ವಿರಾಟ್‌ ಮತ್ತೆ ಫಾರ್ಮ್‌ ಬರೋದಕ್ಕೆ ಈ ಲೆಜೆಂಡ್‌ ಆಟಗಾರ ಸಹಾಯ ಮಾಡುತ್ತಾರಂತೆ!

ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಈ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯ ಅಭಿಮಾನಿಗಳಿಗೆ ಕಳವಳದ ವಿಷಯವಾಗಿದೆ. ಹಲವು ಮಾಜಿ ಹಿರಿಯ ಕ್ರಿಕೆಟಿಗರು ಕೊಹ್ಲಿ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಈ ಪಟ್ಟಿಗೆ ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಹೆಸರೂ ಸೇರ್ಪಡೆಯಾಗಿದೆ. ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿಗೆ ಕೇವಲ 20 ನಿಮಿಷಗಳು ಬೇಕು. ಆ ಮೂಲಕ ಅವರು ಹೋರಾಡುತ್ತಿರುವ ಸಮಸ್ಯೆಯ ಬಗ್ಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ.

Written by - Bhavishya Shetty | Last Updated : Jul 19, 2022, 10:16 AM IST
  • ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್ ಕೊಹ್ಲಿ ಒಬ್ಬರು
  • ಕೊಹ್ಲಿಯ ಕಳಪೆ ಫಾರ್ಮ್ ಟೀಂ ಇಂಡಿಯಾಗೆ ಭಾರೀ ಹೊಡೆತ ಬಿದ್ದಂತೆ ಕಾಣುತ್ತಿದೆ
  • ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿಕೆ
ವಿರಾಟ್‌ ಮತ್ತೆ ಫಾರ್ಮ್‌ ಬರೋದಕ್ಕೆ ಈ ಲೆಜೆಂಡ್‌ ಆಟಗಾರ ಸಹಾಯ ಮಾಡುತ್ತಾರಂತೆ! title=
Virat Kohli

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಇತ್ತೀಚಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೊಹ್ಲಿಯ ಕಳಪೆ ಫಾರ್ಮ್ ಟೀಂ ಇಂಡಿಯಾಗೆ ಭಾರೀ ಹೊಡೆತ ಬಿದ್ದಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಮೂರೂ ಮಾದರಿಯ ಆಟವನ್ನಾಡಿದ ಕೊಹ್ಲಿ ಒಮ್ಮೆಯೂ ದೊಡ್ಡ ಇನ್ನಿಂಗ್ಸ್ ಆಡಿಲ್ಲ. ಇಡೀ ಪಂದ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ಇದೀಗ ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಟೀಂ ಇಂಡಿಯಾದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ಒಬ್ಬರು ಹೇಳಿಕೆ ನೀಡಿದ್ದು, ಕೆಟ್ಟ ಹಂತದಲ್ಲಿರುವ ಕೊಹ್ಲಿಗೆ ಮರಳಿ ಫಾರ್ಮ್‌ಗೆ ಬರಲು ನಾನು ಸಹಾಯ ಮಾಡುತ್ತೇನೆ. ಅದಕ್ಕೆ ಸಿದ್ಧ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಶೀಘ್ರದಲ್ಲೇ 10,000ರೂ.ಗಳಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲಿದೆ ಸ್ಯಾಮ್‌ಸಂಗ್

ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಈ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯ ಅಭಿಮಾನಿಗಳಿಗೆ ಕಳವಳದ ವಿಷಯವಾಗಿದೆ. ಹಲವು ಮಾಜಿ ಹಿರಿಯ ಕ್ರಿಕೆಟಿಗರು ಕೊಹ್ಲಿ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಈ ಪಟ್ಟಿಗೆ ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಹೆಸರೂ ಸೇರ್ಪಡೆಯಾಗಿದೆ. ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿಗೆ ಕೇವಲ 20 ನಿಮಿಷಗಳು ಬೇಕು. ಆ ಮೂಲಕ ಅವರು ಹೋರಾಡುತ್ತಿರುವ ಸಮಸ್ಯೆಯ ಬಗ್ಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ವಿರಾಟ್ ಕೊಹ್ಲಿ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ಈ ಮಧ್ಯೆ ಮಾಧ್ಯಮದ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್, 'ನಾನು ವಿರಾಟ್ ಜೊತೆ ಸುಮಾರು 20 ನಿಮಿಷಗಳಿದ್ದರೆ, ವಿರಾಟ್ ಏನು ಮಾಡಬೇಕಾಗಬಹುದು ಎಂದು ನಾನು ಹೇಳಲು ಸಾಧ್ಯವಾಗುತ್ತಿತ್ತು. ಇದು ಅವರ ಆಟಕ್ಕೆ ಸಹಾಯ ಮಾಡಬಹುದು. ಹಾಗೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇದು ವಿಶೇಷವಾಗಿ ಆಫ್-ಸ್ಟಂಪ್‌ಗೆ ಸಂಬಂಧಿಸಿದಂತೆ ಆಗಿರಬಹುದು. ಅವರ ಜೊತೆ 20 ನಿಮಿಷ ಸಿಕ್ಕರೆ ಹೇಳಬಲ್ಲೆ’ ಎಂದರು.

ಇದನ್ನೂ ಓದಿ: ಕೇವಲ 49 ರೂಪಾಯಿಯ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್‌

ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿ ಡ್ರಾ ಆದ ಬಳಿಕ ಭಾರತ ಟಿ20 ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. ಆದರೆ ಈ ಯಾವ ಪಂದ್ಯದಲ್ಲೂ ವಿರಾಟ್ ಕೊಹ್ಲಿಯ ಬ್ಯಾಟ್‌ಗಳು ರನ್‌ ಬಾರಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಇಂಗ್ಲೆಂಡ್ ವಿರುದ್ಧ ಆಡಿದ ಏಕೈಕ ಟೆಸ್ಟ್‌ನಲ್ಲಿ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದಾರೆ. ಟಿ20 ಸರಣಿಯಲ್ಲೂ ಪ್ಲಾಪ್ ಆಗಿದ್ದ ಅವರು 2 ಪಂದ್ಯಗಳಲ್ಲಿ 12 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಕಳಪೆ ಫಾರ್ಮ್ ODI ಸರಣಿಯಲ್ಲಿಯೂ ಕಂಡುಬಂದಿದ್ದು, ಆಡಿದ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 33 ರನ್‌ಗಳನ್ನು ಮಾತ್ರ ಬಾರಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News