ರೋಹಿತ್, ಕೊಹ್ಲಿಯಿಂದಲೂ ಸಾಧ್ಯವಾಗದ ಪಾಕಿಸ್ತಾನದ ಈ ವಿಶ್ವದಾಖಲೆ ಮುರಿದೇಬಿಟ್ಟರು ಗಿಲ್-ಜೈಸ್ವಾಲ್ ಜೋಡಿ!

IND vs WI, Shubman Gill and Yashasvi Jaiswal Record: ಈ ಪಂದ್ಯದಲ್ಲಿ ಈ ಜೋಡಿ ಪಾಕಿಸ್ತಾನದ ಸ್ಟಾರ್ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

Written by - Bhavishya Shetty | Last Updated : Aug 13, 2023, 09:15 AM IST
    • 179 ರನ್‌’ಗಳ ಚೇಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಒಂಬತ್ತು ವಿಕೆಟ್‌’ಗಳ ಜಯವನ್ನು ದಾಖಲಿಸಿತು.
    • ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
    • ಪಾಕಿಸ್ತಾನದ ಸ್ಟಾರ್ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ
ರೋಹಿತ್, ಕೊಹ್ಲಿಯಿಂದಲೂ ಸಾಧ್ಯವಾಗದ ಪಾಕಿಸ್ತಾನದ ಈ ವಿಶ್ವದಾಖಲೆ ಮುರಿದೇಬಿಟ್ಟರು ಗಿಲ್-ಜೈಸ್ವಾಲ್ ಜೋಡಿ! title=
Shubman Gill and Yashasvi Jaiswal

IND vs WI, Shubman Gill and Yashasvi Jaiswal Record: ಶನಿವಾರದಂದು ಲಾಡರ್‌ಹಿಲ್‌’ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಭಾರತದ 4ನೇ T20I ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಇನ್ನು ಈ ಜೋಡಿ ವಿಶ್ವದಾಖಲೆ ಮುರಿದಿದ್ದು, 165 ರನ್ ಜೊತೆಯಾಟದಲ್ಲಿ ವಿಂಡೀಸ್ ಅನ್ನು ಸೋಲಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ಭವಿಷ್ಯದ ‘ಜಹೀರ್ ಖಾನ್" ಈ ಬೌಲರ್! ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಕಿಲಾಡಿ ಈತ

ಈ ಇಬ್ಬರ ಪ್ರಮುಖ ಆಟದಿಂದಲೇ ಫ್ಲೋರಿಡಾದಲ್ಲಿ 179 ರನ್‌’ಗಳ ಚೇಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಒಂಬತ್ತು ವಿಕೆಟ್‌’ಗಳ ಜಯವನ್ನು ದಾಖಲಿಸಿತು. ಇನ್ನು ಈ ಪಂದ್ಯದಲ್ಲಿ ಈ ಜೋಡಿ ಪಾಕಿಸ್ತಾನದ ಸ್ಟಾರ್ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಗಿಲ್ ಮತ್ತು ಜೈಸ್ವಾಲ್ ಅಂತರರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಎರಡನೇ ಒಟ್ಟಾಗಿ ಓಪನಿಂಗ್ ಮಾಡಿದ್ದಾರೆ. ಚೇಸಿಂಗ್‌’ನ 11 ಓವರ್‌ಗಳ ಒಳಗೆ ಇಬ್ಬರೂ ತಮ್ಮ ಅರ್ಧಶತಕಗಳ ಬಾರಿಸಿದ್ದರು. ಚೇಸಿಂಗ್‌’ನಲ್ಲಿ ಈ ಜೋಡಿ 158 ರನ್‌ ಕಲೆ ಹಾಕಿದ್ದು, ಈ ಮೂಲಕ ಅದು ಪಾಕಿಸ್ತಾನದ ಜೋಡಿಯ ವಿಶ್ವ ದಾಖಲೆಯನ್ನು ಪುಡಿಮಾಡಿದೆ. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ ಆರಂಭಿಕ ವಿಕೆಟ್ ಜೊತೆಯಾಟದ ದಾಖಲೆಯನ್ನು ಹೊಂದಿದ್ದರು. 2021 ರ ಡಿಸೆಂಬರ್‌ನಲ್ಲಿ ವಿಂಡೀಸ್ ವಿರುದ್ಧ ಪಾಕಿಸ್ತಾನ 20 ಓವರ್‌ಗಳ ಪಂದ್ಯದಲ್ಲಿ 208 ರನ್‌’ಗಳನ್ನು ಬೆನ್ನಟ್ಟಿದಾಗ ಅವರು ಮೊದಲ ವಿಕೆಟ್‌’ಗೆ 158 ರನ್ ಗಳಿಸಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ T20I ಗಳಲ್ಲಿ ಅತ್ಯಧಿಕ ಆರಂಭಿಕ ಸ್ಟ್ಯಾಂಡ್ಸ್:

1. ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್ - 165 ರನ್

2. ಬಾಬರ್ ಅಜಮ್-ಮೊಹಮ್ಮದ್ ರಿಜ್ವಾನ್ - 158 ರನ್

3. ಕೆವಿನ್ ಒ'ಬ್ರಿಯಾನ್-ಪಾಲ್ ಸ್ಟಿರ್ಲಿಂಗ್ - 154 ರನ್

4. ಕ್ವಿಂಟನ್ ಡಿ ಕಾಕ್-ರೀಜಾ ಹೆಂಡ್ರಿಕ್ಸ್ - 152 ರನ್

5. ಮಾರ್ಟಿನ್ ಗಪ್ಟಿಲ್-ಕಾಲಿನ್ ಮುನ್ರೊ - 136 ರನ್

ಈ ಸ್ಟಾರ್ ಜೋಡಿಯ 165 ರನ್‌’ಗಳ ಆರಂಭಿಕ ಜೊತೆಯಾಟವು ಮತ್ತೊಂದು ದಾಖಲೆ ಪಟ್ಟಿಗೆ ಸೇರುವಂತೆ ಮಾಡಿದೆ. ಯಾವುದೇ ವಿಕೆಟ್‌’ಗೆ, ಯಾವುದೇ ಎದುರಾಳಿ ವಿರುದ್ಧ T20I ಗಳಲ್ಲಿ ಟೀಂ ಇಂಡಿಯಾ ಬಾರಿಸಿದ ಜಂಟಿ ಎರಡನೇ ಅತ್ಯಧಿಕ ಸ್ಕೋರ್ ಇದಾಗಿದೆ. ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಅವರು 2022 ರಲ್ಲಿ ಐರ್ಲೆಂಡ್ ವಿರುದ್ಧದ T20I ನಲ್ಲಿ 176 ನ್ ಗಳಿಸುವ ಮೂಲಕ ಈ ಸ್ವರೂಪದಲ್ಲಿ ಅತಿದೊಡ್ಡ ಭಾರತೀಯರ ದಾಖಲೆಯನ್ನು ಹೊಂದಿದ್ದಾರೆ.

ಆದರೆ ಜೈಸ್ವಾಲ್ ಮತ್ತು ಗಿಲ್ ಈಗ ಈ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. 2017 ರಲ್ಲಿ ಶ್ರೀಲಂಕಾ ವಿರುದ್ಧ 165 ರನ್ ಗಳಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೊತೆ ಈ ಸ್ಥಾನವನ್ನು ಹಂಚಿಕೊಂಡಿದ್ದಾರೆ.

T20I ಗಳಲ್ಲಿ ಭಾರತಕ್ಕಾಗಿ ಅತ್ಯಧಿಕ ಪಾಲುದಾರಿಕೆ ಹೊಂದಿದ ಜೋಡಿ ಹೀಗಿದೆ:

1. ದೀಪಕ್ ಹೂಡಾ-ಸಂಜು ಸ್ಯಾಮ್ಸನ್: 176 ರನ್

2. ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್: 165 ರನ್

2. ಕೆಎಲ್ ರಾಹುಲ್-ರೋಹಿತ್ ಶರ್ಮಾ: 165 ರನ್

4. ಶಿಖರ್ ಧವನ್-ರೋಹಿತ್ ಶರ್ಮಾ: 160 ರನ್

5. ಶಿಖರ್ ಧವನ್-ರೋಹಿತ್ ಶರ್ಮಾ: 158 ರನ್

ಇದನ್ನೂ ಓದಿ: IND vs WI: 4ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು: Team India ವಿಜಯಕ್ಕೆ ಈ ಮೂವರೇ ಪ್ರಮುಖ ಕಾರಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News