ಘಾನಿಸ್ತಾನವನ್ನು 20 ಓವರ್‌ಗಳಲ್ಲಿ 134 ರನ್‌’ಗಳಿಗೆ ಸೀಮಿತಗೊಳಿಸಿದರು. ಬುಮ್ರಾ  ತಮ್ಮ ನಾಲ್ಕು ಓವರ್‌’ಗಳಲ್ಲಿ 7ರನ್ ನೀಡಿ 3 ವಿಕೆಟ್ ಕಿತ್ತರು. ಇವರ ಬಗ್ಗೆ ಮಾತನಾಡಿದ ರೋಹಿತ್, “ಬುಮ್ರಾ ತನ್ನ ಪಾತ್ರವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ. ಸವಾಲುಗಳನ್ನು ಸ್ವೀಕರಿಸಲು ಯಾವಾಗಲೂ ಸಿದ್ಧನಿರುತ್ತಾನೆ. ನಮಗೆ ಆತನ ಬಗ್ಗೆ ತಿಳಿದಿದೆ. ಆತನನ್ನು ಬುದ್ಧಿವಂತಿಕೆಯಿಂದ ಬಳಸುವುದು ಸಹ ಮುಖ್ಯ” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News