ಟೀಂ ಇಂಡಿಯಾಗೆ ಹೆಚ್ಚಿದ ಆತಂಕ.. ಬಿಸಿಸಿಐಗೆ ದಿಢೀರ್ ಕ್ಷಮೆ ಕೇಳಿದ ಮೊಹಮ್ಮದ್ ಶಮಿ! ನಿವೃತ್ತಿ ಘೋಷಿಸಲಿದ್ದಾರಾ ಸ್ಟಾರ್ ಬೌಲರ್!?

Mohammed Shami apologizes to BCCI: ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್ ಫೈನಲ್ ನಂತರ ತಂಡದಿಂದ ದೂರ ಉಳಿದಿದ್ದಾರೆ. ಈಗ ಶಸ್ತ್ರಚಿಕಿತ್ಸೆಯ ನಂತರ ಅವರು ಮತ್ತೆ ಫಿಟ್ನೆಸ್ ಪಡೆದಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಶಮಿ ಸ್ಥಾನ ಪಡೆದಿರಲಿಲ್ಲ.

Written by - Savita M B | Last Updated : Oct 28, 2024, 09:02 AM IST
  • 34ರ ಹರೆಯದ ಶಮಿ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಫಿಟ್ ಆಗಿರುವುದಾಗಿ ಘೋಷಿಸಿದ್ದು ಗೊತ್ತೇ ಇದೆ.
  • ಟೀಂ ಇಂಡಿಯಾ ಅವರನ್ನು ಮಿಸ್ ಮಾಡಿಕೊಳ್ಳುವುದು ಖಚಿತ.‌
ಟೀಂ ಇಂಡಿಯಾಗೆ ಹೆಚ್ಚಿದ ಆತಂಕ.. ಬಿಸಿಸಿಐಗೆ ದಿಢೀರ್ ಕ್ಷಮೆ ಕೇಳಿದ ಮೊಹಮ್ಮದ್ ಶಮಿ! ನಿವೃತ್ತಿ ಘೋಷಿಸಲಿದ್ದಾರಾ ಸ್ಟಾರ್ ಬೌಲರ್!? title=

Team India Star Player Mohammed Shami: 34ರ ಹರೆಯದ ಶಮಿ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಫಿಟ್ ಆಗಿರುವುದಾಗಿ ಘೋಷಿಸಿದ್ದು ಗೊತ್ತೇ ಇದೆ. ಫಿಟ್ ಆಗಿದ್ದರೂ ಆಯ್ಕೆಯಾಗಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಶಮಿ ಉತ್ತಮ ದಾಖಲೆ ಹೊಂದಿದ್ದಾರೆ.. ಶಮಿ 12 ಪಂದ್ಯಗಳನ್ನು ಆಡಿದ್ದು 44 ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯದ ಪಿಚ್‌ಗಳಲ್ಲಿ ಶಮಿಯಂತಹ ಬೌಲರ್ ಇಲ್ಲದಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿದೆ. ಆಸ್ಟ್ರೇಲಿಯದಲ್ಲಿ ಶಮಿ 31 ವಿಕೆಟ್ ಪಡೆದರು. ಹೀಗಾಗಿ ಟೀಂ ಇಂಡಿಯಾ ಅವರನ್ನು ಮಿಸ್ ಮಾಡಿಕೊಳ್ಳುವುದು ಖಚಿತ.‌

ಇದನ್ನೂ ಓದಿ-IPL ಆರಂಭಕ್ಕೂ ಮುನ್ನವೇ RCBಗೆ ಬಿಗ್ ಶಾಕ್; ಕೈಕೊಟ್ಟ ದುಬಾರಿ ಆಟಗಾರ!!

ಆಸ್ಟ್ರೇಲಿಯ ಪ್ರವಾಸದಲ್ಲಿ ಮೊಹಮ್ಮದ್ ಶಮಿ ಇಲ್ಲದ ಕೊರತೆಯನ್ನು ತುಂಬುವುದು ಅಸಾಧ್ಯ.. ಇಂತಹ ಸಂದರ್ಭದಲ್ಲಿ ಶಮಿ ಇದೀಗ ಬಿಸಿಸಿಐ ಹಾಗೂ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಸಲಿಗೆ ಏನಾಯ್ತು.. ಶಮಿ ಯಾಕೆ ಹೀಗೆ ಮಾಡಿದ್ಯಾಕೆ?

ಈ ಬಗ್ಗೆ ಮಾತನಾಡಿದ ಸ್ಟಾರ್‌ ಬೌಲರ್‌ "ಸದ್ಯ ಫಿಟ್‌ನೆಸ್ ಮೇಲೆ ಗಮನ ಹರಿಸುತ್ತಿದ್ದೇನೆ. ಆ ನಿಟ್ಟಿನಲ್ಲಿ ನನ್ನೆಲ್ಲ ಪ್ರಯತ್ನ ನಡೆಯುತ್ತಿದೆ.. ನಾನು ಕೂಡ ನನ್ನ ಬೌಲಿಂಗ್‌ಗೆ ಫಿಟ್ ಆಗಲು ಬಯಸುತ್ತೇನೆ.. ದಿನದಿಂದ ದಿನಕ್ಕೆ ಪಂದ್ಯಕ್ಕೆ ತಯಾರಿ ನಡೆಸುತ್ತೇನೆ ಮತ್ತು ದೇಶೀಯ ರೆಡ್ ಬಾಲ್ ಕ್ರಿಕೆಟ್ ಆಡಲು ಶ್ರಮಿಸುತ್ತೇನೆ" ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ಇದನ್ನೂ ಓದಿ-ಕ್ರಿಕೆಟ್‌ ತೊರೆದು ಯಶಸ್ವಿ ಉದ್ಯಮಿ.. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡ ಈತ 8.5 ಲಕ್ಷ ಕೋಟಿಯ ಸಾಮ್ರಾಜ್ಯದ ಒಡೆಯ! ಯಾರು ಗೊತ್ತೇ?

ಈ ಸಂದರ್ಭದಲ್ಲಿ ಶಮಿ ತನ್ನನ್ನು ಬೆಂಬಲಿಸಿದ ಅಭಿಮಾನಿಗಳು ಮತ್ತು ಬಿಸಿಸಿಐ ಬಳಿ ಕ್ಷಮೆಯಾಚಿಸಿದ್ದಾರೆ. ಅವರು ಸಂಪೂರ್ಣ ಫಿಟ್ನೆಸ್ ಪಡೆಯಲಿ ಎಂದು ಹಲವರು ಹಾರೈಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ರೆಡ್ ಬಾಲ್ ಕ್ರಿಕೆಟ್ ಆಡಲು ಸಂಪೂರ್ಣ ತಯಾರಿ ನಡೆಸುವುದಾಗಿ ಶಮಿ ಹೇಳಿದ್ದಾರೆ.

ಇದೆಲ್ಲದರ ಮಧ್ಯೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಟೆಸ್ಟ್ ಕ್ರಿಕೆಟ್‌ನ ಅಂತ್ಯವೆಂದು ಪರಿಗಣಿಸಲಾಗಿದೆ. ನಂತರ ಮಂಡಳಿಯು ಹೊಸ ತಂಡವನ್ನು ರಚಿಸಲು ಪ್ರಯತ್ನಿಸುತ್ತದೆ. ಇಂತಹ ಸಂದರ್ಭದಲ್ಲಿ ಶಮಿಗೆ ಆಸ್ಟ್ರೇಲಿಯಾ ಪ್ರವಾಸ ಕೊನೆಯ ಅವಕಾಶ ಎಂದರೂ ತಪ್ಪಾಗದು. ಹೀಗಾಗಿ ಶಮಿ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News