ಪಾಕ್ ಕ್ರಿಕೆಟಿಗರ ಈ VIDEO ನೋಡಿ, ನಿಮ್ಮಿಂದ ಸಾಧ್ಯವಿಲ್ಲ ಬಿಡಿ ಗುರು ಎಂದ ನೆಟ್ಟಿಗರು

ಪ್ರತಿದಿನ ಪಾಕಿಸ್ತಾನ ಖಂಡಿತವಾಗಿಯೂ ಜಗತ್ತಿಗೆ ಒಮ್ಮೆ ನಗುವ ಅವಕಾಶವನ್ನು ನೀಡುತ್ತದೆ. ಈ ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡ ಜಗತ್ತಿಗೆ ಅಂತಹ ಅವಕಾಶವನ್ನು ನೀಡಿದೆ.

Last Updated : Feb 6, 2020, 07:46 PM IST
ಪಾಕ್ ಕ್ರಿಕೆಟಿಗರ ಈ VIDEO ನೋಡಿ, ನಿಮ್ಮಿಂದ ಸಾಧ್ಯವಿಲ್ಲ ಬಿಡಿ ಗುರು ಎಂದ ನೆಟ್ಟಿಗರು title=

ನವದೆಹಲಿ:ಪ್ರತಿದಿನ ಪಾಕಿಸ್ತಾನ ಖಂಡಿತವಾಗಿಯೂ ಜಗತ್ತಿಗೆ ಒಮ್ಮೆ ನಗುವ ಅವಕಾಶವನ್ನು ನೀಡುತ್ತದೆ. ಈ ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡ ಜಗತ್ತಿಗೆ ಅಂತಹ ಅವಕಾಶವನ್ನು ನೀಡಿದೆ. ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಪಾಕಿಸ್ತಾನ ಜನರ ನಗೆಪಾಟಲಿಗೆ ಈಡಾಗಿದೆ. ಈ ರೀತಿಯ ಕ್ರಿಕೆಟ್‌ ಕೇವಲ ಪಾಕ್ ತಂಡ ಮಾತ್ರ ಆಡಲು ಸಾಧ್ಯ ಎಂದು ಜನರು ಹೇಳುತ್ತಿದ್ದಾರೆ. ಪಾಕ್ ತಂಡದ ಈ ರೀತಿಯ ಆಟದ ಕಾರಣ ಜನರು ಹಲವಾರು ಮೀಮ್ ಗಳನ್ನು ಸೃಷ್ಟಿಸುತ್ತಿದ್ದಾರೆ.

ಫೆಬ್ರವರಿ 4 ರಂದು, ಅಂಡರ್ -19 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಪಾಕ್ ತಂಡ ಬ್ಯಾಟಿಂಗ್ ಮಾಡುವಾಗ ಒಂದು ಸಂದರ್ಭ ಬಂದೊದಗಿದ್ದು, ಇದನ್ನು ವೀಕ್ಷಿಸಿದ ಜನರು, ಅರೆ ಇದೇನು ಮಾಡುತ್ತಿರುವಿರಿ ಬ್ರದರ್ಸ್ ಎಂದು ಕೂಗಿದ್ದಾರೆ. ಅಷ್ಟೇ ಅಲ್ಲ ಇಂತಹ ಕ್ರಿಕೆಟ್ ನಿಮಗೆ ಯಾರು ಹೇಳಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಪಂದ್ಯದಲ್ಲಿ ಪಾಕ್ ತನ್ನ 118 ಗಳಿಸಿ ತನ್ನ ಆಟ ಮುಂದುವರೆಸಿತ್ತು. ಈ ವೇಳೆ ಪಾಕ್ ಆಟಗಾರರಾಗಿರುವ ಕಾಸಿಂ ಅಕ್ರಂ ಹಾಗೂ ರೌಹೇಲ್ ನಸೀರ್ ಇಬ್ಬರು ರನ್ ಗಳಿಸಲು ಒಂದೇ ವಿಕೆಟ್ ನತ್ತ ಧಾವಿಸಿದ್ದಾರೆ.

ಈ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತ್ತು. ಆದರೆ, ಪಾಕ್ ತಂಡದ ಈ ನಿರ್ಣಯ ತಪ್ಪು ಎಂದು ಸಾಬೀತಾಗಿದ್ದು, ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಹಲವು ಆಘಾತಗಳನ್ನು ನೀಡಿದ್ದಾರೆ. ಈ ಪಂದ್ಯದಲ್ಲಿ ಪಾಕ್ ತಂಡ 118 ರನ್ ಗಳನ್ನು ಗಳಿಸಿ ಆಡುತ್ತಿದ್ದ ಸಂದರ್ಭದಲ್ಲಿ ಭಾರತೀಯ ತಂಡದ ಬೌಲರ್ ರವಿ ಬಿಶ್ನೋಯಿ ಎಸೆದ ಚೆಂಡಿಗೆ ಪಾಕ್ ಆಟಗಾರ ಕಾಸೀಂ ಅಕ್ರಂ ಶಾಟ್ ಹೊಡೆದು ರನ್ ಗಾಗಿ ದೌಡಾಯಿಸಿದ್ದಾರೆ. ಈ ವೇಳೆ ಎರಡನೇ ಬದಿಯಲ್ಲಿದ್ದ ತಂಡದ ನಾಯಕ ರೋಹೈಲ್ ನಸೀಜ್ ರನ್ ತೆಗೆದುಕೊಳ್ಳುವ ಮೂಡ್ ನಲ್ಲಿ ಇರಲಿಲ್ಲ. ಆದರೆ, ಕಾಸೀಂ ದೃಷ್ಟಿ ಅವರ ಮೇಲೆ ಬಿದ್ದಿಲ್ಲ. ಈ ವೇಳೆ ಕಾಸೀಂ ಅವರು ತಮ್ಮತ್ತ ಧಾವಿಸುತ್ತಿರುವುದನ್ನು ಕಂಡ ರೋಹೈಲ್ ಕೂಡ ಓಟ ಗಳಿಸಲು ಧಾವಿಸಿದ್ದಾರೆ. ಆದರೆ, ಬಳಿಕ ಅಕ್ರಂ ಹಾಗೂ ಕಾಸಿಂ ಒಂದೇ ವಿಕೆಟ್ ನತ್ತ ಧಾವಿಸಲು ಪ್ರಾರಂಭಿಸಿದ್ದಾರೆ.

ಆದರೆ, ಅಷ್ಟೊತ್ತಿಗೆ ಚೆಂಡು ಅಥರ್ವ್ ಅಂಕೋಲೇಕರ್ ಕೈ ಸೇರಿತ್ತು ಮತ್ತು ಅವರು ಯಾವುದೇ ವಿಳಂಬ ಮಾಡದೆ ಚೆಂಡನ್ನು ವಿಕೆಟ್ ಕೀಪರ್ ಧ್ರುವ್ ಜುರೆಲ್ ಬಳಿ ಎಸೆದು ರನೌಟ್ ಮಾಡಿದ್ದಾರೆ. ಇದೀಗ ಪಾಕ್ ಆಟಗಾರರ ಈ ರೀತಿಯ ಕ್ರಿಕೆಟ್ ಜನರ ನಗೆಪಾಟಲಿಗೆ ಕಾರಣವಾಗಿದ್ದು, ವಿಶಿಷ್ಟ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಲ ಜನರು ನೀವು ಇದೆ ರೀತಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದರೆ ನೀವು ಬಹು ಬೇಗ ಕ್ರಿಕೆಟ್ ಆಡಲು ಕಲಿಯಬಹುದು ಎಂದು ವ್ಯಂಗ್ಯವಾಡುತ್ತಿದ್ದಾರೆ.

Trending News