Poorest cricketer of Team India : ಆಟಗಾರರ ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಹೆಚ್ಚು ಮಾತನಾಡಲಾಗುತ್ತದೆ ಆದರೆ ಅವರ ಗಳಿಕೆಯ ಬಗ್ಗೆ ಕೆಲವು ಮಂದಿಕೆ ಕಡಿಮೆ ತಿಳಿದಿರುತ್ತದೆ. ಆಟಗಾರರು ತಮ್ಮ ಪ್ರದರ್ಶನದ ಆಧಾರದ ಮೇಲೆ ಹಣವನ್ನು ಗಳಿಸುತ್ತಾರೆ. ಹಾಗಾಗಿ ಇಂದು ನಾವು ನಿಮಗೆ ಕಡಿಮೆ ನಿವ್ವಳ ಮೌಲ್ಯದ ಆಸ್ತಿ ಹೊಂದಿರುವ ಟೀಮ್ ಇಂಡಿಯಾ ಆಟಗಾರನ ಬಗ್ಗೆ ಹೇಳುತ್ತೇವೆ.. ಬನ್ನಿ ಯಾರು ಆ ಆಟಗಾರ ಅಂತ ನೋಡೋಣ..
2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ. ಸದ್ಯ ಟೀಂ ಇಂಡಿಯಾ 8 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಟೂರ್ನಿಯಲ್ಲಿ ಭಾರತ ತಂಡ ಅಜೇಯ ಸಾಧನೆ ಮಾಡಿದ್ದು, ಸೆಮಿಫೈನಲ್ ಪ್ರವೇಶಿಸಿದ್ದಾರೆ. ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ:ICC WorldCup 2023: ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ..!
ಈ ಫೈನಲ್ ಫೋರ್‌ಗೆ ಟೀಂ ಇಂಡಿಯಾವನ್ನು ತೆಗೆದುಕೊಂಡು ಹೋಗಿರುವ ಕೀರ್ತಿ ತಂಡದ ಭಾಗವಾಗಿರುವ 15 ಆಟಗಾರರಿಗೆ ಸಲ್ಲುತ್ತದೆ. ಈ ಆಟಗಾರರ ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಮಾತನಾಡಲಾಗುತ್ತದೆ ಆದರೆ ಅವರ ಗಳಿಕೆಯ ಬಗ್ಗೆ ನಿಮಗೆ ತಿಳಿದಿದೆಯೇ? ಅಲ್ಲದೆ ಟೀಂ ಇಂಡಿಯಾದಲ್ಲಿರುವ ಅತ್ಯಂತ ಬಡ ಆಟಗಾರ ಯಾರು ಅಂತ ನಿಮ್ಗೆ ಗೊತ್ತಾ.. ಬನ್ನಿ ತಿಳಿಯೋಣ..
ಹೌದು.. ಆ ಆಟಗಾರ ಬೇರೆ ಯಾರೂ ಅಲ್ಲ ಶಾರ್ದೂಲ್ ಠಾಕೂರ್. ಶಾರ್ದೂಲ್ ಆಲ್ ರೌಂಡರ್ ಆಗಿದ್ದು, ಬೌಲಿಂಗ್ ಹಾಗೂ ವೇಗದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಈ ವಿಶ್ವಕಪ್‌ನಲ್ಲಿ ಶಾರ್ದೂಲ್‌ಗೆ ಕೇವಲ 3 ಪಂದ್ಯಗಳನ್ನು ಆಡುವ ಅವಕಾಶ ದೊರೆತಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಆಟವಾಡಿದ್ದಾರೆ. ಅದ್ರೆ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಇದನ್ನೂ ಓದಿ:IPL 2024 : CSK ಫ್ಯಾನ್ಸ್ ಗೆ ಬಿಗ್ ಶಾಕ್.. ಹರಾಜಿಗೂ ಮುನ್ನವೇ ಈ 3 ಆಟಗಾರರು ತಂಡದಿಂದ ಔಟ್!?
ಶಾರ್ದೂಲ್ ಗಳಿಕೆಯ ಬಗ್ಗೆ ಹೇಳುವುದಾದರೆ, ಬಿಸಿಸಿಐನಿಂದ ಪ್ರತಿ ವರ್ಷ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಶಾರ್ದೂಲ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಫ್ರಾಂಚೈಸಿ ಅವರನ್ನು 10.75 ಕೋಟಿ ರೂ.ಗೆ ಖರೀದಿಸಿದೆ. ಕ್ರಿಕೆಟ್ ಅಲ್ಲದೆ ಶಾರ್ದೂಲ್ ವ್ಯಾಪಾರವನ್ನೂ ಮಾಡುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಟೀಮ್ ಇಂಡಿಯಾದ ಈ ಆಲ್ ರೌಂಡರ್ ನಿವ್ವಳ ಮೌಲ್ಯ 25 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಶಾರ್ದೂಲ್ ಅವರ ನಿವ್ವಳ ಮೌಲ್ಯವು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗಿಂತ 40 ಪಟ್ಟು ಕಡಿಮೆಯಾಗಿದೆ. ಕೊಹ್ಲಿ ನಿವ್ವಳ ಮೌಲ್ಯ ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಅವರು ಟೀಮ್ ಇಂಡಿಯಾದ ಅತ್ಯಂತ ಶ್ರೀಮಂತ ಆಟಗಾರ. ಆದರೆ, ಇಬ್ಬರು ಆಟಗಾರರ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕೊಹ್ಲಿ ಬಹುಕಾಲದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಕ್ಯಾಪ್ಟನ್ ಆಗಿದ್ದರು ಮತ್ತು ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ದೂಲ್ ಅವರ ವೃತ್ತಿಜೀವನವು ದೀರ್ಘವಾಗಿಲ್ಲ. ಶಾರ್ದೂಲ್‌ಗೆ ಪ್ರತಿ ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಬಲು ವಿಶೇಷ 2023ರ ವಿಶ್ವಕಪ್ : 12 ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಈ ಪವಾಡ !
ಶಾರ್ದೂಲ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಟೆಸ್ಟ್‌ನಲ್ಲಿ 30, ಏಕದಿನದಲ್ಲಿ 65 ಮತ್ತು ಟಿ20ಯಲ್ಲಿ 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಸುಮಾರು 21 ODIಗಳಲ್ಲಿ 18 ಮತ್ತು T20 ಗಳಲ್ಲಿ 23 ಸರಾಸರಿ ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.