Shubman Gill: ಹಾರ್ದಿಕ್ ಔಟಾಗಿ ಪೆವಿಲಿಯನ್‌ಗೆ ಹೋಗ್ತಿದ್ದಂತೆ ವಿಚಿತ್ರವಾಗಿ ಸಂಭ್ರಮಿಸಿದ ಶುಭ್‌ಮನ್ ಗಿಲ್..!

Shubman Gill Celebrates Hardik Pandya Wicket: ಗುಜರಾತ್ ಟೈಟಾನ್ಸ್ ಈ ಬಾರಿಯ ಐಪಿಎಲ್ ಸೀಸನ್ ಅನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

Written by - Chetana Devarmani | Last Updated : Mar 25, 2024, 11:48 AM IST
  • ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು
  • ಹಾರ್ದಿಕ್ ಪಾಂಡ್ಯ ಔಟಾದಾಗ ಶುಭ್‌ ಮನ್‌ ಗಿಲ್‌ ಸಂಭ್ರಮ
  • ಶುಭ್‌ ಮನ್‌ ಗಿಲ್‌ ಸೆಲಿಬ್ರೇಷನ್ ವಿಡಿಯೋ ವೈರಲ್‌
Shubman Gill: ಹಾರ್ದಿಕ್ ಔಟಾಗಿ ಪೆವಿಲಿಯನ್‌ಗೆ ಹೋಗ್ತಿದ್ದಂತೆ ವಿಚಿತ್ರವಾಗಿ ಸಂಭ್ರಮಿಸಿದ ಶುಭ್‌ಮನ್ ಗಿಲ್..!  title=

GT vs MI IPL Highlights: ಐಪಿಎಲ್ 2024 ರ 5 ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಶುಭ್‌ಮನ್ ಗಿಲ್ ಅವರ ಗುಜರಾತ್ ಟೈಟಾನ್ಸ್ ತಂಡ ಗೆಲುವು ಸಾಧಿಸಿದೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ರನ್‌ಗಳ ಜಯ ಸಾಧಿಸಿತು. ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ 168 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 162 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಗುಜರಾತ್ ಟೈಟಾನ್ಸ್ ಈ ಬಾರಿಯ ಐಪಿಎಲ್ ಸೀಸನ್ ಅನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ನಡುವೆ ನಡೆದ ಈ ಪಂದ್ಯದ ಬಳಿಕ ಹಲವು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇದರಲ್ಲಿ ಒಂದು ಶುಭ್‌ಮನ್ ಗಿಲ್ ಅವರ ವಿಡಿಯೋ. ಹಾರ್ದಿಕ್‌ ಪಾಂಡ್ಯ ಔಟಾಗಿ ಪೆವಿಲಿಯನ್‌ಗೆ ತೆರಳುತ್ತಿದ್ದಂತೆ ಶುಭ್‌ಮನ್ ಗಿಲ್ ನೀಡಿದ ಆ ರಿಯಾಕ್ಷನ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: Hardik Pandya: ʻನಾನಾ? ಹೌದು, ನೀನೇ!ʼ ರೋಹಿತ್ ಶರ್ಮಾʼರನ್ನು ಮೈದಾನದ ಮೂಲೆಯಲ್ಲಿ ನಿಲ್ಲಿಸಿದ ಹಾರ್ದಿಕ್ ಪಾಂಡ್ಯ.. ವಿಡಿಯೋ ವೈರಲ್!‌

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ 7ನೇ ಸ್ಥಾನದಲ್ಲಿ ಬಂದು, ಫಿನಿಶರ್ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕೊಂಚ ಎಡವಿದರು. ಮುಂಬೈ ಇಂಡಿಯನ್ಸ್ ಈ ಮ್ಯಾಚ್‌ ಗೆಲ್ಲಲು ಕೊನೆಯ ಆರು ಎಸೆತಗಳಲ್ಲಿ 19 ರನ್‌ ಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿದ್ದರು.

 

 

ಉಮೇಶ್ ಯಾದವ್ ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಸ್ಟಾರ್ ಆಲ್ ರೌಂಡರ್ ಪಾಂಡ್ಯ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ನೆಕ್ಸ್ಟ್‌ ಬಾಲ್‌ಗೆ 4 ಹೊಡೆದರು. ಮುಂಬೈ ಗೆಲುವಿಗೆ 4 ಎಸೆತಗಳಲ್ಲಿ 9 ರನ್‌ ಬೇಕಿತ್ತು. ಈ ವೇಳೆ ಉಮೇಶ್ ಎಸೆದ ಶಾರ್ಟ್ ಬಾಲ್ʼಗೆ ಹಾರ್ದಿಕ್ ಪಾಂಡ್ಯ ಔಟಾದರು. ಈ ಬಾಲ್‌ನ್ನು ಲಾಂಗ್ ಆನ್‌ನಲ್ಲಿ ನಿಂತಿದ್ದ ರಾಹುಲ್ ತೆವಾಟಿಯಾ ಕ್ಯಾಚ್ ಹಿಡಿದರು. 

ಈ ವಿಕೇಟ್‌ ಗುಜರಾತ್‌ ಟೈಟಾನ್ಸ್‌ ಗೆಲುವಿಗೆ ಪ್ಲಸ್ ಪಾಯಿಂಟ್ ಆಯಿತು. ಹಾಋದಿಕ್‌ ಔಟಾಗುತ್ತಿದ್ದಂತೆ ಗುಜರಾತ್‌ ಟೈಟಾನ್ಸ್‌ ನಾಯಕ ಶುಭ್‌ ಮನ್ ಗಿಲ್ ವಿಚಿತ್ರವಾಗಿ ಸೆಲೆಬ್ರೇಷನ್ ಮಾಡಿದರು. ಶುಭ್‌ ಮನ್ ಗಿಲ್‌ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ಇದನ್ನೂ ಓದಿ: ಮತ್ತೊಂದು ಅಪರೂಪದ ದಾಖಲೆ ಬರೆದ ವಿರಾಟ್.. ಗ್ಲೋಬಲ್‌ ಲೆವೆಲ್‌ಗೆ ಕಿಂಗ್‌ ಹವಾ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News