ಬಾಲ್ ಹಿಡಿಯುವ ಭರದಲ್ಲಿ ಜಾರಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..! ಮೈದಾನದಲ್ಲಿ ನಾಚಿನೀರಾದ ಹಿಟ್ ಮ್ಯಾನ್

Rohit Sharma pants slip: ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬಾಲ್ ಹಿಡಿಯುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿದರು. ಆದರೆ ಚೆಂಡು ಕೈಯಿಂದ ಜಾರಿಬಿದ್ದಲ್ಲದೆ, ಪ್ಯಾಂಟ್ ಕೂಡ ಕೆಳಕ್ಕೆ ಬಿದ್ದಿದೆ. ಇದನ್ನು ಕಂಡ ರೋಹಿತ್ ಶರ್ಮಾ ಒಂದು ಕ್ಷಣ ನಾಚಿ ನೀರಾಗಿದ್ದಾರೆ.

Written by - Bhavishya Shetty | Last Updated : Apr 16, 2024, 08:35 PM IST
    • ಬಾಲ್ ಹಿಡಿಯುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿದರು
    • ರೋಹಿತ್ ಶರ್ಮಾ ಪ್ಯಾಂಟ್ ಜಾರಿಬಿದ್ದಿದ್ದು ಈ ವಿಡಿಯೋ ಎಲ್ಲೆಡೆ ವೈರಲ್
    • ಇದನ್ನು ಕಂಡ ರೋಹಿತ್ ಶರ್ಮಾ ಒಂದು ಕ್ಷಣ ನಾಚಿ ನೀರಾಗಿದ್ದಾರೆ.
ಬಾಲ್ ಹಿಡಿಯುವ ಭರದಲ್ಲಿ ಜಾರಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..! ಮೈದಾನದಲ್ಲಿ ನಾಚಿನೀರಾದ ಹಿಟ್ ಮ್ಯಾನ್ title=
Rohit Sharma Pant Slip

Rohit Sharma pants slip: ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದ ವೇಳೆ ರೋಹಿತ್ ಶರ್ಮಾ ಪ್ಯಾಂಟ್ ಜಾರಿಬಿದ್ದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲ್ ಹಿಡಿಯುವ ಭರದಲ್ಲಿ ಹೀಗಾಗಿದೆ.

ಇದನ್ನೂ ಓದಿ: RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿ

ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬಾಲ್ ಹಿಡಿಯುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿದರು. ಆದರೆ ಚೆಂಡು ಕೈಯಿಂದ ಜಾರಿಬಿದ್ದಲ್ಲದೆ, ಪ್ಯಾಂಟ್ ಕೂಡ ಕೆಳಕ್ಕೆ ಬಿದ್ದಿದೆ. ಇದನ್ನು ಕಂಡ ರೋಹಿತ್ ಶರ್ಮಾ ಒಂದು ಕ್ಷಣ ನಾಚಿ ನೀರಾಗಿದ್ದಾರೆ.

12ನೇ ಓವರ್‌’ನಲ್ಲಿ ಆಕಾಶ್ ಮಧ್ವಲ್ ಬೌಲಿಂಗ್ ಮಾಡುತ್ತಿದ್ದು, ಓವರ್‌’ನ ನಾಲ್ಕನೇ ಎಸೆತದಲ್ಲಿ ರುತುರಾಜ್ ಮಿಡ್‌ವಿಕೆಟ್‌’ನಲ್ಲಿ ಶಾಟ್ ಹೊಡೆದರು. ರೋಹಿತ್ ಶರ್ಮಾ ಇಲ್ಲಿ ಕ್ಯಾಚ್ ಪಡೆಯುವ ಅವಕಾಶವನ್ನು ಕಂಡು ಮುಂದೆ ಬಂದರು. ಆದರೆ ಚೆಂಡು ಕೈ ಜಾರಿದ್ದಲ್ಲದೆ ನೆಲಕ್ಕೆ ಬಿತ್ತು. ಅದನ್ನು ಹೆಕ್ಕಲೆಂದು ಡೈವ್‌ ಮಾಡಿದ್ದಾರೆ.

ಈ ಸಮಯದಲ್ಲಿ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಅವರು ಟಿವಿ ಬ್ರಾಡ್‌ ಕಾಸ್ಟರ್ ಚಾನೆಲ್ ಸ್ಟಾರ್ ಸ್ಪೋರ್ಟ್ಸ್ ಹಿಂದಿಯ ಕಾಮೆಂಟರಿ ಬಾಕ್ಸ್‌’ನಲ್ಲಿ ಇದ್ದರು. ಘಟನೆ ನಡೆದಾಗ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: ಕಲ್ಲಂಗಡಿ ಹಣ್ಣು ತಿಂದ ಬಳಿಕ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ…

ಇನ್ನು ಇದಾದ ಬಳಿಕ ಕ್ಯಾಮರಾ ಮತ್ತೆ ರೋಹಿತ್ ಶರ್ಮಾರನ್ನು ಫೋಕಸ್ ಮಾಡಿದೆ. ಈ ಸಂದರ್ಭದಲ್ಲಿ ರೋಹಿತ್, ತಮ್ಮ ಪ್ಯಾಂಟ್’ನ ಗಂಟು ಕಟ್ಟುತ್ತಿರುವುದು ಕಂಡು ಬಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News