U19 World Cup Finalನಲ್ಲಿ ಟೀಂ ಇಂಡಿಯಾ ಮಹಿಳಾಪಡೆಗಳ ಅಬ್ಬರ: ಬ್ಯಾಕ್ ಟು ಬ್ಯಾಕ್ ಬಿತ್ತು ಇಂಗ್ಲೆಂಡ್ ವಿಕೆಟ್

U19 World Cup 2023 Final: ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಜಾಗತಿಕ ಟ್ರೋಫಿಯನ್ನು ಪಡೆಯುವ ಸುವರ್ಣಾವಕಾಶವನ್ನು ಇಂದು ಬಂದೊದಗಿದೆ. 18 ವರ್ಷಗಳ ಹಿಂದೆ (2005 ODI ವಿಶ್ವಕಪ್ ಫೈನಲ್) ಮೊದಲ ಬಾರಿಗೆ ಭಾರತ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಶಫಾಲಿ ವರ್ಮಾ ಅವರ ತಂಡವು ಇತಿಹಾಸವನ್ನು ನಿರ್ಮಿಸಲು ಮುಂದಾಗಿದೆ. ಒಂದು ವೇಳೆ ಟೀಂ ಇಂಡಿಯಾ ಮಹಿಳಾ ಪಡೆ ವಿಶ್ವಕಪ್ ಗೆದ್ದರೆ, ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ.

Written by - Bhavishya Shetty | Last Updated : Jan 29, 2023, 07:10 PM IST
    • 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ನ ಅಂತಿಮ ಪಂದ್ಯ
    • ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 68 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದೆ
    • ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿದೆ
U19 World Cup Finalನಲ್ಲಿ ಟೀಂ ಇಂಡಿಯಾ ಮಹಿಳಾಪಡೆಗಳ ಅಬ್ಬರ: ಬ್ಯಾಕ್ ಟು ಬ್ಯಾಕ್ ಬಿತ್ತು ಇಂಗ್ಲೆಂಡ್ ವಿಕೆಟ್  title=
Women's T20 World Cup

U19 World Cup 2023 Final: ಭಾರತ ವಿರುದ್ಧ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 68 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದೆ. ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳು ಈ ಟೂರ್ನಿಯಲ್ಲಿ ಮೊದಲ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿವೆ. ಭಾರತ 8 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ನ್ನು ಸೋಲಿಸಿತ್ತು ಮತ್ತು ಇಂಗ್ಲೆಂಡ್ 3 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಪ್ರಶಸ್ತಿ ಗೆಲ್ಲುವ ಸುತ್ತಿಗೆ ಪ್ರವೇಶಿಸಿದ್ದವು. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು.

ಇದನ್ನೂ ಓದಿ: IND vs NZ: ಭಾರತದ ಈ ಆಟಗಾರ T20 ಪಂದ್ಯ ಆಡಲು ಯೋಗ್ಯರಲ್ಲವೇ? ಅತ್ಯಂತ ಕಳಪೆ ದಾಖಲೆ ಬರೆದ ಪ್ಲೇಯರ್

ಟೀಂ ಇಂಡಿಯಾಗೆ ಇತಿಹಾಸ ಸೃಷ್ಟಿಸುವ ಅವಕಾಶ:

ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಜಾಗತಿಕ ಟ್ರೋಫಿಯನ್ನು ಪಡೆಯುವ ಸುವರ್ಣಾವಕಾಶವನ್ನು ಇಂದು ಬಂದೊದಗಿದೆ. 18 ವರ್ಷಗಳ ಹಿಂದೆ (2005 ODI ವಿಶ್ವಕಪ್ ಫೈನಲ್) ಮೊದಲ ಬಾರಿಗೆ ಭಾರತ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಶಫಾಲಿ ವರ್ಮಾ ಅವರ ತಂಡವು ಇತಿಹಾಸವನ್ನು ನಿರ್ಮಿಸಲು ಮುಂದಾಗಿದೆ. ಒಂದು ವೇಳೆ ಟೀಂ ಇಂಡಿಯಾ ಮಹಿಳಾ ಪಡೆ ವಿಶ್ವಕಪ್ ಗೆದ್ದರೆ, ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ.

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್:

ಶ್ವೇತಾ ಸೆಹ್ರಾವತ್, ಶೆಫಾಲಿ ವರ್ಮಾ, ಸೌಮ್ಯ ತಿವಾರಿ, ಜಿ ತ್ರಿಶಾ, ರಿಚಾ ಘೋಷ್, ಹರ್ಷಿತಾ ಬಸು, ಟಿಟಾಸ್ ಸಾಧು, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶ್ವಿ ಚೋಪ್ರಾ, ಸೋನಮ್ ಯಾದವ್

ಇದನ್ನೂ ಓದಿ: ಧೋನಿ-ರೈನಾ ದಾಖಲೆ ಮುರಿದು ಹೊಸ ಮೈಲಿಗಲ್ಲು ಸಾಧಿಸಿದ ಮಿ.360 Suryakumar Yadav

ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್:

ಗ್ರೇಸ್, ಲಿಬರ್ಟಿ ಹೀಪ್, ನಿಮಾಹ್, ಸೆರೆನ್, ರಿಯಾನ್ನಾ ಮ್ಯಾಕ್‌ಡೊನಾಲ್ಡ್, ಕ್ಯಾರಿಸ್, ಅಲೆಕ್ಸಾ ಸ್ಟೋನ್‌ಹೌಸ್, ಸೋಫಿ, ಜೋಶಿ, ಎಲ್ಲೀ ಆಂಡರ್ಸನ್, ಹನ್ನಾ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News