ಸಂಕಷ್ಟದಲ್ಲಿ ಟೀಂ ಇಂಡಿಯಾ!: ದಕ್ಷಿಣ ಆಫ್ರಿಕಾ ಸರಣಿಯಿಂದ ಈ ಸ್ಟಾರ್ ಆಟಗಾರ ಔಟ್

15ನೇ ಆವೃತ್ತಿಯ ಐಪಿಲ್ ಟೂರ್ನಿ ಮತ್ತು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅತ್ಯಂತ ಕಳಪೆ ಪ್ರದರ್ಶನ ತೋರಿ ಟೀಕೆಗಳಿಗೆ ಗುರಿಯಾಗಿದ್ದರು.

Written by - Puttaraj K Alur | Last Updated : Nov 29, 2021, 10:48 AM IST
  • ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದ ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ
  • 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮತ್ತು ಟಿ-20 ವಿಶ್ವಕಪ್ ನಲ್ಲಿ ಕಳಪೆ ಪದರ್ಶನ ತೋರಿದ್ದಕ್ಕೆ ಟೀಕೆ
  • ಫಿಟ್ನೆಸ್‌ಗೆ ಮರಳಲು ಸ್ವಲ್ಪ ಸಮಯ ಬೇಕೆಂದು ಟೀಂ ಸರಣಿಯಿಂದ ಔಟ್ ಆದ ಹಾರ್ಡ್ ಹಿಟ್ಟರ್ ಪಾಂಡ್ಯ
ಸಂಕಷ್ಟದಲ್ಲಿ ಟೀಂ ಇಂಡಿಯಾ!: ದಕ್ಷಿಣ ಆಫ್ರಿಕಾ ಸರಣಿಯಿಂದ ಈ ಸ್ಟಾರ್ ಆಟಗಾರ ಔಟ್ title=
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಔಟ್

ನವದೆಹಲಿ: ಟೀಂ ಇಂಡಿಯಾ ಬಹಳ ದಿನಗಳ ನಂತರ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ(India Vs South Africa Series) ಕೈಗೊಳ್ಳಲಿದೆ. ಕೊರೊನಾ ವೈರಸ್‌ನ ಹೊಸ ರೂಪಾಂತರದಿಂದಾಗಿ ಈ ಪ್ರವಾಸವು ಈಗಾಗಲೇ ಅಪಾಯದಲ್ಲಿದೆ. ಆದರೆ ಈ ನಡುವೆ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ವಿರಾಟ್ ಕೊಹ್ಲಿ ಪಡೆಯ ಸ್ಟಾರ್ ಆಟಗಾರನೊಬ್ಬ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇದು ಭಾರತ ತಂಡದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.   

ವಿರಾಟ್ ಸೇನೆಗೆ ದೊಡ್ಡ ಹೊಡೆತ

ಹೌದು, ಟೀಂ ಇಂಡಿಯಾದ ಮಾರಕ ಆಲ್‌ರೌಂಡರ್, ಹಾರ್ಡ್ ಹಿಟ್ಟರ್ ಖ್ಯಾತಿಯ ಹಾರ್ದಿಕ್ ಪಾಂಡ್ಯ(Hardik Pandya) ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಕಳಪೆ ಫಿಟ್ನೆಸ್ ನಿಂದಾಗಿ ಈ ಆಟಗಾರ ಬಹಳ ದಿನಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಟಿ-20 ವಿಶ್ವಕಪ್‌ನಲ್ಲೂ ಹಾರ್ದಿಕ್ ಆಯ್ಕೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ನ್ಯೂಜಿಲೆಂಡ್ ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಇದೀಗ ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನವೇ ಈ ಆಲ್ ರೌಂಡರ್ ಅವರೇ ಸ್ವಲ್ಪ ಕಾಲ ಆಟದಿಂದ ದೂರ ಉಳಿಯಲು ಬಯಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: India vs New Zealand 1st Test: ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ ಶ್ರೇಯಸ್ ಅಯ್ಯರ್

ಫಿಟ್ನೆಸ್‌ಗೆ ಮರಳಲು ಸ್ವಲ್ಪ ಸಮಯ ಬೇಕು

ವಾಸ್ತವವಾಗಿ ಹಾರ್ದಿಕ್(Hardik Pandya) ಫಿಟ್‌ನೆಸ್‌ನಿಂದ ಬೌಲಿಂಗ್ ಮಾಡಲು ಸಹ ಸಾಧ್ಯವಾಗಲಿಲ್ಲ. ಇದರಿಂದ ಅವರು ಬ್ಯಾಟ್ಸ್‌ ಮನ್ ಆಗಿ ಮಾತ್ರ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದರು. ಆದರೆ ಯಾಕೋ ಹಾರ್ದಿಕ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪರಿಣಾಮ ಸ್ಫೋಟಕ ಆಟಕ್ಕೆ ಇವರನ್ನೇ ನೆಚ್ಚಿಕೊಂಡಿದ್ದ ಟೀಂ ಇಂಡಿಯಾಗೆ ಆಘಾತವಾಗಿತ್ತು. ಟಿ-20 ವಿಶ್ವಕಪ್ ಟೂರ್ನಿ(ICC T20 World Cup)ಯಲ್ಲಿ ಕಳಪೆ ಪ್ರದರ್ಶನದ ಕಾರಣ ಭಾರತ ತಂಡ ಲೀಗ್ ಹಂತದಲ್ಲಿಯೇ ಹೊರಬೀಳಬೇಕಾಯಿತು. ಹೀಗಾಗಿಯೇ ಇದೀಗ ಹಾರ್ದಿಕ್ ಅವರೇ ದೊಡ್ಡ ಹೆಜ್ಜೆಯನ್ನಿಟ್ಟು, ಫಿಟ್ನೆಸ್‌ಗೆ ಮರಳಲು ಸ್ವಲ್ಪ ಸಮಯ ಬೇಕು ಎಂದು ಬಿಸಿಸಿಐ(BCCI)ಗೆ ತಿಳಿಸಿದ್ದಾರೆ. ಹಾರ್ದಿಕ್ ಅವರು ಕೇವಲ ಬ್ಯಾಟ್ಸ್‌ ಮನ್ ಆಗಿ ತಂಡಕ್ಕೆ ಮರಳದೆ, ಆಲ್ ರೌಂಡರ್ ಆಗಿ ಕಮ್ ಬ್ಯಾಕ್ ಮಾಡಲು ಬಯಸುತ್ತಿದ್ದಾರಂತೆ. ಹೀಗಾಗಿಯೇ ಅವರು ಈಗ ತಂಡದಿಂದ ಹೊರಗುಳಿಯುತ್ತಿದ್ದಾರೆಂದು ತಿಳಿದುಬಂದಿದೆ.  

ಅತ್ಯಂತ ಕಳಪೆ ಪ್ರದರ್ಶನ

ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಪಾಂಡ್ಯ ನಿರಂತರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮೊದಲ IPL 2021 ಮತ್ತು ನಂತರ T-20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಈ ಆಟಗಾರನಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಿರುವಾಗ ತಂಡದ ಮ್ಯಾನೇಜ್‌ಮೆಂಟ್‌ ಅವರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ ಟೀಕೆ ವ್ಯಕ್ತವಾಗಿತ್ತು. ಆದರೆ ಇದೀಗ ಹಾರ್ದಿಕ್ ಸತತ 2 ಸರಣಿಗಳಿಂದ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: IND vs NZ : Kanpur ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಖಚಿತ!

ಸಂಕಷ್ಟದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ

ಹೇಗಿದ್ದರೂ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ(IND Vs SA Tour) ಸಂಕಷ್ಟದಲ್ಲಿದೆ. ಈ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರದ ಅಪಾಯವಿದೆ. ಈ ಹಿನ್ನೆಲೆ ಅಲ್ಲಿ ಆಯೋಜಿಸಲಾಗಿರುವ ಹಲವು ದೊಡ್ಡ ಸರಣಿಗಳು ಮತ್ತು ಟೂರ್ನಿಗಳನ್ನು ರದ್ದುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿತ ಸಮಯಕ್ಕೆ ಮುಗಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News