ದುಬೈ: ಭಾನುವಾರ ನಡೆದ ಟಿ-20 ವಿಶ್ವಕಪ್ ಪಂದ್ಯ(T20 World Cup 2021)ದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡವು ಹೀನಾಯ ಸೋಲು ಕಂಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಬಾಬರ್ ಅಜಂ ನೇತೃತ್ವದ ಪಾಕ್ ತಂಡವು 10 ವಿಕೆಟ್‌ಗಳಿಂದ ಸೋಲಿಸಿತು. ಈ ಹೀನಾಯ ಸೋಲಿನೊಂದಿಗೆ ಟೀಂ ಇಂಡಿಯಾಗೆ ಸಂಕಷ್ಟ ಹೆಚ್ಚಾಗಿದೆ. ಭಾರತದ ಮುಂದಿನ ಪಂದ್ಯ ಅ.31 ರಂದು ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲನುಭವಿಸಿದರೆ ಟೂರ್ನಿಯಿಂದ ಹೊರಬೀಳುವ ಭೀತಿ ಎದುರಾಗಬಹುದು.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆಲ್ಲಲೇಬೇಕು
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಉಳಿಯಲು ಭಾರತವು ನ್ಯೂಜಿಲ್ಯಾಂಡ್(New Zealand) ವಿರುದ್ಧದ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಕೀವಿಸ್ ವಿರುದ್ಧ ಸೋಲನುಭವಿಸಿದರೆ ಟೀಂ ಇಂಡಿಯಾದ ವಿಶ್ವಕಪ್ ಅಭಿಯಾನಕ್ಕೆ ಅಪಾಯ ಎದುರಾಗುವ ಸಾಧ್ಯತೆ ಬಹುತೇಕ ಹೆಚ್ಚಾಗುತ್ತದೆ. ಪಾಕ್(Pakistan) ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಸೋತರೆ ಭಾರತವು ತನ್ನ ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಆಡಲಿದೆ. ಈ 3 ಪಂದ್ಯಗಳನ್ನು ಕೊಹ್ಲಿ ಪಡೆ ಹೆಚ್ಚು ಅಂತರದಿಂದ ಗೆಲ್ಲಬೇಕು. ಜೊತೆಗೆ ಇತರ ತಂಡಗಳ ಗೆಲುವು ಮತ್ತು ಸೋಲುಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.
ಇದನ್ನೂ ಓದಿ: Hardik Pandya Fitness Update: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆಯೇ ಹಾರ್ದಿಕ್ ಪಾಂಡ್ಯ?
ಪಾಕಿಸ್ತಾನ & ನ್ಯೂಜಿಲ್ಯಾಂಡ್ 2-2 ಪಂದ್ಯಗಳಲ್ಲಿ ಸೋಲಬೇಕು
ಟಿ-20 ವಿಶ್ವಕಪ್(T20 World Cup)ನ ಸೆಮಿಫೈನಲ್‌ಗೆ ಪ್ರವೇಶಿಸಲು ಭಾರತ ತಂಡವು ಅಗ್ರ 2ರಲ್ಲಿರಬೇಕು. ಭಾರತವು ಕೀವಿಸ್ ವಿರುದ್ಧ ಸೋಲನುಭವಿಸಿದರೆ ಆಗ ಪಾಕ್ ಮತ್ತು ನ್ಯೂಜಿಲ್ಯಾಂಡ್ ಕನಿಷ್ಠ 2 ಪಂದ್ಯಗಳನ್ನು ಸೋಲಬೇಕಾಗುತ್ತದೆ. ಇದರ ಹೊರತಾಗಿಯೂ ಉತ್ತಮ ರನ್ ರೇಟ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತ ತನ್ನ ಮುಂದಿನ ಉಳಿದ 3 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಾಕ್ ಮತ್ತು ನ್ಯೂಜಿಲ್ಯಾಂಡ್ 2 ಪಂದ್ಯಗಳಲ್ಲಿ ಸೋತರೂ ಭಾರತದ ವಿಶ್ವಕಪ್ ಅಭಿಯಾನಕ್ಕೆ ಜೀವ ಸಿಕ್ಕಂತಾಗುತ್ತದೆ. ಭಾರತ ಸೆಮಿಫೈನಲ್ ತಲುಪಬೇಕಾದರೆ ಪಾಕ್ ಅಥವಾ ನ್ಯೂಜಿಲ್ಯಾಂಡ್ ಎರಡರಲ್ಲಿ ಒಂದು ತಂಡವು ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯುವುದು ಅವಶ್ಯಕ. ಇದು ಅಫ್ಘಾನಿಸ್ತಾನಕ್ಕೂ ಅನ್ವಯಿಸುತ್ತದೆ.
ಸಣ್ಣ ತಂಡಗಳನ್ನು ನಿರ್ಲಕ್ಷಿಸುವಂತಿಲ್ಲ..!
ಅಫ್ಘಾನಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗದಿರಬಹುದು. ಆದರೆ ದೊಡ್ಡ ತಂಡಗಳಿಗೆ ಆಘಾತ ನೀಡುವ ಸಾಮರ್ಥ್ಯವನ್ನು ಆ ತಂಡ ಹೊಂದಿದೆ. ಸಣ್ಣ ತಂಡವೆಂದು ನಿರ್ಲಕ್ಷ್ಯ ಮಾಡಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಭಾರತ ತಂಡವು ಸಣ್ಣ ತಂಡಗಳ ವಿರುದ್ಧ ಎಚ್ಚರಿಕೆಯಿಂದ ಆಡಬೇಕಾಗಿದೆ. ವಿಶ್ವಕಪ್ ಅಭಿಯಾನದಲ್ಲಿ ಗೆಲುವು ಸಾಧಿಸಲು ವಿರಾಟ್ ಕೊಹ್ಲಿ(Virat Kohli) ಪಡೆ ವಿಶೇಷ ತಂತ್ರವನ್ನು ರೂಪಿಸಬೇಕಾದ ಅಗತ್ಯವಿದೆ. ನ್ಯೂಜಿಲ್ಯಾಂಡ್ ಜೊತೆಗೆ ಮುಂದಿನ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗುತ್ತದೆ.
ಇದನ್ನೂ ಓದಿ: T20 World Cup 2021: ಪಾಕ್ ಗೆಲುವಿನ ನಂತರ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು ಗೊತ್ತೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ