ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3: ವಿಶೇಷ ಅತಿಥಿಯಾಗಿ ಚಿತ್ರನಟ ವಿಜಯ್ ರಾಘವೇಂದ್ರ ಭಾಗಿ

ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3ರ ಟ್ರೋಫಿಯನ್ನು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ. ಸಿ ಎನ್‌ ಅಶ್ವತ್ಥನಾರಾಯಣ ಅನಾವರಣಗೊಳಿಸಿದರು.

Written by - Zee Kannada News Desk | Last Updated : Aug 27, 2024, 02:26 PM IST
  • ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3
  • ಬಿಜೆಪಿ ಶಾಸಕ ಡಾ. ಸಿ ಎನ್‌ ಅಶ್ವತ್ಥನಾರಾಯಣರಿ ಅನಾವರಣ
  • ವಿಶೇಷ ಅತಿಥಿಯಾಗಿ ಚಿತ್ರನಟ ವಿಜಯ್ ರಾಘವೇಂದ್ರ ಭಾಗಿ
ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3: ವಿಶೇಷ ಅತಿಥಿಯಾಗಿ ಚಿತ್ರನಟ ವಿಜಯ್ ರಾಘವೇಂದ್ರ ಭಾಗಿ  title=

ಬೆಂಗಳೂರು: ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3ರ ಟ್ರೋಫಿಯನ್ನು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ. ಸಿ ಎನ್‌ ಅಶ್ವತ್ಥನಾರಾಯಣ ಅನಾವರಣಗೊಳಿಸಿದರು. ಇತ್ತೀಚಿಗಷ್ಟೇ ಬೆಂಗಳೂರಿನ ಗೋಕುಲಂ ಗ್ರಾಂಡ್, HMR ಲೇಔಟ್, ಗೋಕುಲ ಎಕ್ಸೆನ್ಷನ್‌, ಮತ್ತಿಕೆರೆಯಲ್ಲಿ ನಡೆದ ಈ ಗ್ರ್ಯಾಂಡ್‌ ಕಾರ್ಯಕ್ರಮದಲ್ಲಿ ಸಿ.ಎನ್. ಅಶ್ವಥ್ ನಾರಾಯಣ ಅವರ ಜತೆಗೆ ಖ್ಯಾತ ಸಿನಿಮಾ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ವರ್ಷದ ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ (ಕೆಡಬ್ಲ್ಯೂಪಿಎಲ್) ಹಿಂದಿನ ಎರಡು ಸೀಸನ್‌ಗಳಿಗಿಂತ ಗ್ರ್ಯಾಂಡ್‌ ಆಗಿರಲಿದೆ. ಈ ಸೀಸನ್‌ನಲ್ಲಿ ಸ್ಥಳೀಯ ಪ್ರತಿಭೆಗಳು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ. ಇದು ಸ್ಪರ್ಧೆಯ ಜತೆಗೆ ನೋಡುಗರ ಉತ್ಸಾಹವನ್ನೂ ಹೆಚ್ಚಿಸಲಿದೆ ಎಂದು ಆಯೋಜಕರು ತಿಳಿಸಿದರು. 

ಇದನ್ನೂ ಓದಿ : ಮೂಡಾ ಬಳಿಕ ಮತ್ತೊಂದು ಹೊಸ ಭೂ ಹಗರಣದ ಸದ್ದು : ಕೆಐಎಡಿಬಿ ಹಂಚಿಕೆಯಲ್ಲಿ ಖರ್ಗೆ ಕುಟುಂಬ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪ 

KWPL ಸೀಸನ್-3 ಟ್ರೋಫಿಯನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಅಡೆತಡೆಗಳನ್ನು ಮುರಿದು, ಚಾಂಪಿಯನ್‌ಗಳನ್ನು ನಿರ್ಮಿಸುವುದು’ ಎಂಬ ಅಡಿಬರಹದಲ್ಲಿ ಶ್ಲಾಘಿಸಿದರು. ಆಟಗಾರರಿಗೆ ಕ್ರೀಡೆಯಲ್ಲಿ ಮಾತ್ರವಲ್ಲದೆ ಅವರ ಜೀವನದಲ್ಲೂ ನಿಜವಾದ ಚಾಂಪಿಯನ್ ಆಗಲು ಈ ವೇದಿಕೆ ತುಂಬ ಮಹತ್ವದ್ದು ಎಂದರು. ವಿಜಯ ರಾಘವೇಂದ್ರ ಅವರು "ನಾನು ಇಂದು ಮಾತ್ರವಲ್ಲದೆ ಲೀಗ್ ಪಂದ್ಯಾವಳಿಯ ಸಮಯದಲ್ಲಿಯೂ ಇರುತ್ತೇನೆ. ಎಲ್ಲರ ಜತೆಗಿದ್ದು, ಟೂರ್ನಮೆಂಟ್‌ ಅನ್ನು ಯಶಸ್ವಿಗೊಳಿಸೋಣ ಎಂದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸದಸ್ಯ ಶ್ರೀ ಶಿವ ಪ್ರಸಾದ್, ಈ ವರ್ಷ ಕೆಡಬ್ಲ್ಯೂಪಿಎಲ್ ಸೀಸನ್-3ರ ಗುರಿಯು ಕ್ರೀಡಾ ಮನೋಭಾವದ ಜತೆಗೆ ಸಮುದಾಯ ನಿರ್ಮಾಣದ ಮನೋಭಾವವನ್ನು ಹುಟ್ಟುಹಾಕುವ ಕೆಲಸವಾಗಲಿದೆ. ಈ ಮೂಲಕ ಕ್ರೀಡೆಯಲ್ಲಿ ಜೀವನೋಪಾಯದ ದೃಷ್ಟಿಯನ್ನು ವೃದ್ಧಿಸಲು ವೀಲ್‌ಚೇರ್‌ ಕ್ರಿಕೆಟ್‌ಅನ್ನು ಕ್ರಾಂತಿಯ ರೀತಿ ಸಿದ್ಧಪಡಿಸಬೇಕಿದೆ. 

ಇದನ್ನೂ ಓದಿ : "ಹಿಂದುಳಿದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ" 

ಐಪಿಎಲ್‌ನಂತಹ ವೃತ್ತಿಪರ ಕ್ರಿಕೆಟ್ ಲೀಗ್‌ಗಳಂತೆ, ಕೆಡಬ್ಲ್ಯೂಪಿಎಲ್ ಸೀಸನ್ 3ರಲ್ಲಿಯೂ ಆಟಗಾರರ ಹರಾಜು ನಡೆಯಲಿದೆ. ತಂಡದ ಮಾಲೀಕರು ತಮ್ಮ ತಂಡಗಳನ್ನು ಕಾರ್ಯತಂತ್ರವಾಗಿ ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಯಶಸ್ವಿ T20 ಸ್ವರೂಪವನ್ನು ಅಳವಡಿಸಿಕೊಂಡು ಕ್ರೀಡಾ ಪ್ರೇಮಿಗಳನ್ನು ಸೆಳೆಯಲಿದ್ದೇವೆ. KWPL ವೀಲ್‌ಚೇರ್ ಕ್ರಿಕೆಟ್ ಕ್ಷೇತ್ರದಲ್ಲಿ ಒಂದು ಹೆಗ್ಗುರುತಾಗಲಿದೆ ಎಂಬ ಭರವಸೆ ಇದೆ. ಇದು ಅಸಾಧಾರಣ ಪ್ರತಿಭೆ, ದೃಢತೆ ಮತ್ತು ವಿಕಲಾಂಗ ಅಥ್ಲೀಟ್‌ಗಳ ಉತ್ಸಾಹವನ್ನು ಎತ್ತಿ ತೋರಿಸುತ್ತದೆ. ಈ ಪಂದ್ಯಾವಳಿಯು ಅಂಗವಿಕಲರು (PWD) ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ರೀಡೆ ಮತ್ತು ಸಮಾಜದಲ್ಲಿ ಅವರ ಸೇರ್ಪಡೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು. 

ಈ ವಿನೂತನ ಪ್ರಯತ್ನವು KST ಬೆಂಬಲದ ಜತೆಗೆ ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಕ್ಷಮಾತಾ ಇನ್ನೋವೇಶನ್ ಫೌಂಡೇಶನ್ (KIF) ಸಹಯೋಗದಲ್ಲಿ ನಡೆಯುತ್ತಿದೆ. ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಕುರಿತು ಹೆಚ್ಚಿನ ಮಾಹಿತಿಗಾಗಿ https://www.divyaangmyithri.com/kwpl-3 ಭೇಟಿ ನೀಡಬಹುದು. ಸಂಪರ್ಕಕ್ಕೆ ಶಿವ ಪ್ರಸಾದ್, ದಿಲೀಪ್‌ ಕುಮಾರ್‌ ಅವರನ್ನು shiva@divyaangmyithri.com, dilip@divyaangmyithri.com  ತಲುಪಬಹುದು. ಸಂಪರ್ಕ ಸಂಖ್ಯೆಗಳು 9986961117, 7610895555.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News