ಕೊನೆಯಾಗಲಿದೆಯೇ ಈ ನಾಲ್ಕು ಕ್ರಿಕೆಟಿಗರ ಟೆಸ್ಟ್ ಕರಿಯರ್ ?

ತಂಡದಿಂದ ಹೊರಗಿರುವ ಅನೇಕ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರಬಲ ಪೈಪೋಟಿ ನೀಡುತ್ತಲೇ ಇರುತ್ತಾರೆ.

Written by - Ranjitha R K | Last Updated : Nov 10, 2021, 10:52 AM IST
  • ಟೆಸ್ಟ್ ಕ್ರಿಕೆಟ್ ನಿಂದ ಶಾಶ್ವತವಾಗಿ ಹೊರಗುಳಿಯಲಿದ್ದಾರಾ ಈ ಆಟಗಾರರು
  • ಶಿಖರ್ ಧವನ್ ಟೆಸ್ಟ್ ತಂಡಕ್ಕೆ ಮರಳುವುದು ಅಸಂಭವ ಎನ್ನಲಾಗಿದೆ
  • ಗಾಯದ ಕಾರಣಗಳಿಂದಾಗಿ, ಹಲವು ಬಾರಿ ತಂಡದಿಂದ ಹೊರಗುಳಿದಿರುವ ಭುವನೇಶ್ವರ್ ಕುಮಾರ್
ಕೊನೆಯಾಗಲಿದೆಯೇ  ಈ ನಾಲ್ಕು ಕ್ರಿಕೆಟಿಗರ ಟೆಸ್ಟ್ ಕರಿಯರ್ ?  title=
ಟೆಸ್ಟ್ ಕ್ರಿಕೆಟ್ ನಿಂದ ಶಾಶ್ವತವಾಗಿ ಹೊರಗುಳಿಯಲಿದ್ದಾರಾ ಈ ಆಟಗಾರರು (file photo)

ನವದೆಹಲಿ : ಭಾರತ ಕ್ರಿಕೆಟ್‌ ತಂಡಕ್ಕೆ (Indian cricket team) ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ (Team India) ತನ್ನನ್ನು ಉಳಿಸಿಕೊಳ್ಳುವುದು ಕೂಡಾ ಅಷ್ಟೇ ಕಷ್ಟ. ತಂಡದಿಂದ ಹೊರಗಿರುವ ಅನೇಕ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರಬಲ ಪೈಪೋಟಿ ನೀಡುತ್ತಲೇ ಇರುತ್ತಾರೆ. ಇದೀಗ ಭಾರತದ 4 ಆಟಗಾರರ ಟೆಸ್ಟ್ ವೃತ್ತಿಜೀವನವು (Test career) ಬಹುತೇಕ ಮುಕ್ತಾಯವಾದಂತೆ ಕಾಣುತ್ತದೆ.  

1. ಶಿಖರ್ ಧವನ್ :
ಶಿಖರ್ ಧವನ್ (Shikhar Dhawan) ಅವರ ಅಂಕಿಅಂಶಗಳನ್ನು ಗಮನಿಸಿದರೆ, ಅವರು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಅಗ್ರ ಆಟಗಾರರಾಗಿ ಕಾಣುತ್ತಾರೆ. ಟೆಸ್ಟ್ ಕ್ರಿಕೆಟ್ ನಲ್ಲೂ (Test Cricket) ಶಿಖರ್ 34 ಪಂದ್ಯಗಳಲ್ಲಿ 41ರ ಸರಾಸರಿಯಲ್ಲಿ 2300ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅದರಲ್ಲಿ 7 ಶತಕ ಬಾರಿಸಿದ್ದರೂ ಆಯ್ಕೆಗಾರರು ಧವನ್ ರನ್ನು ಸರಿಯಾಗಿ ಮೌಲ್ಯಮಾಪನ ಮಾಡಿಲ್ಲವಂತೆ. ರೋಹಿತ್ ಶರ್ಮಾ (Rihith Sharma) ಮತ್ತು ಕೆಎಲ್ ರಾಹುಲ್ ಟೆಸ್ಟ್ ಆರಂಭಿಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿದ ನಂತರ ಶಿಖರ್ ಧವನ್ ಟೆಸ್ಟ್ ತಂಡಕ್ಕೆ ಮರಳುವುದು ಅಸಂಭವ ಎನ್ನಲಾಗಿದೆ. ಧವನ್ 2018 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಲ್ಲ.  ಈ ವರ್ಷದ ಇಂಗ್ಲೆಂಡ್ ಪ್ರವಾಸಕ್ಕೂ ಧವನ್ ಆಯ್ಕೆಯಾಗಿರಲಿಲ್ಲ, ಇದನ್ನೆಲ್ಲ ನೋಡಿದಾಗ ಧವನ್ ಗೆ ಈಗ ಟೆಸ್ಟ್ ಕ್ರಿಕೆಟ್ ಬಾಗಿಲು ಮುಚ್ಚಿದಂತೆಯೇ ಎನ್ನಲಾಗಿದೆ. 

ಇದನ್ನೂ ಓದಿ : Ind vs NZ: ನ್ಯೂಜಿಲೆಂಡ್ ಸರಣಿಗಾಗಿ ಟೀಮ್ ಇಂಡಿಯಾದಲ್ಲಿ ಇಬ್ಬರು ಭಯಾನಕ ಬೌಲರ್‌ಗಳ ಸೇರ್ಪಡೆ

2. ಭುವನೇಶ್ವರ್ ಕುಮಾರ್ :
ಈ ವರ್ಷದ ಇಂಗ್ಲೆಂಡ್ ಪ್ರವಾಸಕ್ಕಾಗಿ ಭುವನೇಶ್ವರ್ ಕುಮಾರ್ (Bhuwaneshwar Kumar) ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಆಡುವ ಸಾಧ್ಯತೆಯಿಲ್ಲ. ಭುವನೇಶ್ವರ್ ಕುಮಾರ್ 2012 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಸ್ವಿಂಗ್ ಅವರ ಶಕ್ತಿಯಾಗಿತ್ತು.  ಆದರೆ ಇತ್ತೀಚೆಗೆ ನಡೆದ T20 ವಿಶ್ವಕಪ್‌ನಲ್ಲಿ (T20 World cup) ಅವರ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಭುವನೇಶ್ವರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಅನ್ನು ಸಾಬೀತುಪಡಿಸಿದ್ದಾರೆ. ಆದರೆ ದುರದೃಷ್ಟವಶಾತ್ ಗಾಯದ ಕಾರಣಗಳಿಂದಾಗಿ, ಹಲವಾರು ಬಾರಿ ತಂಡದಲ್ಲಿ ಮತ್ತು ಹೊರಗಿದ್ದಾರೆ. 

3. ಹಾರ್ದಿಕ್ ಪಾಂಡ್ಯ :
ಹಾರ್ದಿಕ್ ಪಾಂಡ್ಯ (Hardik Pandya) ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 31 ರ ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಮತ್ತು 17 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ದೀರ್ಘಕಾಲದವರೆಗೆ ಬೌಲಿಂಗ್ ಮಾಡದ ಕಾರಣ ಮತ್ತು ಟಿ 20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಕಾರಣದಿಂದ  ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆದಾರರು ಟಿ 20 ತಂಡದಿಂದ ಕೈ ಬಿಟ್ಟಿದ್ದರು. ಇದನ್ನೆಲ್ಲ ನೋಡಿದರೆ ಪಾಂಡ್ಯ ಅವರ ಏಕದಿನ ಹಾಗೂ ಟೆಸ್ಟ್ ವೃತ್ತಿಜೀವನವೂ ಮುಕ್ತಾಯದ ಹಂತದಲ್ಲಿದೆ ಎನಿಸುತ್ತಿದೆ. 

ಇದನ್ನೂ ಓದಿ : ಟಿ-20 ನಂತರ ಟೆಸ್ಟ್‌ ನಲ್ಲೂ ಕೊಹ್ಲಿ ನಾಯಕತ್ವಕ್ಕೆ ಅಪಾಯ!: ರೇಸ್‌ನಲ್ಲಿದ್ದಾರೆ ಈ ಮೂವರು

4. ಕುಲದೀಪ್ ಯಾದವ್ :
ಕುಲದೀಪ್ ಯಾದವ್ (Kuldeep Yadav) ಅವರನ್ನು ಟೀಂ ಇಂಡಿಯಾದ ಎಲ್ಲಾ ಫಾರ್ಮ್ಯಾಟ್‌ಗಳಿಂದ ಕೈಬಿಡಲಾಗಿದೆ. ಕುಲದೀಪ್ ಯಾದವ್ ಸ್ವಲ್ಪ ಸಮಯದಿಂದ ಫಾರ್ಮ್‌ನಲ್ಲಿ ಕಾಣಿಸಿಕೊಂಡಿಲ್ಲ ಮತ್ತು ನಿರಂತರವಾಗಿ ಫ್ಲಾಪ್ ಆಗಿದ್ದಾರೆ. ಐಪಿಎಲ್‌ನಲ್ಲೂ (IPL) ಕಳಪೆ ಫಾರ್ಮ್‌ನಿಂದಾಗಿ, ಕೆಕೆಆರ್ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ, ಕುಲದೀಪ್ ಯಾದವ್ ಅವರನ್ನು ಕೈಬಿಡಲಾಗಿದೆ. ಆಯ್ಕೆದಾರರು ಕುಲದೀಪ್ ಯಾದವ್ ಬದಲಿಗೆ ಅಕ್ಷರ್ ಪಟೇಲ್, ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಆಟಗಾರರು ತಂಡದಲ್ಲಿ ದೃಢಪಟ್ಟರೆ, ಮುಂದಿನ ದಿನಗಳಲ್ಲಿ ಕುಲದೀಪ್ ಯಾದವ್ ಟೆಸ್ಟ್ ಕ್ರಿಕೆಟ್ ಆಡುವುದು ಅನುಮಾನ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News