Sourav Ganguly: ರಿಷಬ್ ಅಪಘಾತದ ಕುರಿತು ಇದೆ ಮೊದಲ ಬಾರಿಗೆ ಮೌನ ಮುರಿದ ಗಂಗೂಲಿ, ಹೇಳಿದ್ದೇನು?

Team India: ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಮತ್ತು ಪುನರಾಗಮನ ಮಾಡುತ್ತಾರೆ ಎಂದು ಭರವಸೆಯನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ವ್ಯಕ್ತಪಡಿಸಿದ್ದಾರೆ. ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಶುಕ್ರವಾರ ಎನ್‌ಎಚ್ -58 ರಲ್ಲಿ ಜಾರಿ ಚಾಲನೆ ಮಾಡುವಾಗ ತಮ್ಮ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಗುರಿಯಾಗಿದ್ದರು.  

Written by - Nitin Tabib | Last Updated : Jan 3, 2023, 10:05 PM IST
  • ಮೊಣಕಾಲು ಮತ್ತು ಪಾದದ ಗಾಯಗಳಿಂದಾಗಿ ಮುಖ್ಯವಾಗಿ ರಿಷಬ್ ಪಂತ್ ಕನಿಷ್ಠ ಆರು ತಿಂಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ.
  • ದೆಹಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕರಾಗಲಿರುವ ಭಾರತೀಯ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷರು, ಕತಾರ್ ಫಿಫಾ ವಿಶ್ವಕಪ್ ಅನ್ನು ಆಯೋಜಿಸುವ ಮೂಲಕ ಗಮನಾರ್ಹ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
Sourav Ganguly: ರಿಷಬ್ ಅಪಘಾತದ ಕುರಿತು ಇದೆ ಮೊದಲ ಬಾರಿಗೆ ಮೌನ ಮುರಿದ ಗಂಗೂಲಿ, ಹೇಳಿದ್ದೇನು? title=
Sourav Ganguly On Rishabh Pant Accident

Sourav Ganguly Reaction: Team India: ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಮತ್ತು ಮತ್ತು ತಂಡಕ್ಕೆ ಪುನರಾಗಮನ ಮಾಡುತ್ತಾರೆ ಎಂಬ ಭರವಸೆಯನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ವ್ಯಕ್ತಪಡಿಸಿದ್ದಾರೆ. ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಶುಕ್ರವಾರ ಎನ್‌ಎಚ್ -58 ರಲ್ಲಿ ಜಾರಿ ಚಾಲನೆ ಮಾಡುವಾಗ ತಮ್ಮ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಗುರಿಯಾಗಿದ್ದರು. ಪ್ರಸ್ತುತ ಮ್ಯಾಕ್ಸ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅವರ ತಲೆ, ಬೆನ್ನು, ಮೊಳಕಾಲು ಗಾಯಗಳ ಮೇಲೆ ಚಿಕಿತ್ಸೆ ಮುಂದುವರೆದಿದೆ.

ಮೌನ ಮುರಿದ ಗಂಗೂಲಿ ಹೇಳಿದ್ದೇನು?
'ರಿಷಬ್ ಪಂತ್ ಅವರು ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ, ಜೀವನದಲ್ಲಿ ಕೆಲ ಸಂಗತಿಗಳು ನಡೆದು ಹೋಗುತ್ತವೆ ಮತ್ತು ನೀವು ಮುಂದುವರಿಯಬೇಕು ಎಂದು ನಿಮಗೂ ತಿಳಿದಿದೆ ಎಂಬುದನ್ನು ನಾನು ಹೇಳಬಲ್ಲೇ. ಆದ್ದರಿಂದ ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಮತ್ತು ಟ್ರ್ಯಾಕ್‌ಗೆ ಹಿಂತಿರುಗುತ್ತಾರೆ ಎಂದು ಭಾವಿಸುತ್ತೇನೆ' ಎಂದು ಗಂಗೂಲಿ ಹೇಳಿದ್ದಾರೆ.

ಸೆನ್ಸೇಷನಲ್ ಹೇಳಿಕೆ
ಮೊಣಕಾಲು ಮತ್ತು ಪಾದದ ಗಾಯಗಳಿಂದಾಗಿ ಮುಖ್ಯವಾಗಿ ರಿಷಬ್ ಪಂತ್ ಕನಿಷ್ಠ ಆರು ತಿಂಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ. ದೆಹಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕರಾಗಲಿರುವ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷರು, ಕತಾರ್ ಫಿಫಾ ವಿಶ್ವಕಪ್ ಅನ್ನು ಆಯೋಜಿಸುವ ಮೂಲಕ ಗಮನಾರ್ಹ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Astro Remedies 2023: ಹೊಸ ವರ್ಷದಲ್ಲಿ ಅದೃಷ್ಟದ ಬೆಂಬಲ ಪಡೆಯಲು ಇಂದಿನಿಂದಲೇ ಈ ಕೆಲಸ ಆರಂಭಿಸಿ

ಕತಾರ್ ಸಾಕಷ್ಟು ಟೀಕೆಗೆ ಗುರಿಯಾಯಿತು
'ನಾನು ಫುಟ್‌ಬಾಲ್ ಅನ್ನು ಹತ್ತಿರದಿಂದ ನೋಡುತ್ತೇನೆ ಮತ್ತು ನಾನು ಅದನ್ನು ಸ್ವಲ್ಪ ಅರ್ಥಮಾಡಿಕೊಳ್ಳುತ್ತೇನೆ ಎಂಬುದು ನಿಮಗೂ ತಿಳಿದಿದೆ. ನಾನು ಕ್ರಿಕೆಟ್ ಆಡಿರಬಹುದು ಆದರೆ ನಾನು ಫುಟ್ ಬಾಲ್ ಆಟದ ಸ್ವಲ್ಪ ನನಗೂ ತಿಳಿದಿದೆ. ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಫುಟ್ಬಾಲ್ ವಿಶ್ವಕಪ್ ಎಂದು ನಾನು ಭಾವಿಸುತ್ತೇನೆ. ರಷ್ಯಾ ಅದ್ಭುತ ಪ್ರದರ್ಶನ ಮೆರೆದಿದೆ ಮತ್ತು ಫುಟ್‌ಬಾಲ್ ವಿಶ್ವಕಪ್ ಅನ್ನು ಕತಾರ್ ಆಯೋಜಿಸಿದ್ದಕ್ಕಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಅದನ್ನು ಬೇರೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅತ್ಯಂತ ಯಶಸ್ವಿ ವಿಶ್ವಕಪ್ ಎಂದು ನಾನು ಭಾವಿಸುತ್ತೇನೆ' ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ-Makar Sankranti 2023ಕ್ಕೆ ಸಂಬಂಧಿಸಿದ ಈ ಪ್ರಶ್ನೆಗಳ ಉತ್ತರಕ್ಕಾಗಿ ಜನರು ಗೂಗಲ್ ಮೊರೆಹೋಗುತ್ತಿದ್ದಾರೆ.. ನೀವೂ ತಿಳಿದುಕೊಳ್ಳಿ

ವಿಶ್ವಕಪ್ ಫೈನಲ್ ಬಗ್ಗೆಯೂ ಹೇಳಿಕೆ 
ಫೈನಲ್‌ನಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಫ್ರೆಂಚ್ ಫಾರ್ವರ್ಡ್ ಕೈಲಿಯನ್ ಎಂಬಪ್ಪೆ ಅವರನ್ನು ಸೌರವ್ ಗಂಗೂಲಿ ಹೊಗಳಿದ್ದಾರೆ, ಆದರೆ ಇದರ ಹೊರತಾಗಿಯೂ ಅವರ ತಂಡವು ಸೋಲನ್ನು ಎದುರಿಸಬೇಕಾಯಿತು ಎಂದು ಅವರು ಹೇಳಿದ್ದಾರೆ, 'ಎಂಬಪ್ಪೆ ಚಿನ್ನದಂತೆ ಪರಿಶುದ್ಧರಾಗಿದ್ದಾರೆ ಮತ್ತು ವಿಶ್ವಕಪ್ ಫೈನಲ್‌ ಮುಗಿದಾಗಿನಿಂದ ಬಹುಶಃ ನಿದ್ರೆ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ವಿಶ್ವಕಪ್‌ನಲ್ಲಿ ನೀವು ನಾಲ್ಕು ಗೋಲುಗಳನ್ನು ಗಳಿಸಿ ಸೋಲುವುದು ಬಹಳ ಅಪರೂಪ. ಅವರ ವಿಷಯದಲ್ಲಿಯೂ ಅದೇ ಆಗಿದೆ ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News