6 ಮಕ್ಕಳಿದ್ದರೂ 92ನೇ ವಯಸ್ಸಲ್ಲಿ 5ನೇ ಮದುವೆಗೆ ಸಜ್ಜಾದ ಜಗತ್ತಿನ ಖ್ಯಾತ ಉದ್ಯಮಿ! 1.5 ಲಕ್ಷ ಕೋಟಿ ಆಸ್ತಿ ಒಡೆಯನೀತ

Media tycoon Rupert Murdoch Marriage: ಬಿಲಿಯನೇರ್ ರೂಪರ್ಟ್ ಮರ್ಡೋಕ್ ಜೂನ್‌’ನಲ್ಲಿ ಮದುವೆಯಾಗಲಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ರೂಪರ್ಟ್ ಮುರ್ಡೋಕ್ ತನ್ನ ಐದನೇ ವಿವಾಹದ ದಿನಾಂಕವನ್ನು ಘೋಷಿಸಿದ್ದಾರೆ.

Written by - Bhavishya Shetty | Last Updated : Mar 9, 2024, 03:44 PM IST
    • ಹಿರಿಯ ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್‌ 5ನೇ ಮದುವೆ
    • ಮುರ್ಡೋಕ್ ತನ್ನ ಐದನೇ ವಿವಾಹದ ದಿನಾಂಕವನ್ನು ಘೋಷಿಸಿದ್ದಾರೆ
    • ಬಿಲಿಯನೇರ್ ರೂಪರ್ಟ್ ಮರ್ಡೋಕ್ ಜೂನ್‌’ನಲ್ಲಿ ಮದುವೆಯಾಗಲಿದ್ದಾರೆ
6 ಮಕ್ಕಳಿದ್ದರೂ 92ನೇ ವಯಸ್ಸಲ್ಲಿ 5ನೇ ಮದುವೆಗೆ ಸಜ್ಜಾದ ಜಗತ್ತಿನ ಖ್ಯಾತ ಉದ್ಯಮಿ! 1.5 ಲಕ್ಷ ಕೋಟಿ ಆಸ್ತಿ ಒಡೆಯನೀತ title=
Rupert Murdoch

Media tycoon Rupert Murdoch Marriage: 'ಪ್ರೀತಿಯು ವಯಸ್ಸಿನ ಮೇಲೆ ಅವಲಂಬಿತವಾಗಿಲ್ಲ' ಎಂಬ ಮಾತಿದೆ. ಇದು ಹಿರಿಯ ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್‌ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿದೆ. ಬಿಲಿಯನೇರ್ ರೂಪರ್ಟ್ ಮರ್ಡೋಕ್ ಈಗ 5 ನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ಅವರೇ ಘೋಷಿಸಿದ್ದಾರೆ. ವಿಶೇಷವೆಂದರೆ ಅವರಿಗೆ 92 ವರ್ಷ ವಯಸ್ಸು.

ಇದನ್ನೂ ಓದಿ: ಇಂದಿನಿಂದ ಮಾರ್ಚ್ 13ರವರೆಗೆ ಈ ಸ್ಥಳಗಳಲ್ಲಿ ಭಾರೀ ಮಳೆ! ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಬಿಲಿಯನೇರ್ ರೂಪರ್ಟ್ ಮರ್ಡೋಕ್ ಜೂನ್‌’ನಲ್ಲಿ ಮದುವೆಯಾಗಲಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ರೂಪರ್ಟ್ ಮುರ್ಡೋಕ್ ತನ್ನ ಐದನೇ ವಿವಾಹದ ದಿನಾಂಕವನ್ನು ಘೋಷಿಸಿದ್ದಾರೆ. ಜೂನ್ 2024ರಲ್ಲಿ ತನ್ನ ಗೆಳತಿ ಎಲೆನಾ ಝುಕೋವಾ ಅವರನ್ನು ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಕಳೆದ ವರ್ಷ, ರೂಪರ್ಟ್ ಅವರು ದಂತ ನೈರ್ಮಲ್ಯ ತಜ್ಞೆ ರೇಡಿಯೊ ಹೋಸ್ಟ್ ಆನ್ನೆ ಲೆಸ್ಲಿ ಸ್ಮಿತ್ ಅವರೊದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಲ್ಲಿದ್ದರು. ಆದರೆ ಅದಾದ ಒಂದು ತಿಂಗಳೊಳಗೆ ಸಂಬಂಧವನ್ನೇ ದೂರ ಮಾಡಿದ್ದರು.

ವರದಿಯ ಪ್ರಕಾರ ಎಲೆನಾ ಝುಕೋವಾ ರಷ್ಯಾದ ಮಾಸ್ಕೋ ನಿವಾಸಿಯಾಗಿದ್ದು, ಆಕೆಯ ವಯಸ್ಸು 67 ವರ್ಷ. ಸ್ವಲ್ಪ ಸಮಯ ಡೇಟಿಂಗ್ ನಡೆಸಿದ ಬಳಿಕ ಇವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ.

ಬಿಲಿಯನೇರ್ ರೂಪರ್ಟ್ ಮುರ್ಡೋಕ್ ಅವರ ಕೊನೆಯ ನಾಲ್ಕು ಮದುವೆಗಳ ಬಗ್ಗೆ ಮಾತನಾಡುವುದಾದರೆ, ಮೊದಲ ಪತ್ನಿ ಪೆಟ್ರೀಷಿಯಾ ಬುಕರ್ (1956-1967), ಎರಡನೇ ಪತ್ನಿ ಅನ್ನಾ ಮನ್ (1967-1999), ಮೂರನೇ ಪತ್ನಿ ವೆಂಡಿ ಡೆಂಗ್ (1999-2013), ನಾಲ್ಕನೇ ಪತ್ನಿ ಜೆರ್ರಿ ಹಾಲ್ (2016-2022)

ರೂಪರ್ಟ್ ಅವರ ಒಟ್ಟು ನಿವ್ವಳ ಮೌಲ್ಯ 1.5 ಲಕ್ಷ ಕೋಟಿ ರೂ. 1931 ರಲ್ಲಿ ಆಸ್ಟ್ರೇಲಿಯಾದಲ್ಲಿ ಜನಿಸಿದ ರೂಪರ್ಟ್ ಮುರ್ಡೋಕ್, ಅಮೆರಿಕದ ದೊಡ್ಡ ಬಿಲಿಯನೇರ್‌’ಗಳಲ್ಲಿ ಒಬ್ಬರು ಎಂದು ಗುರುತಿಲ್ಪಟ್ಟಿದ್ದಾರೆ. ಫೋರ್ಬ್ಸ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ರೂಪರ್ಟ್ ನಿವ್ವಳ ಮೌಲ್ಯವು 18.9 ಶತಕೋಟಿ ಡಾಲರ್ ಆಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ 1.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು.

ಇದನ್ನೂ ಓದಿ:  ಮನೆ ಅಂಗಳಕ್ಕೆ ಈ ಹಕ್ಕಿ ಬಂದರೆ ಅದೃಷ್ಟವೇ ಓಡೋಡಿ ಬಂದಂತೆ.. ಇದು ಹಣಕಾಸಿನ ಲಾಭದ ಸ್ಪಷ್ಟ ಸಂಕೇತ!

ಅನೇಕ ದೊಡ್ಡ ಮಾಧ್ಯಮ ಸಂಸ್ಥೆಗಳ ಮಾಲೀಕ ರೂಪರ್ಟ್ ಮುರ್ಡೋಕ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌’ನ ದೊಡ್ಡ ಪತ್ರಿಕೆಗಳು ಮತ್ತು ಟಿವಿಗಳ ಮಾಲೀಕರಾಗಿದ್ದಾರೆ. ಬ್ರಿಟನ್‌’ನ ಪ್ರಸಿದ್ಧ ದಿ ಟೈಮ್ಸ್, ಸಂಡೇ ಟೈಮ್ಸ್, ದಿ ಸನ್ ಸೇರಿದಂತೆ ಅನೇಕ ಪತ್ರಿಕೆಗಳನ್ನು ಹೊಂದಿದ್ದಾರೆ. ಇದಲ್ಲದೆ, ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್, ನ್ಯೂಯಾರ್ಕ್ ಪೋಸ್ಟ್, ಫಾಕ್ಸ್ ಟಿವಿ ಗ್ರೂಪ್ ಮತ್ತು ಸ್ಕೈ ಇಟಾಲಿಯಾದ ಮಾಲೀಕರಾಗಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಅನ್ನು ಸಹ ಇವರು ಹೊಂದಿದ್ದಾರೆ. ಇದರೊಂದಿಗೆ, ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಬ್ರಿಟಿಷ್ ಸ್ಕೈ ಬ್ರಾಡ್‌ಕಾಸ್ಟರ್‌’ನಲ್ಲಿ ಪಾಲುದಾರರಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News