Asia Cup 2023 Points Table: ಏಷ್ಯಾ ಕಪ್ 2023ರ ಸೂಪರ್-4ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿತ್ತು. ಇದರಲ್ಲಿ ಟೀಂ ಇಂಡಿಯಾವು 228 ರನ್;ಗಳಿಂದ ಅದ್ಭುತ ವಿಜಯವನ್ನು ದಾಖಲಿಸಿತು. ಈ ಗೆಲುವಿನ ಬಳಿಕ ಭಾರತ ತಂಡ ಸೂಪರ್-4ರ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರುವ ಮೂಲಕ ಫೈನಲ್’ಗೆ ಹೆಜ್ಜೆ ಹಾಕಿದೆ. ಪಾಕಿಸ್ತಾನದ ವಿರುದ್ಧ ಗೆಲ್ಲುವ ಮೂಲಕ ಭಾರತವು 2 ಅಂಕಗಳ ಜೊತೆಗೆ ಬೆಸ್ಟ್ ರನ್ ರೇಟ್ (+4.560) ಹೊಂದಿದೆ.
ಇದನ್ನೂ ಓದಿ: ಏಷ್ಯಾಕಪ್ ಫೈನಲ್ ಎಂಟ್ರಿಯಾಗ್ಬೇಕು ಅಂದ್ರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಭಾರತ?
ಇನ್ನು ಪಾಯಿಂಟ್ ಪಟ್ಟಿಯಲ್ಲಿ ಶ್ರೀಲಂಕಾ ತಂಡ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಕೂಡ ಇದುವರೆಗೆ ಸೂಪರ್-4 ರಲ್ಲಿ ಒಂದು ಪಂದ್ಯವನ್ನು ಆಡಿದ್ದು, ಗೆಲುವು ಕಂಡಿದೆ. ಈ ಮೂಲಕ 2 ಅಂಕಗಳನ್ನು ಪಡೆದಿದ್ದಾದರೂ, ಕಡಿಮೆ ರನ್ ರೇಟ್’ನಿಂದಾಗಿ ತಂಡವು ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಸೂಪರ್-4 ರ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಿತ್ತು, ಇದರಲ್ಲಿ ತಂಡವು 21 ರನ್’ಗಳಿಂದ ಗೆಲುವು ಸಾಧಿಸಿತ್ತು.
ಸೋಲಿನ ಬಳಿಕ ಪಾಕಿಸ್ತಾನಕ್ಕೆ ಆಘಾತ:
ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡ ಹಿನ್ನಡೆ ಅನುಭವಿಸಿದೆ. ತಂಡದ ನೆಟ್ ರನ್ ರೇಟ್ ನಕಾರಾತ್ಮಕವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಸೂಪರ್-4 ರಲ್ಲಿ ಪಾಕಿಸ್ತಾನ ಎರಡು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಂದು ಗೆಲುವು ಮತ್ತು ಒಂದು ಸೋಲನ್ನು ಅನುಭವಿಸಿದೆ. ಪ್ರಸ್ತುತ ತಂಡವು 2 ಅಂಕಗಳನ್ನು ಹೊಂದಿದ್ದು, ಅದರ ರನ್ ರೇಟ್ -1.892 ಆಗಿದೆ. ಮುಂದೆ ಫೈನಲ್ ತಲುಪಬೇಕೆಂದರೆ ಆಡಲಿರುವ ಪ್ರತೀ ಪಂದ್ಯವನ್ನು ಗೆಲ್ಲಲೇಬೇಕು.
ಬಾಂಗ್ಲಾದೇಶಕ್ಕೆ ಕೊನೆ ಸ್ಥಾನ:
ಬಾಂಗ್ಲಾದೇಶ ತಂಡ ಸೂಪರ್-4 ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಅಂದರೆ ಕೊನೆಯ ಸ್ಥಾನದಲ್ಲಿದೆ. ಶಕೀಬ್ ಅಲ್ ಹಸನ್ ನಾಯಕತ್ವದಲ್ಲಿ ಬಾಂಗ್ಲಾದೇಶ ಸೂಪರ್-4 ರಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋಲು ಅನುಭವಿಸಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡ 7 ವಿಕೆಟ್’ಗಳಿಂದ ಸೋತಿತ್ತು. ಇದಾದ ಬಳಿಕ ಶ್ರೀಲಂಕಾ ವಿರುದ್ಧ 21 ರನ್’ಗಳಿಂದ ಸೋಲನುಭವಿಸಬೇಕಾಯಿತು.
ಏಷ್ಯಾ ಕಪ್ 2023ರ ಸೂಪರ್-4ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿತ್ತು. ಇದರಲ್ಲಿ ಟೀಂ ಇಂಡಿಯಾವು 228 ರನ್;ಗಳಿಂದ ಅದ್ಭುತ ವಿಜಯವನ್ನು ದಾಖಲಿಸಿತು. ಈ ಗೆಲುವಿನ ಬಳಿಕ ಭಾರತ ತಂಡ ಸೂಪರ್-4ರ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರುವ ಮೂಲಕ ಫೈನಲ್’ಗೆ ಹೆಜ್ಜೆ ಹಾಕಿದೆ. ಪಾಕಿಸ್ತಾನದ ವಿರುದ್ಧ ಗೆಲ್ಲುವ ಮೂಲಕ ಭಾರತವು 2 ಅಂಕಗಳ ಜೊತೆಗೆ ಬೆಸ್ಟ್ ರನ್ ರೇಟ್ (+4.560) ಹೊಂದಿದೆ.
ಇನ್ನು ಪಾಯಿಂಟ್ ಪಟ್ಟಿಯಲ್ಲಿ ಶ್ರೀಲಂಕಾ ತಂಡ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಕೂಡ ಇದುವರೆಗೆ ಸೂಪರ್-4 ರಲ್ಲಿ ಒಂದು ಪಂದ್ಯವನ್ನು ಆಡಿದ್ದು, ಗೆಲುವು ಕಂಡಿದೆ. ಈ ಮೂಲಕ 2 ಅಂಕಗಳನ್ನು ಪಡೆದಿದ್ದಾದರೂ, ಕಡಿಮೆ ರನ್ ರೇಟ್’ನಿಂದಾಗಿ ತಂಡವು ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಸೂಪರ್-4 ರ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಿತ್ತು, ಇದರಲ್ಲಿ ತಂಡವು 21 ರನ್’ಗಳಿಂದ ಗೆಲುವು ಸಾಧಿಸಿತ್ತು.
ಸೋಲಿನ ಬಳಿಕ ಪಾಕಿಸ್ತಾನಕ್ಕೆ ಆಘಾತ:
ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡ ಹಿನ್ನಡೆ ಅನುಭವಿಸಿದೆ. ತಂಡದ ನೆಟ್ ರನ್ ರೇಟ್ ನಕಾರಾತ್ಮಕವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಸೂಪರ್-4 ರಲ್ಲಿ ಪಾಕಿಸ್ತಾನ ಎರಡು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಂದು ಗೆಲುವು ಮತ್ತು ಒಂದು ಸೋಲನ್ನು ಅನುಭವಿಸಿದೆ. ಪ್ರಸ್ತುತ ತಂಡವು 2 ಅಂಕಗಳನ್ನು ಹೊಂದಿದ್ದು, ಅದರ ರನ್ ರೇಟ್ -1.892 ಆಗಿದೆ. ಮುಂದೆ ಫೈನಲ್ ತಲುಪಬೇಕೆಂದರೆ ಆಡಲಿರುವ ಪ್ರತೀ ಪಂದ್ಯವನ್ನು ಗೆಲ್ಲಲೇಬೇಕು.
ಇದನ್ನೂ ಓದಿ: 1 ಶತಕ, 10 ದಾಖಲೆಗಳು ಉಡೀಸ್..! ವಿರಾಟ್ ಅಬ್ಬರಕ್ಕೆ ಪುಡಿಪುಡಿಯಾದ ದಾಖಲೆಗಳು ಯಾವ್ಯಾವು ಗೊತ್ತಾ?
ಬಾಂಗ್ಲಾದೇಶಕ್ಕೆ ಕೊನೆ ಸ್ಥಾನ:
ಬಾಂಗ್ಲಾದೇಶ ತಂಡ ಸೂಪರ್-4 ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಅಂದರೆ ಕೊನೆಯ ಸ್ಥಾನದಲ್ಲಿದೆ. ಶಕೀಬ್ ಅಲ್ ಹಸನ್ ನಾಯಕತ್ವದಲ್ಲಿ ಬಾಂಗ್ಲಾದೇಶ ಸೂಪರ್-4 ರಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋಲು ಅನುಭವಿಸಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡ 7 ವಿಕೆಟ್’ಗಳಿಂದ ಸೋತಿತ್ತು. ಇದಾದ ಬಳಿಕ ಶ್ರೀಲಂಕಾ ವಿರುದ್ಧ 21 ರನ್’ಗಳಿಂದ ಸೋಲನುಭವಿಸಬೇಕಾಯಿತು.
Asia Cup Points Table 2023 - Super 4
ತಂಡಗಳು | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ | ನೆಟ್ ರನ್ ರೇಟ್ |
ಭಾರತ | 1 | 1 | 0 | 0 | 2 | +4.560 |
ಶ್ರೀಲಂಕಾ | 1 | 1 | 0 | 0 | 2 | +0.420 |
ಪಾಕಿಸ್ತಾನ | 2 | 1 | 1 | 0 | 2 | -1.892 |
ಬಾಂಗ್ಲಾದೇಶ | 2 | 0 | 2 | 0 | 0 | -0.749 |
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ