Viral Video: ನವದೆಹಲಿ: ಡಾನ್ಸ್ ಅಥವಾ ಎಕ್ಸರ್ಸೈಜ್ ವೇಳೆ ಜನರು ಬ್ಯಾಕ್ ಫ್ಲಿಪ್ ಹೊಡೆಯುವುದನ್ನು ನೀವು ನೋಡಿರಬಹುದು. ಇತೀಚಿನ ಮಾಡರ್ನ್ ಡ್ಯಾನ್ಸ್ ನಲ್ಲಿ ಇದು ಟ್ರೆಂಡ್ ಆಗಿದೆ. ಯುವಕರಿಗೆ ಬ್ಯಾಕ್ ಫ್ಲಿಪ್ ಹೊಡೆಯುವುದು ತುಂಬಾ ಸುಲಭದ ಮಾತು. ಆದರೆ ಯುವತಿಯರಿಗೆ ಇದು ತುಂಬಾ ಕಷ್ಟಕರ. ಸೀರೆಯುಟ್ಟು ಬ್ಯಾಕ್ ಫ್ಲಿಪ್ ಹೊಡೆಯಲು ಯಾರೂ ಯೋಚಿಸುವುದಿಲ್ಲ ಕೂಡ.
ಸೀರೆಯುಟ್ಟ ಯುವತಿಯ ವಿಡಿಯೋ ವೈರಲ್
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ಯುವತಿಯೋರ್ವಳನ್ನು ಸೀರೆಯುಟ್ಟು ಜಬರ್ದಸ್ತ್ ಬ್ಯಾಕ್ ಫ್ಲಿಪ್ ಹೊಡೆಯುತ್ತಿರುವುದನ್ನು ನೋಡಬಹುದು. ಈ ಯುವತಿ ಗಾಳಿಯಲ್ಲಿ ಹಲವು ಬಾರಿ ಜಂಪ್ ಮಾಡಿ ಮತ್ತೆ ನೆಲದ ಮೇಲೆ ಪರ್ಫೆಕ್ಟ್ ಆಗಿ ಎದ್ದು ನಿಲ್ಲುತ್ತಾಳೆ. ಒಮ್ಮೆ ನೋಡಿದರೆ ಹಲವು ಬಾರಿ ನೀವು ಈ ವಿಡಿಯೋ ನೋಡುವಿರಿ.
When a gymnast does flips in a saree.
Watched it thrice just to see how the saree defied gravity. #ParulArora #ownit pic.twitter.com/tOxzqUOA7H
— Aparna Jain (@Aparna) January 7, 2021
ಇದನ್ನು ಓದಿ- Viral Video: ನೀವೂ ಇಂತಹ Yoga ನೋಡಿರಲಿಕ್ಕಿಲ್ಲ
ಈ ವಿಡಿಯೋ ನೋಡಿ ನಿಮಗೂ ಕೂಡ ಒಂದು ಕ್ಷಣ ನಿಮ್ಮ ಕಣ್ಣುಗಳ ಮೇಲಿನ ನಂಬಿಕೆ ಹೊರಟುಹೋಗಲಿದೆ. ಪದೇ ಪದೇ ನೀವು ಈ ವಿಡಿಯೋ ಅನ್ನು ಸೂಕ್ಷ್ಮವಾಗಿ ವಿಕ್ಷೀಸುವಿರಿ . ಈ ವಿಡಿಯೋದಲ್ಲಿ ಸೀರೆಯುಟ್ಟು ಬರುವ ಯುವತಿಯೋರ್ವಳು ಆಕಸ್ಮಿಕವಾಗಿ ಗಾಳಿಯಲ್ಲಿ ಜಂಪ್ ಮಾಡಲು ಆರಂಭಿಸುತ್ತಾಳೆ ಮತ್ತು ಅದೇ ಸ್ಪೀಡ್ ನಲ್ಲಿ ಮತ್ತೆ ಪರ್ಫೆಕ್ಟ್ ಆಗಿ ನೆಲದ ಮೇಲೆ ನಿಂತುಕೊಳ್ಳುತ್ತಾಳೆ. ಈ ಯುವತಿಯ ಹೆಸಲು ಖ್ಯಾತ ಜಿಮ್ನಾಸ್ಟ್ ಪಾರುಲ್ ಆರೋರಾ. ಈ ವಿಡಿಯೋವನ್ನು ಅಪರ್ಣಾ ಜೈನ ಹೆಸಲಿನ ಟ್ವಿಟ್ಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಇದನ್ನು ಓದಿ- Bride Entry Dance: ಮದುವೆ ಮಂಟಪಕ್ಕೆ ವಧು ನೀಡಿದ ಎಂಟ್ರಿ ನೋಡಿ ಭಾವುಕನಾದ ವರ video viral
ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋಗೆ (Viral Video) ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಮೇಲೆ ಜನರು ತಮ್ಮ ಪ್ರತಿಕ್ರಿಯೆಗಳನ್ನು ಕೂಡ ನೀಡುತ್ತಿದ್ದಾರೆ. ಈ ವಿಡಿಯೋ ಅನ್ನು 5000 ಕ್ಕೂ ಅಧಿಕ ಜನ 100 ಬಾರಿಗಿಂತ ಹೆಚ್ಚು ವಿಕ್ಷೀಸಿದ್ದಾರೆ. ಈ ವಿಡಿಯೋ 37 ಸಾವಿರ ಲೈಕ್ ಗಿಟ್ಟಿಸಿದ್ದರೆ, 6100 ರೀಟ್ವೀಟ್ ಗಳು ಬಂದಿವೆ. ಈ ವಿಡಿಯೋವನ್ನು ನೋಟಿ ನೀವೂ ಕೂಡ ನಿಬ್ಬೇರಗಾಗುವಿರಿ. ಸೀರೆಯುಟ್ಟು ಬ್ಯಾಕ್ ಫ್ಲಿಪ್ ಮಾಡುವುದನ್ನು ನೀವು ಹಿಂದೆಂದು ನೋಡಿರಲಿಕ್ಕಿಲ್ಲ.
ಇದನ್ನು ಓದಿ- Viral Video: ತನ್ನ ಮಾಲೀಕನನ್ನು Bike Ride ಮಾಡಿಸುತ್ತಿದೆ ಈ ಶ್ವಾನ, Swag ನೀವು ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.