ಧೋನಿ... ರೋಹಿತ್‌ ಇಬ್ಬರೂ ಅಲ್ಲ... 100 ಟೆಸ್ಟ್ ಪಂದ್ಯಗಳನ್ನು ಆಡಿದ 12 ನೇ ಟೀಂ ಇಂಡಿಯಾ ಆಟಗಾರನೀತ!

Virat Kohli: ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 100 ನೇ ಟೆಸ್ಟ್ ಆಡಿದ 12 ನೇ ಟೀಂ ಇಂಡಿಯಾ ಆಟಗಾರ ಎನಿಸಿಕೊಂಡಿದ್ದಾರೆ..   

Written by - Savita M B | Last Updated : Mar 5, 2024, 09:06 AM IST
  • ವಿರಾಟ್ ಕೊಹ್ಲಿ 2022 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ 100 ನೇ ಟೆಸ್ಟ್ ಆಡಿದ್ದರು
  • ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್‌ನಲ್ಲಿ ಕೊಹ್ಲಿ 45 ರನ್ ಗಳಿಸಿದ್ದರು
  • ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 113 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ
ಧೋನಿ... ರೋಹಿತ್‌ ಇಬ್ಬರೂ ಅಲ್ಲ... 100 ಟೆಸ್ಟ್ ಪಂದ್ಯಗಳನ್ನು ಆಡಿದ 12 ನೇ ಟೀಂ ಇಂಡಿಯಾ ಆಟಗಾರನೀತ!  title=

Virat Kohli Records: ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 100 ಟೆಸ್ಟ್‌ಗಳನ್ನು ಆಡಿದ 12 ನೇ ಭಾರತೀಯ ಕ್ರಿಕೆಟಿಗರಾದರು. ಈ ಕಾರಣಕ್ಕೆ ಪಂದ್ಯದ ಮೊದಲು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊಹ್ಲಿ ಅವರನ್ನು ಅಭಿನಂದಿಸಿದೆ.. 

ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ದೇನಿಯ ಅವರ ವಿಕೆಟ್ ಪಡೆಯುವ ಮೊದಲು ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 76 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 45 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 129.2 ಓವರ್‌ಗಳಲ್ಲಿ 8 ವಿಕೆಟ್‌ಗೆ 574 ರನ್ ಗಳಿಸಿತು.. 

 
 
 
 

 
 
 
 
 
 
 
 
 
 
 

A post shared by Royal Challengers Bangalore (@royalchallengersbangalore)

ಇದನ್ನೂ ಓದಿ-ಯುಪಿ ವಾರಿಯರ್ಸ್ ಎದುರು RCB ಗೆ ಭರ್ಜರಿ ಜಯ.. ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು!

ಭಾರತದ ಶ್ರೇಷ್ಠ ಟೆಸ್ಟ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ 228 ಎಸೆತಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 175 ರನ್ ಗಳಿಸಿದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಗೆದ್ದುಕೊಂಡಿತು.

ಇತ್ತೀಚೆಗಷ್ಟೇ ಗಂಡು ಮಗುವಿಗೆ ತಂದೆಯಾದ ಕಾರಣ ಕೊಹ್ಲಿ ಸದ್ಯಕ್ಕೆ ರೆಸ್ಟ್‌ನಲ್ಲಿದ್ದಾರೆ.. ವಿರಾಟ್‌ ತಮ್ಮ ವೃತ್ತಿ ಜೀವನದ 113 ಟೆಸ್ಟ್‌ಗಳಲ್ಲಿ, ಕೊಹ್ಲಿ 49.15 ಸರಾಸರಿಯಲ್ಲಿ 8848 ರನ್‌ಗಳು ಮತ್ತು 29 ಶತಕಗಳು ಮತ್ತು 30 ಅರ್ಧಶತಕಗಳೊಂದಿಗೆ 55.56 ಸ್ಟ್ರೈಕ್-ರೇಟ್‌ಗಳನ್ನು ಗಳಿಸಿದ್ದಾರೆ.

ಅತೀ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿದ ಆಟಗಾರರು: 

ಸಚಿನ್ ತೆಂಡೂಲ್ಕರ್ - 200

ರಾಹುಲ್ ದ್ರಾವಿಡ್ – 163

ವಿವಿಎಸ್ ಲಕ್ಷ್ಮಣ್ – 134

ಅನಿಲ್ ಕುಂಬ್ಳೆ - 132

ಕಪಿಲ್ ದೇವ್ - 131

ಸುನಿಲ್ ಗವಾಸ್ಕರ್ - 125

ದಿಲೀಪ್ ವೆಂಗ್‌ಸರ್ಕರ್ - 116

ಸೌರವ್ ಗಂಗೂಲಿ - 113

ವಿರಾಟ್ ಕೊಹ್ಲಿ - 113

ಇಶಾಂತ್ ಶರ್ಮಾ – 105

ಹರ್ಭಜನ್ ಸಿಂಗ್ – 103

ಚೇತೇಶ್ವರ ಪೂಜಾರ – 103

ವೀರೇಂದ್ರ ಸೆಹ್ವಾಗ್ – 103

ಇದನ್ನೂ ಓದಿ-ಯುಪಿ ವಾರಿಯರ್ಸ್ ಎದುರು RCB ಗೆ ಭರ್ಜರಿ ಜಯ.. ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು!

ಆರ್ ಅಶ್ವಿನ್ 100 ಟೆಸ್ಟ್‌ಗಳ ಹೊಸ್ತಿಲಲ್ಲಿದ್ದಾರೆ: 

ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಆರ್ ಅಶ್ವಿನ್ ಕೂಡ ಭಾರತ ತಂಡಕ್ಕಾಗಿ 100 ಟೆಸ್ಟ್‌ಗಳನ್ನು ಆಡುವ ಹೆಜ್ಜೆಯಲ್ಲಿದ್ದಾರೆ...  

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಪಂದ್ಯಕ್ಕೆ ಅಂದರೆ ಕೊಹ್ಲಿ ಈ ತಿಂಗಳ ಕೊನೆಯಲ್ಲಿ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News