ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಸೆಹ್ವಾಗ್‌ ಹೇಳಿದ್ದೇನು ಗೊತ್ತಾ?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೊಹ್ಲಿ 24 ಎಸೆತಗಳಲ್ಲಿ 120 ಸ್ಟ್ರೈಕ್‌ ರೇಟ್‌ನೊಂದಿಗೆ 29 ರನ್‌ಗಳನ್ನು ಗಳಿಸಿದ್ದರು. ಅಂತಿಮವಾಗಿ ಆರ್‌ಸಿಬಿ 152 ರನ್‌ಗಳನ್ನು ಕಲೆ ಹಾಕಿತ್ತು.   

Last Updated : Nov 5, 2020, 04:11 PM IST
  • ಐಪಿಎಲ್ ನಲ್ಲಿ‌ ಕೊಹ್ಲಿ ಸ್ಟ್ರೈಕ್‌ ರೆಟ್‌ ಕಡಿಮೆ
  • ನಾಳೆ ಆರ್‌ಸಿಬಿ-ಎಸ್‌ಆರ್‌ಎಚ್‌ಗೆ ಎಲಿಮಿನೇಟರ್‌ ಪಂದ್ಯ
  • ವಿರಾಟ್‌ ಕೊಹ್ಲಿಗೆ ಬ್ಯಾಟಿಂಗ್‌ ಸಲಹೆ ನೀಡಿದ ವಿರೇಂದ್ರ ಸೆಹ್ವಾಗ್‌
ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಸೆಹ್ವಾಗ್‌ ಹೇಳಿದ್ದೇನು ಗೊತ್ತಾ?

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಇನಿಂಗ್ಸ್‌ನ ಆರಂಭದಲ್ಲಿಯೇ ವೇಗವನ್ನು ಹೆಚ್ಚಿಸಬೇಕೆಂದು ಮಾಜಿ ಕ್ರಿಕೆಟರ್‌ ವೀರೇಂದ್ರ ಸೆಹ್ವಾಗ್ (Virender Sehwag) ಅಭಿಪ್ರಾಯಪಟ್ಟಿದ್ದಾರೆ.

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್ (IPL) ಟೂರ್ನಿಯ ಲೀಗ್‌ ಹಂತದ ಮುಕ್ತಾಯಕ್ಕೆ ವಿರಾಟ್‌ ಕೊಹ್ಲಿ ವೈಯಕ್ತಿಕ ಅತೀ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 14 ಪಂದ್ಯಗಳಿಂದ‌ 460 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಅವರ ಸ್ಟ್ರೈಕ್‌ ರೇಟ್‌ 122 ಇರುವುದು ಪ್ರಮುಖ ಸಂಗತಿಯಾಗಿದೆ.

IPL 2020: ಆರ್‌ಸಿಬಿಗೆ ಈ ಬಾರಿಯೂ ಕಪ್ ಇಲ್ಲ ಎಂದ ಈ ಇಂಗ್ಲೆಂಡ್ ಆಟಗಾರ..!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೊಹ್ಲಿ 24 ಎಸೆತಗಳಲ್ಲಿ 120 ಸ್ಟ್ರೈಕ್‌ ರೇಟ್‌ನೊಂದಿಗೆ 29 ರನ್‌ಗಳನ್ನು ಗಳಿಸಿದ್ದರು. ಅಂತಿಮವಾಗಿ ಆರ್‌ಸಿಬಿ 152 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಗುರಿ ಮುಟ್ಟಿತ್ತು. ಸೋಲಿನ ಹೊರತಾಗಿಯೂ ಆರ್‌ಸಿಬಿ (RCB) ನೆಟ್‌ ರನ್‌ರೇಟ್‌ನಿಂದ ಪ್ಲೇಆಫ್ಸ್‌ ನಾಲ್ಕನೇ ಸ್ಥಾನ ಪಡೆದಿದೆ.

ಪ್ರಸಕ್ತ ಆವೃತ್ತಿಯ ಐಪಿಎಲ್ ನಲ್ಲಿ‌ ಕೊಹ್ಲಿ ಸ್ಟ್ರೈಕ್‌ ರೆಟ್‌ ಕಡಿಮೆ ಇರುವುದರಿಂದ ಟೀಮ್‌ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸಹ್ವಾಗ್‌ ಟೀಕಿಸಿದ್ದಾರೆ. ಕ್ರಿಕ್‌ಬಝ್‌ನೊಂದಿಗೆ ಮಾತನಾಡಿದ ಸೆಹ್ವಾಗ್‌ ಇನಿಂಗ್ಸ್‌ ಆರಂಭದಲ್ಲಿಯೇ ಅವರು ಆಟದ ತೀವ್ರತೆಯನ್ನು ಹೆಚ್ಚಿಸಬೇಕು. ಒಂದು ವೇಳೆ ಅವರು 20 ರಿಂದ 25 ಎಸೆತಗಳನ್ನು ಆಡಿದ ಬಳಿಕ ಔಟಾದರೆ, ತಂಡ ತೊಂದರೆಗೆ ಸಿಲುಕುತ್ತದೆ ಎಂದಿದ್ದಾರೆ.

IPL 2020: ವಿರಾಟ್ ಕೊಹ್ಲಿಗೆ Flying Kiss ಕೊಟ್ಟ ಅನುಷ್ಕಾ ಶರ್ಮಾ, ಫೋಟೋಸ್ ವೈರಲ್

"ಬ್ಯಾಟಿಂಗ್‌ಗೆ ಇಳಿಯುತ್ತಿದ್ದಂತೆ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಬೇಕು. 20 ರಿಂದ 25 ಎಸೆತಗಳನ್ನು ಆಡಿದ ಬಳಿಕ ವೇಗವನ್ನು ಹೆಚ್ಚಿಸುತ್ತಿದ್ದಾಗ ಔಟ್‌ ಆದರೆ, ತಂಡ ತೀವ್ರ ಒತ್ತಡಕ್ಕೆ ಸಿಲುಕುತ್ತದೆ," ಎಂದು ಸೆಹ್ವಾಗ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ‌ ಕೊಹ್ಲಿ ಔಟ್‌ ಆಗದೇ ಇದ್ದಿದ್ದರೆ 40 ಎಸೆತಗಳಲ್ಲಿ 70 ರಿಂದ 80 ರನ್‌ಗಳನ್ನು ಗಳಿಸಬಹುದಾಗಿತ್ತು. ಆದರೆ ಇದು ಸಂಭವಿಸಲಿಲ್ಲ. ಆದ್ದರಿಂದ ಕೊಹ್ಲಿ ಕ್ರೀಸ್‌ಗೆ ಬಂದಾಗಲೇ ವೇಗವಾಗಿ ಬ್ಯಾಟಿಂಗ್‌ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ದೆಹಲಿ ಕ್ಯಾಪಿಟಲ್ಸ್‌ ವಿರುದ್ಧ ಇದು ಸಂಭವಿಸಿದೆ. ಅವರು ಹೊರಬರದಿದ್ದರೆ, ಅವರು 40 ಎಸೆತಗಳಲ್ಲಿ 70 ಅಥವಾ 80 ರನ್ ಗಳಿಸಬಹುದಿತ್ತು, ಇದು ಆರ್‌ಸಿಬಿ ಗೌರವಾನ್ವಿತ ಮೊತ್ತವನ್ನು ಗಳಿಸಲು ಕಾರಣವಾಗುತ್ತಿತ್ತು. ಅವರು ಬೇಗ ವಿಕೆಟ್‌ ಒಪ್ಪಿಸಿದಾಗ ಸ್ಟ್ರೈಕ್ ರೇಟ್‌ ಕೂಡ ಉತ್ತಮವಾಗಿರುವುದಿಲ್ಲ. ಸ್ಟ್ರೈಕ್ ರೇಟ್‌ ಕೇವಲ 110 ರಿಂದ 120 ರಷ್ಟಿದ್ದರೆ ತಂಡವು ತೊಂದರೆಯಲ್ಲಿದೆ ಎಂದು ತೋರುತ್ತದೆ ಎಂದು ಸೆಹ್ವಾಗ್ ವಿವರಿಸಿದರು.
 

More Stories

Trending News