ಮುಂಬೈ: ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 37 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ರಾಜಸ್ಥಾನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ನಿಗದಿತ 20 ಓವರ್‍ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 192 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತು. ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ್ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: IPL 2022: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ ಈಗ ಐಪಿಎಲ್ ಹೀರೋ!
ಹಾರ್ದಿಕ್ ಪಾಂಡ್ಯ ಅಮೋಘ ಆಟ
Hardik Pandya is adjudged Player of the Match for his all round show, which comprised an 87*, a brilliant run-out and bowling figures of 1/18 (2.3 overs)#TATAIPL #RRvGT pic.twitter.com/gBRUiq5gd5
— IndianPremierLeague (@IPL) April 14, 2022
ನಾಯಕ ಹಾರ್ದಿಕ್ ಪಾಂಡ್ಯ(ಅಜೇಯ 87) ಅಮೋಘ ಆಟದ ನೆರವಿನಿಂದ ಗುಜರಾತ್ ಬಹೃತ್ ಮೊತ್ತವನ್ನು ಪೇರಿಸಲು ಸಾಧ‍್ಯವಾಯಿತು. 52 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಭರ್ಜರಿ ಅರ್ಧಶತಕ ಸಿಡಿಸಿದರು. ಇನ್ನುಳಿದಂತೆ ಅಭಿನವ್ ಮನೋಹರ್(43), ಡೇವಿಡ್ ಮಿಲ್ಲರ್(31) ರನ್ ಗಳಿಸಿದರು. ರಾಜಸ್ಥಾನ್ ಪರ ಕುಲದೀಪ್ ಸೇನ್, ಯಜುವೇಂದ್ರ ಚಹಾಲ್ ಹಾಗೂ ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ರಾಜಸ್ಥಾನ್ ಕಳಪೆ ಪ್ರದರ್ಶನ
ಮೊದಲು ಬೌಲಿಂಗ್‍ನಲ್ಲಿ ಕಳಪೆ ಪ್ರದರ್ಶನ ತೋರಿದ ರಾಜಸ್ಥಾನ್ ಬ್ಯಾಟಿಂಗ್‍ನಲ್ಲಿಯೂ ವೈಫಲ್ಯ ಅನುಭವಿಸಿತು. ಜೋಸ್ ಬಟ್ಲರ್(54) ಅರ್ಧಶತಕದ ಹೊರತಾಗಿ ಬೇರಾವ ಆಟಗಾರು ಚೆನ್ನಾಗಿ ಆಡಲಿಲ್ಲ. ಶಿಮ್ರಾನ್ ಹೆಟ್ಮೆಯರ್(29), ರಿಯಾನ್ ಪರಾಗ್(18) ಮತ್ತು ಜೇಮ್ಸ್ ನೀಶಮ್(17) ರನ್ ಗಳಿಸಿದರು. ಗುಜರಾತ್ ಪರ ಲಾಕಿ ಫರ್ಗುಸನ್ ಮತ್ತು ಯಶ್ ದಯಾಲ್ ತಲಾ 3 ವಿಕೆಟ್ ಗಳಿಸಿ ಮಿಂಚಿದರು.
ಇದನ್ನೂ ಓದಿ: RCB Fan Poster: ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುವವರೆಗೂ ಮದುವೆಯಾಗೋಲ್ಲ- ಮಹಿಳಾ ಅಭಿಮಾನಿಯ ಪೋಸ್ಟರ್ ವೈರಲ್
ಅಗ್ರಸ್ಥಾನಕ್ಕೇರಿದ ಗುಜರಾತ್
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಹೊಸ ತಂಡವಾಗಿ ಸೇರ್ಪಡೆಗೊಂಡಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಆಡಿರುವ 5 ಪಂದ್ಯಗಲ್ಲಿ 4 ಗೆಲವುಗಳೊಂದಿಗೆ ಒಟ್ಟು 8 ಅಂಕಗಳನ್ನು ಸಂಪಾದಿಸಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ಟೂರ್ನಿಯಲ್ಲಿ 2ನೇ ಸೋಲು ಕಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿತಕಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.