India Breaks 112 Years Old Record: ಇಂಗ್ಲೆಂಡ್ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. 5 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 64 ರನ್’ಗಳ ಜಯ ಸಾಧಿಸಿದೆ. ಭಾರತ ಈಗಾಗಲೇ ಸರಣಿ ವಶಪಡಿಸಿಕೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಅಂದಹಾಗೆ ಈ ಗೆಲುವಿನ ಮೂಲಕ ಟೀಂ ಇಂಡಿಯಾ ಮತ್ತೊಂದು ಶ್ರೇಷ್ಠ ದಾಖಲೆ ನಿರ್ಮಿಸಿದೆ. ರೋಹಿತ್ ಶರ್ಮಾ ಸೇನೆ 112 ವರ್ಷಗಳ ಇತಿಹಾಸವನ್ನೇ ಬದಲಾಯಿಸಿದ್ದು, ಆ ಸಾಧನೆ ಏನೆಂಬುದನ್ನು ಮುಂದೆ ತಿಳಿಯೋಣ.
ಇದನ್ನೂ ಓದಿ: ವಿಶ್ವಕಪ್’ನಲ್ಲಿ ಅಬ್ಬರಿಸಿ ಈಗ CSKಯಲ್ಲಿ ಮಿಂಚಲು ಸಿದ್ಧರಾದ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಯಾರು ಗೊತ್ತಾ? ಈಕೆಯೂ ಭಾರತೀಯಳೇ!
ಇಂಗ್ಲೆಂಡಿನ ವಿರುದ್ಧ ಭಾರತ ಗಳಿಸಿದ ಅತಿ ದೊಡ್ಡ ಗೆಲುವುಗಳಲ್ಲಿ ಇದೂ ಒಂದಾಗಿದೆ. ಈ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದಿದ್ದರು. ಇದೀಗ ಎರಡನೇ ಇನ್ನಿಂಗ್ಸ್’ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. .
ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋತಿತ್ತು. ಅದಾದ ಬಳಿಕ ಭರ್ಜರಿ ಕಂಬ್ಯಾಕ್ ಮಾಡಿ ಭಾರತ ಅದ್ಭುತ ಪ್ರದರ್ಶನ ತೋರಿ ಸರಣಿ ವಶಪಡಿಸಿಕೊಂಡಿತ್ತು. ಇದಲ್ಲೂ ಮೊದಲು ಅಂದರೆ 1912ರಲ್ಲಿ ಇಂಗ್ಲೆಂಡ್ ತಂಡ ಈ ಇತಿಹಾಸ ಬರೆದಿತ್ತು. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಸೋತಿತ್ತು, ನಂತರ ಪುನರಾಗಮನವನ್ನು ಮಾಡಿ, ಸತತ 4 ಪಂದ್ಯಗಳನ್ನು ಗೆದ್ದಿತು. ಇದೀಗ ಇಂಗ್ಲೆಂಡ್ ವಿರುದ್ಧ ಭಾರತ ಅದೇ ದಾಖಲೆಯನ್ನು ಮುರಿದಿದೆ.
ಇಂಗ್ಲೆಂಡ್’ಗಿಂತ ಮೊದಲು ಆಸ್ಟ್ರೇಲಿಯಾ ಈ ಸಾಧನೆ ಮಾಡಿತ್ತು. ಕಾಂಗರೂ ತಂಡ 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿತ್ತು. ಇದೀಗ ಭಾರತವೂ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಒಂದು ಪಂದ್ಯದಲ್ಲಿ ಸೋತಿರುವ ಭಾರತ ಸತತ 4 ಪಂದ್ಯಗಳನ್ನು ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: IBA Hike: ಬ್ಯಾಂಕ್ ಉದ್ಯೋಗಿಗಳಿಗೆ ಜಾಕ್ ಪಾಟ್..! ಸಂಬಳ ಹೆಚ್ಚಳ ಜೊತೆಗೆ ಶನಿವಾರವೂ ರಜೆ
ಧರ್ಮಶಾಲಾ ಟೆಸ್ಟ್’ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಶತಕದ ಇನಿಂಗ್ಸ್ ಆಡಿದ್ದಾರೆ. ಉಭಯ ಆಟಗಾರರ ಈ ಅದ್ಭುತ ಪ್ರದರ್ಶನದಿಂದಾಗಿ ಭಾರತ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 477 ರನ್ ಗಳಿಸಿತು. ಇದರೊಂದಿಗೆ ಭಾರತದ ಗೆಲುವು ಬಹುತೇಕ ಖಚಿತವಾಯಿತು. ಇಂಗ್ಲೆಂಡ್ ವಿರುದ್ಧ ಬೃಹತ್ ಸ್ಕೋರ್ ಮಾಡಿದ ಟೀಂ ಇಂಡಿಯಾ 259 ರನ್’ಗಳ ಮುನ್ನಡೆ ಸಾಧಿಸಿತು. ಅಂದಹಾಗೆ ಈ ಪಂದ್ಯದಲ್ಲಿ ಬ್ಯಾಟ್ಸ್’ಮನ್’ಗಳ ಪರಾಕ್ರಮದ ಜೊತೆ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮೂಲಕ ಹವಾ ಸೃಷ್ಟಿಸಿ, ಟೀಂ ಇಂಡಿಯಾದ ಗೆಲುವಿನ ಹೀರೋ ಆದರು. ಎರಡನೇ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ಪಡೆದ ಅವರು ಇಡೀ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ