SRH vs PBK: ಪ್ಲೇ ಆಫ್‌ನಿಂದ ಹೊರಬಿದ್ದರೂ ಜಿದ್ದಾಜಿದ್ದಿ ನಡೆಸಲು ಹೈದರಾಬಾದ್‌-ಪಂಜಾಬ್‌ ತಯಾರಿ!

 ಈ ಬಾರಿ ನಿಕೋಲಸ್‌ ಪೂರನ್‌ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಇದುವರೆಗೆ ಹದಿಮೂರು ಪಂದ್ಯಗಳನ್ನಾಡಿದೆ. ಆ ಪೈಕಿ, ಆರರಲ್ಲಿ ಗೆಲುವು ಸಾಧಿಸಿದ್ದು, ಏಳರಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದೆ.   

Written by - Bhavishya Shetty | Last Updated : May 22, 2022, 09:15 AM IST
  • ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಪಂಜಾಬ್‌ ಕಿಂಗ್ಸ್‌ ಫೈಟ್‌
  • ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ
  • ಪ್ಲೇ ಆಫ್‌ನಿಂದ ಹೊರಬಿದ್ದರೂ ಉಭಯ ತಂಡಗಳ ಪೈಪೋಟಿ
SRH vs PBK: ಪ್ಲೇ ಆಫ್‌ನಿಂದ ಹೊರಬಿದ್ದರೂ ಜಿದ್ದಾಜಿದ್ದಿ ನಡೆಸಲು ಹೈದರಾಬಾದ್‌-ಪಂಜಾಬ್‌ ತಯಾರಿ!  title=
Indian Premier League

ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 70ನೇ ಪಂದ್ಯವು ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಪಂಜಾಬ್‌ ಕಿಂಗ್ಸ್‌ ನಡುವೆ ನಡೆಯಲಿದೆ. ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಸೋತರೂ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಉಭಯ ತಂಡಗಳು ಪ್ಲೇ ಆಫ್‌ ಪ್ರವೇಶದ ಅವಕಾಶವನ್ನು ಕಳೆದುಕೊಂಡಿದೆ. ಆದರೆ ಕೊನೆಯ ಪಂದ್ಯದಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡಲು ಕಾತುರವಾಗಿದೆ ಎನ್ನಬಹುದು. 

ಇದನ್ನು ಓದಿ: ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿಯಾಗಿದೆ: ಎಚ್‌ಡಿಕೆ

ಈ ಬಾರಿ ನಿಕೋಲಸ್‌ ಪೂರನ್‌ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಇದುವರೆಗೆ ಹದಿಮೂರು ಪಂದ್ಯಗಳನ್ನಾಡಿದೆ. ಆ ಪೈಕಿ, ಆರರಲ್ಲಿ ಗೆಲುವು ಸಾಧಿಸಿದ್ದು, ಏಳರಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದೆ. ಇನ್ನು ಟೂರ್ನಿಯಲ್ಲಿ ಸಮಾಧಾನಕರ ಪ್ರದರ್ಶನ ನೀಡಿದ್ದ ಹೈದರಾಬಾದ್‌ ತಂಡವು ಪ್ಲೇ ಆಫ್‌ ಪ್ರವೇಶದ ಅವಕಾಶವನ್ನು ಕಳೆದುಕೊಂಡಿದೆ. 

ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಯಾಂಕ್‌ ಅಗರ್ವಾಲ್‌ ನಡೆಸುತ್ತಿದ್ದು, ಈ ತಂಡ ಸಹ ಪ್ಲೇ ಆಫ್‌ನಿಂದ ಹೊರಬಿದ್ದಿದೆ. ಇಲ್ಲಿವರೆಗೆ ಆಡಿರುವ ಹದಿಮೂರು ಪಂದ್ಯಗಳ ಪೈಕಿ ಆರರಲ್ಲಿ ಗೆಲುವು ಸಾಧಿಸಿ, ಏಳರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಉಭಯ ತಂಡಗಳು ಸಮಾನ ಅಂಕ ಪಡೆದಿದ್ದರೂ ಸಹ ರನ್‌ರೇಟ್‌ ವ್ಯತ್ಯಾಸದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಒಂದು ಸ್ಥಾನ ಮೇಲಿದೆ. 

ಇದನ್ನು ಓದಿ: Vegetable Price: ಗ್ರಾಹಕರೇ ಗಮನಿಸಿ... ಇಂದಿನ ತರಕಾರಿ ಬೆಲೆ ಹೇಗಿದೆ ಗೊತ್ತಾ?

ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ:

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಮ್ ಗಾರ್ಗ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ಕ್ಯಾ&ವಿ.ಕೀ), ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ಕ್ಯಾ), ಜಿತೇಶ್ ಶರ್ಮಾ (ವಿ.ಕೀ), ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News