Malaika Arora : ಶೀಘ್ರದಲ್ಲೇ ಅಭಿಮಾನಿಗಳಿಗೆ 'ಬಿಗ್ ಸರ್​ಪ್ರೈಸ್' ನೀಡಲಿದ್ದಾರೆ ಮಲೈಕಾ ಅರೋರಾ!

ನನ್ನದೇ ನಿರ್ಮಾಣದ 'ಫಿಟ್‌ನೆಸ್ ಅಪ್ಲಿಕೇಶನ್‌' ಸದ್ಯದಲ್ಲೇ ಹೊರ ಬರಲಿದೆ. ಇದರ ಎಲ್ಲ ರೀತಿಯ ಕೆಲಸಗಳು ಪೂರ್ಣಗೊಂಡಿವೆ. ನಾವು ಆನ್‌ಲೈನ್ ಆಡಿಷನ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ, ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ.

Written by - Channabasava A Kashinakunti | Last Updated : Jul 25, 2021, 10:48 AM IST
  • ಬಾಲಿವುಡ್ ನಟಿ ಮಲೈಕಾ ಅರೋರಾ ಶೀಘ್ರದಲ್ಲೇ ಅಭಿಮಾನಿಗಳಿಗೆ 'ಬಿಗ್ ಸರ್​ಪ್ರೈಸ್'
  • ಇತ್ತೀಚಿಗೆ ಸಂದರ್ಶನವೊಂದರಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ
  • ಮಲೈಕಾ ಹೊರ ತರಲಿದ್ದಾರೆ 'ಫಿಟ್‌ನೆಸ್ ಅಪ್ಲಿಕೇಶನ್‌'
Malaika Arora : ಶೀಘ್ರದಲ್ಲೇ ಅಭಿಮಾನಿಗಳಿಗೆ 'ಬಿಗ್ ಸರ್​ಪ್ರೈಸ್' ನೀಡಲಿದ್ದಾರೆ ಮಲೈಕಾ ಅರೋರಾ!

ನವದೆಹಲಿ : ಫೋಟೋ ಮತ್ತು ವೀಡಿಯೊಗಳ ಮೂಲಕ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ  ಮಲೈಕಾ ಅರೋರಾ ಶೀಘ್ರದಲ್ಲೇ ಅಭಿಮಾನಿಗಳಿಗೆ 'ಬಿಗ್ ಸರ್​ಪ್ರೈಸ್' ನೀಡಲಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಲೈಕಾ ಅರೋರಾ ತನ್ನ ಸಹೋದ್ಯೋಗಿಗಳೊಂದಿಗೆ ಹೊಸ ಪ್ರಾಜೆಕ್ಟ್ ತುಂಬಾ ಬ್ಯುಸಿ ಆಗಿದ್ದಾರೆ.

ಎರಡು ವರ್ಷಗಳ ಪ್ರಾಜೆಕ್ಟ್ ಇದು :

ಮಲೈಕಾ ಅರೋರಾ(Malaika Arora) ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ 'ನಾನು ಹೊಸ ಪ್ರಾಜೆಕ್ಟ್ ಒಂದಕ್ಕೆ ಕೈ ಹಾಕಿದ್ದನೆ. ಅದು ಸದ್ಯ ಅಂತಿಮ ಹಂತದಲ್ಲಿ ಇದೆ. ಈ ಪ್ರಾಜೆಕ್ಟ್ ನಲ್ಲಿ  ನಾನು ಕೆಲವು ದೃಶಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ ಮತ್ತೆ ಇದರ ನಿರ್ಮಾಣ ಹೊಣೆಯನ್ನ ನಾನೇ ಹೊತ್ತಿದ್ದೇನೆ. ಈಗಾಗಲೇ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಈ ಪ್ರಾಜೆಕ್ಟ್ ಮುಗಿಸಲು  ಪ್ರಾರಂಭಿಸಲಾಗಿದೆ. ಈ ಕಾರಣದಿಂದಾಗಿ ಸಧ್ಯದ ನನ್ನ ಕೆಲವು ಕೆಲಸಗಳನ್ನ ಮುಂದೊಡಿದ್ದೇನೆ. ಇದಕ್ಕಾಗಿ ನಾನು ಕೆಲವು ಪ್ರಸಿದ್ಧ ವ್ಯಕ್ತಿಗಳ ಜೊತೆ ಸೇರಿ ಕೆಲಸ ಮಾಡಿದ್ದೇನೆ. ಅಲ್ಲದೆ ಕೆಲವರ ಜೊತೆ  ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ ..!

ಮಲೈಕಾ ಹೊರ ತರಲಿದ್ದಾರೆ 'ಫಿಟ್‌ನೆಸ್ ಅಪ್ಲಿಕೇಶನ್‌' :

ನನ್ನದೇ ನಿರ್ಮಾಣದ 'ಫಿಟ್‌ನೆಸ್ ಅಪ್ಲಿಕೇಶನ್‌'(Fitness App) ಸದ್ಯದಲ್ಲೇ ಹೊರ ಬರಲಿದೆ. ಇದರ ಎಲ್ಲ ರೀತಿಯ ಕೆಲಸಗಳು ಪೂರ್ಣಗೊಂಡಿವೆ. ನಾವು ಆನ್‌ಲೈನ್ ಆಡಿಷನ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ, ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ. ನಾನು ನನ್ನ ಅಪ್ಲಿಕೇಶನ್‌ನಲ್ಲಿ ಸಹ ಕೆಲಸ ಮಾಡುತ್ತಿದ್ದೇನೆ. ನನ್ನ ಅಪ್ಲಿಕೇಶನ್ ಸಾಧ್ಯವಾದಷ್ಟು ಜನರನ್ನು ತಲುಪಬೇಕೆಂದು ನಾನು ಬಯಸುತ್ತೇನೆ ಮತ್ತು ನಾವು ಫಿಟ್‌ನೆಸ್ ಕುರಿತು ನಮ್ಮ ಫಿಟ್‌ನೆಸ್ ಟ್ರೈನರ್ ಜೊತೆ ಕೂಡ ಮಾತನಾಡಬಹುದು ಎಂದು ತಿಳಿಸಿದ್ದಾರೆ.

ಮಲೈಕಾ ವೃತ್ತಿಜೀವನ :

ಮಲೈಕಾ ಅರೋರಾ ಅವರ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇದಲ್ಲದೆ, ಅವರ ನಟಿಸಿದ ಐಟಂ ಸಾಂಗ್(Item Songs) ಸಿನಿಮಾಗಳು ಸಾಕಷ್ಟು ಜನಪ್ರಿಯವಾಗಿವೆ. ಅವರು 'ಚಯಾ ಚೈಯಾ', 'ಅನಾರ್ಕಲಿ' ಮತ್ತು 'ಮುನ್ನೀ ಬದ್ನಾಮ್' ನಂತಹ ಸೂಪರ್ ಹಿಟ್ ಐಟಂ ಡಾನ್ಸ್ ಗಳನ್ನ ನೀಡಿದ್ದಾರೆ. ಇದರೊಂದಿಗೆ, ಅವರ ಡಾನ್ಸ್ ವೀಡಿಯೊಗಳು ಸಹ ಸಾಕಷ್ಟು ಪ್ರಸಿದ್ಧವಾಗಿವೆ.   

ಇದನ್ನೂ ಓದಿ : ರಾಜ್ ಕುಂದ್ರ ಬಂಧನದ ಬಗ್ಗೆ ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News