ಯುಪಿ ವಾರಿಯರ್ಸ್ ಎದುರು RCB ಗೆ ಭರ್ಜರಿ ಜಯ.. ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು!

Royal Challengers Bangalore : ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​ 2024ರ ಎರಡನೇ ಆವೃತ್ತಿಯ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಜ್ ವಿರುದ್ಧ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  23 ರನ್​ಗಳಿಂದ ಗೆಲುವನ್ನು ಸಾಧಿಸಿದೆ. 

Written by - Zee Kannada News Desk | Last Updated : Mar 5, 2024, 12:22 AM IST
  • ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು 23 ರನ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಲೀಗ್​ನಲ್ಲಿ ಮತ್ತೆ ಗೆಲುವನ್ನು ಪಡೆದುಕೊಂಡಿದೆ.
  • ಮೊದಲಿಗೆ ಯುಪಿ ನಾಯಕಿ ಅಲಿಸ್ಸಾ ಹೀಲಿ ಬೆಂಗಳೂರು ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
  • ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡವು ನಿಗದಿತ 20 ಓರವ್​ಗೆ 8 ವಿಕೆಟ್ ನಷ್ಟಕ್ಕೆ 175 ರನ್​ ಗಳಿಸುವ ಮೂಲಕ 24 ರನ್​ ಗಳಿಂದ ಸೋಲನ್ನಪ್ಪಿತು.
ಯುಪಿ ವಾರಿಯರ್ಸ್ ಎದುರು RCB ಗೆ ಭರ್ಜರಿ ಜಯ.. ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು!  title=

Women's Premier League 2024 : ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇಂದು (ಮಾ.೪)ರಂದು ಸೋಮವಾರ  ಮಹಿಳಾ ಪ್ರೀಮಿಯರ್​ ಲೀಗ್​ 2024ರ ಎರಡನೇ ಆವೃತ್ತಿಯ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಜ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs UPW) ತಂಡಗಳು ಆಡಿದ್ದು, ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು 23 ರನ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಲೀಗ್​ನಲ್ಲಿ ಮತ್ತೆ ಗೆಲುವನ್ನು ಪಡೆದುಕೊಂಡಿದೆ. 

ಮೊದಲಿಗೆ ಯುಪಿ ನಾಯಕಿ ಅಲಿಸ್ಸಾ ಹೀಲಿ ಬೆಂಗಳೂರು ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.ಲೀಗ್​ನ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್​ಸಿಬಿ, ಆ ನಂತರ ಸತತ ಎರಡು ಪಂದ್ಯಗಳನ್ನು ಸೋತು ಲಯ ಕಳೆದುಕೊಂಡಿತ್ತು.

ಇದನ್ನು ಓದಿ : ಸ್ಮೃತಿ ಮಂಧನಾ ಬಿರುಸಿನ ಹೊಡೆತಕ್ಕೆ ತತ್ತರಿಸಿದ ವಾರಿಯರ್ಸ್ :  RCBಯಿಂದ ಯುಪಿಗೆ ಬಿಗ್ ಟಾರ್ಗೆಟ್

ನಾಯಕಿ ಸ್ಮೃತಿ ಮಂಧನಾ ಮತ್ತು ಪೆರ್ರಿ ಸ್ಪೋಟಕ ಬ್ಯಾಟಿಂಗ್​ ಮಾಡುವ ಮೂಲಕ ಆರ್​ಸಿಬಿ ತಂಡ 20 ಓವರ್​ ಗೆ 3 ವಿಕೆಟ್ ನಷ್ಟಕ್ಕೆ 198 ರನ್​ ಗಳಿಸಿತು. ಆರ್​ಸಿಬಿ ತಂಡದ ಬ್ಯಾಟರ್​ ಗಳು ಯುಪಿ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡುವ ಮತ್ತು ಮೂಲಕ ಚಿನ್ನಸ್ವಾಮಿ ಮೈದಾನದ ಮೂಲೆ ಮೂಲೆಗೂ ಚೆಂಡುಗಳನ್ನು ಅಟ್ಟಿದರು. 

ನಾಯಕಿ ಅಲಿಸ್ಸಾ ಹೀಲಿ ಹಾಗೂ ಕಿರಣ್ ನವ್ಗಿರೆ ಮೊದಲ ವಿಕೆಟ್​ಗೆ 47 ರನ್​ಗಳ ಜೊತೆಯಾಟ ನೀಡಿದರು. ಆದರೆ 11 ಎಸೆತಗಳಲ್ಲಿ 18 ರನ್ ಕಲೆಹಾಕಿದ್ದ ಕಿರಣ್ ಸೋಫಿ ಡಿವೈನ್​ಗೆ ಬಲಿಯಾದ ಬಳಿಕ ತಂಡದ ಇನ್ನಿಂಗ್ಸ್ ವೇಗ ಕಡಿಮೆಯಾಯಿತು. ಆದರೂ ಒಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ನಾಯಕಿ ಹೀಲಿ 38 ಎಸೆತಗಳಲ್ಲಿ 55 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಇದನ್ನು ಓದಿ :WPL 2024: ಪೆರ್ರಿ ಪವರ್‌ ಫುಲ್‌ ಶಾಟ್‌ಗೆ ಪುಡಿ ಪುಡಿ ಆಯ್ತು ಕಾರಿನ ಗ್ಲಾಸ್.!

ಇವರನ್ನು ಹೊರತುಪಡಿಸಿದರೆ, ದೀಪ್ತಿ ಶರ್ಮಾ ಮತ್ತು ಪೂನಂ ಖೇಮ್ನಾರ್ ಕ್ರಮವಾಗಿ 33 ಹಾಗೂ 31 ರನ್ ಗಳಿಸಿದರು.  ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡವು ನಿಗದಿತ 20 ಓರವ್​ಗೆ 8 ವಿಕೆಟ್ ನಷ್ಟಕ್ಕೆ 175  ರನ್​ ಗಳಿಸುವ ಮೂಲಕ 24 ರನ್​ ಗಳಿಂದ ಸೋಲನ್ನಪ್ಪಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News