ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗೆ ಈ ಬೌಲರ್ ನನ್ನು ಎದುರಿಸುವುದು ಕಷ್ಟವಂತೆ ....!

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪ್ರಸ್ತುತ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ಇದುವರಗೆ ಪ್ರಾಬಲ್ಯ ಸಾಧಿಸಿರದ ಬೌಲರ್ ಯಾರೂ ಇಲ್ಲ ಎನ್ನಬಹುದು ಅಷ್ಟರ ಮಟ್ಟಿಗೆ ಅವರು ತಮ್ಮ ಬ್ಯಾಟಿಂಗ್ ಮೂಲಕ ಪ್ರಭಾವವನ್ನು ಬೀರಿದ್ದಾರೆ.

Last Updated : Jun 16, 2020, 04:59 PM IST
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗೆ ಈ ಬೌಲರ್ ನನ್ನು ಎದುರಿಸುವುದು ಕಷ್ಟವಂತೆ  ....! title=

ನವದೆಹಲಿ: ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪ್ರಸ್ತುತ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ಇದುವರಗೆ ಪ್ರಾಬಲ್ಯ ಸಾಧಿಸಿರದ ಬೌಲರ್ ಯಾರೂ ಇಲ್ಲ ಎನ್ನಬಹುದು ಅಷ್ಟರ ಮಟ್ಟಿಗೆ ಅವರು ತಮ್ಮ ಬ್ಯಾಟಿಂಗ್ ಮೂಲಕ ಪ್ರಭಾವವನ್ನು ಬೀರಿದ್ದಾರೆ.

ಇತ್ತೀಚಿನ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ, ಮಾಜಿ ಆಸೀಸ್ ಕ್ಯಾಪ್ಟನ್ ಅಭಿಮಾನಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ತಾವು ಎದುರಿಸಲು ಕಷ್ಟಪಡುವ ಬೌಲರ್ ಯಾರು? ಎಂದು ಕೇಳಿದಾಗ ಅದಕ್ಕೆ ಉತ್ತರಿಸಿದ ಅವರು ಪಾಕಿಸ್ತಾನದ  ಮೊಹಮ್ಮದ್ ಅಮೀರ್ ಎಂದು ಹೇಳಿದರು.

"ಮೊಹಮ್ಮದ್ ಅಮೀರ್, ನಾನು ಎದುರಿಸಿದ ಅತ್ಯಂತ ಕೌಶಲ್ಯಶಾಲಿ ಎಂದು ನಾನು ಭಾವಿಸುತ್ತೇನೆ" ಎಂದು ಸ್ಮಿತ್ ಹೇಳಿದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಅವರನ್ನು ಈ ಕಾರಣಕ್ಕಾಗಿ ಮೆಚ್ಚುತ್ತಾರಂತೆ ಸ್ಟೀವ್ ಸ್ಮಿತ್...!

ಪಾಕಿಸ್ತಾನ ಕ್ರಿಕೆಟ್ ಅನ್ನು ಬೆಚ್ಚಿಬೀಳಿಸಿದ 2010 ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಅಮೀರ್ ಅವರ ಪಾತ್ರದಿಂದಾಗಿ 5 ವರ್ಷಗಳ ಕಾಲ ಇಂಟರ್ನ್ಯಾಷನಲ್ ಕ್ರಿಕೆಟ್ ನಿಂದ ನಿಷೇಧಿಸಲಾಯಿತು.  ನಿಷೇಧವನ್ನು ಪೂರೈಸಿದ ನಂತರ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಅವಕಾಶ ನೀಡಲಾಯಿತು ಮತ್ತು ಅಂದಿನಿಂದ ಅವರು ಕೆಲವು ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ.

2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಎಡಗೈ ವೇಗಿ ಪಾಕಿಸ್ತಾನ ಪರ 36 ಟೆಸ್ಟ್, 61 ಏಕದಿನ ಮತ್ತು 48 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಅವರ ಪಾತ್ರದಿಂದಾಗಿ ಸ್ಮಿತ್ ಒಂದು ವರ್ಷ ನಿಷೇಧದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅದ್ಭುತ ಪುನರಾಗಮನ ಮಾಡಿದ್ದಾರೆ.

Trending News