ನವದೆಹಲಿ : ವಿರಾಟ್ ಕೊಹ್ಲಿ (Virat Kohli) ಮತ್ತು ರಿಷಬ್ ಪಂತ್ (Rishab Pant) ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಶ್ರೀಲಂಕಾ ವಿರುದ್ಧದ ಸರಣಿಯಿಂದ ಬಿಸಿಸಿಐ (BCCI) ಬ್ರೇಕ್ ನೀಡಿದೆ. ಇವರ ಬದಲಿಗೆ ಇಬ್ಬರು ಸ್ಪೋಟಕ ಬ್ಯಾಟ್ಸ್‌ಮನ್‌ಗಳು ಕಣಕ್ಕಿಳಿದಿದ್ದಾರೆ. ಈ ಇಬ್ಬರೂ ಕೂಡಾ 3 ಮತ್ತು ಐದನೇ ಕ್ರಮಾಂಕಕ್ಕೆ ಬಹು ದೊಡ್ಡ ಸ್ಪರ್ಧಿಯಾಗಬಹುದು. ಮಾತ್ರವಲ್ಲ, ಕೊಹ್ಲಿ-ಪಂತ್ ಸ್ಥಾನಕ್ಕೂ ಕುತ್ತು ತರಬಹುದು.
ಕೊಹ್ಲಿ ಬದಲಿಗೆ ಮೈದಾನಕ್ಕಿಳಿದ ಈ ಬ್ಯಾಟ್ಸ್‌ಮನ್ :
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ (India Vs Sri Lanka) ವಿರಾಟ್ ಕೊಹ್ಲಿಗೆ ಬಿಸಿಸಿಐ ಬಯೋ ಬಬಲ್ ಬ್ರೇಕ್ ನೀಡಿದೆ. ಶ್ರೀಲಂಕಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಕಣಕ್ಕಿಳಿಸಿದೆ. ಅಯ್ಯರ್ ನಾಯಕ ರೋಹಿತ್ ಶರ್ಮಾ (Rohith Sharma) ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಯ್ಯರ್ 80 ರನ್ ಗಳಿಸಿದದ್ದಾರೆ. ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟ್ಸ್‌ಮನ್ ಮತ್ತು ಶ್ರೇಷ್ಠ ನಾಯಕ. ಹೌದು ಅಯ್ಯರ್ ಅವರನ್ನು ಇತ್ತೀಚೆಗೆ ಕೆಕೆಆರ್ (KKR) ತಂಡದ ನಾಯಕರನ್ನಾಗಿ ಮಾಡಲಾಗಿದೆ. ಕೆಕೆಆರ್ ತಂಡ ಭಾರೀ ಮೊತ್ತವನ್ನು ಪಾವತಿಸಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಮೂರನೇ ಕ್ರಮಾಂಕದಲ್ಲಿ, ಅವರು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುವ ಶಕ್ತಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ : Ind Vs SL : ಕೊಹ್ಲಿ ತಂಡದಿಂದ ಹೊರಗಿಟ್ಟ ಆಟಗಾರನಿಗೆ ಅವಕಾಶ ನೀಡಿದ ರೋಹಿತ್ ಶರ್ಮಾ!
ತಂಡಕ್ಕೆ ಮರಳಿದ ಈ ಬಲಿಷ್ಠ ವಿಕೆಟ್ ಕೀಪರ್ :
ರಿಷಬ್ ಪಂತ್ ಬದಲಿಗೆ ಬಿಸಿಸಿಐ, ಐಪಿಎಲ್‌ನ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಟೀಂ ಇಂಡಿಯಾದಲ್ಲಿ (Team India) ಅವಕಾಶ ನೀಡಿದೆ. ಬಹಳ ದಿನಗಳ ನಂತರ ಸಂಜು ತಂಡಕ್ಕೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕರೂ ಬ್ಯಾಟಿಂಗ್ ಗೆ ಅವಕಾಶ ಸಿಗಲಿಲ್ಲ. ಸಂಜು ಅತ್ಯಂತ ಆಕ್ರಮಣಕಾರಿ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಸಂಜು ಸ್ಯಾಮ್ಸನ್ ಅವರ ವಿಕೆಟ್ ಕೀಪಿಂಗ್ ಕೌಶಲ್ಯವೂ ಅದ್ಭುತವಾಗಿದೆ. ಮೈದಾನದಲ್ಲಿ ನೋಡಿದ ಮೇಲೆ ಅವರ ಚುರುಕುತನ ನಿರ್ಮಾಣವಾಗುತ್ತದೆ. ಸಂಜು ಸ್ಯಾಮ್ಸನ್‌ಗೆ (Sanju Samson) ಅವಕಾಶ ಸಿಕ್ಕರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರೀ ಸಾಧನೆ ಮಾಡಬಹುದು ಎಂಬುದು ಕ್ರಿಕೆಟ್ ಪಂಡಿತರ ನಂಬಿಕೆ.
ಟೀಂ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಹೊಂದಿದೆ :
ಭಾರತ ತಂಡವು ತನ್ನ ಬಲಿಷ್ಠ ಬ್ಯಾಟಿಂಗ್‌ಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಟೀಂ ಇಂಡಿಯಾ ದೇಶ ಮತ್ತು ವಿಶ್ವಕ್ಕೆ ಒಂದಕ್ಕಿಂತ ಒಂದು ಉತ್ತಮ ಬ್ಯಾಟ್ಸ್ ಮೆನ್ ಗಳನ್ನೂ ನೀಡಿದೆ. ಸಚಿನ್ ತೆಂಡೂಲ್ಕರ್ (Sachin Tendulkar), ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಕಪಿಲ್ ದೇವ್ (Kapil Dev). ಇದೀಗ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಈ ಸಂಪ್ರದಾಯವನ್ನು ಮುಂದುವರೆಸುತ್ತಿದ್ದಾರೆ.
ಇದನ್ನೂ ಓದಿ : 'ಕೌಟುಂಬಿಕ ಹಿಂಸಾಚಾರದಲ್ಲಿ ಲಿಯಾಂಡರ್ ಪೇಸ್ ತಪ್ಪಿತಸ್ಥ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ