IPL 2024: 20 ಎಸೆತ ಆಡುವಷ್ಟರಲ್ಲಿ 2 ಬಾರಿ ಸ್ಥಗಿತಗೊಂಡ RR vs LSG ಮ್ಯಾಚ್! ಕಾರಣವೇನು ಗೊತ್ತಾ?

LSG vs RR Match Stop: ಪಂದ್ಯದ ಮೊದಲ ಓವರ್‌’ನಲ್ಲಿ ಸ್ಪೈಡರ್-ಕ್ಯಾಮ್‌’ನಲ್ಲಿ ಕೆಲವು ಸಮಸ್ಯೆ ಉಂಟಾಗಿತ್ತು, ಇದರಿಂದಾಗಿ ಕೆಲವು ನಿಮಿಷಗಳ ಕಾಲ ಆಟವನ್ನು ನಿಲ್ಲಿಸಬೇಕಾಯಿತು. ಇದಾದ ಬಳಿಕ ಅದೇ ಇನಿಂಗ್ಸ್‌’ನ ನಾಲ್ಕನೇ ಓವರ್‌’ನಲ್ಲಿ ಬೇಲ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಪಂದ್ಯವನ್ನು ಮತ್ತೆ ನಿಲ್ಲಿಸಲಾಯಿತು.

Written by - Bhavishya Shetty | Last Updated : Mar 24, 2024, 08:27 PM IST
    • ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ನಾಲ್ಕನೇ ಪಂದ್ಯ
    • ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು
    • ಈ ಪಂದ್ಯದ ಮಧ್ಯೆ ಎರಡು ಬಾರಿ ಆಟ ಸ್ಥಗಿತಗೊಂಡಿದ್ದು ಗಮನಕ್ಕೆ ಬಂದಿದೆ
IPL 2024: 20 ಎಸೆತ ಆಡುವಷ್ಟರಲ್ಲಿ 2 ಬಾರಿ ಸ್ಥಗಿತಗೊಂಡ RR vs LSG ಮ್ಯಾಚ್! ಕಾರಣವೇನು ಗೊತ್ತಾ? title=
RR vs LSG Match Stop

LSG vs RR Match Stop: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ IPL 2024ರ ನಾಲ್ಕನೇ ಪಂದ್ಯವು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಈ ಪಂದ್ಯದ ಮಧ್ಯೆ ಎರಡು ಬಾರಿ ಆಟ ಸ್ಥಗಿತಗೊಂಡಿದ್ದು ಗಮನಕ್ಕೆ ಬಂದಿದೆ.

ಇದನ್ನೂ ಓದಿ: ವಯಸ್ಸು 38, ಅವಳಿ ಮಕ್ಕಳ ತಂದೆ… ಈ ಕ್ರಿಕೆಟರ್ ತವರು ಚೆನ್ನೈ ಆದ್ರೂ IPLನಲ್ಲಿ ಆಡೋದು RCB ಪರ!! ಯಾರಿವರು ಗೊತ್ತಾಯ್ತ?

ಪಂದ್ಯದ ಮೊದಲ ಓವರ್‌’ನಲ್ಲಿ ಸ್ಪೈಡರ್-ಕ್ಯಾಮ್‌’ನಲ್ಲಿ ಕೆಲವು ಸಮಸ್ಯೆ ಉಂಟಾಗಿತ್ತು, ಇದರಿಂದಾಗಿ ಕೆಲವು ನಿಮಿಷಗಳ ಕಾಲ ಆಟವನ್ನು ನಿಲ್ಲಿಸಬೇಕಾಯಿತು. ಇದಾದ ಬಳಿಕ ಅದೇ ಇನಿಂಗ್ಸ್‌’ನ ನಾಲ್ಕನೇ ಓವರ್‌’ನಲ್ಲಿ ಬೇಲ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಪಂದ್ಯವನ್ನು ಮತ್ತೆ ನಿಲ್ಲಿಸಲಾಯಿತು. ಈ ದೃಶ್ಯ ನೋಡಿದ ಜನ ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಲ್ ಬಗ್ಗೆ ಗೇಲಿ ಮಾಡುತ್ತಿದ್ದಾರೆ.

ಈ ಐಪಿಎಲ್ ಸೀಸನ್‌’ನ 4ನೇ ಪಂದ್ಯ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದಿದ್ದು, ಸ್ಪೈಡರ್ ಕ್ಯಾಮ್ ಸಮಸ್ಯೆಯಿಂದಾಗಿ ಪಂದ್ಯವನ್ನು ಮೊದಲ ಓವರ್‌ನಲ್ಲಿ ನಿಲ್ಲಿಸಬೇಕಾಯಿತು. ಮೊದಲ ಓವರ್‌’ನ ಎರಡು ಎಸೆತಗಳ ನಂತರ ಸ್ಪೈಡರ್ ಕ್ಯಾಮ್ ವೈರ್ ಒಡೆದು ಔಟ್ ಫೀಲ್ಡ್ ಮೇಲೆ ಬಿದ್ದಿದ್ದರಿಂದ ತಡವಾಯಿತು. ಇದರ ನಂತರ ಇಂಜಿನಿಯರ್‌ಗಳು ಅದನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವಾಗುವವರೆಗೆ ಆಟವನ್ನು ಕೆಲವು ನಿಮಿಷಗಳ ಕಾಲ ವಿರಾಮಗೊಳಿಸಲಾಯಿತು.

ಇದನ್ನೂ ಓದಿ: ಆರಂಭಿಕ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ RCBಗೆ ಸಿಂಹಸ್ವಪ್ನವಾಗಿ ಕಾಡಿದ ಈ ಎಂ.ರೆಹಮಾನ್ ಯಾರು? ಆತನ ಹಿನ್ನೆಲೆ ಏನು ಗೊತ್ತಾ?

ಸ್ಪೈಡರ್-ಕ್ಯಾಮ್ ಸಮಸ್ಯೆ ಬಗೆಹರಿದ ಬಳಿಕ, ರಾಜಸ್ಥಾನ ತಂಡವು ಮತ್ತೆ ಬ್ಯಾಟಿಂಗ್ ಆರಂಭಿಸಿತು. ಇನಿಂಗ್ಸ್’ನ ನಾಲ್ಕನೇ ಓವರ್’ನಲ್ಲಿ ನವೀನ್ ಉಲ್ ಹಕ್ ಬೌಲಿಂಗ್ ಮಾಡುತ್ತಿದ್ದರು. ಆದರೆ ಅವರ ಎರಡನೇ ಎಸೆತದ ಸಂದರ್ಭದಲ್ಲಿ ಬೇಲ್ ನಲ್ಲಿ ಸಮಸ್ಯೆ ಎದುರಾಯಿತು. ಅಂದರೆ ಬೇಲ್ಸ್’ನಲ್ಲಿ ಲೈಟ್ ಉರಿಯುತ್ತಿರಲಿಲ್ಲ. ಇದರ ನಂತರ ಅವುಗಳನ್ನು ಬದಲಾಯಿಸಲಾಯಿತು. ಇದರಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News