ನಿಮಗೆ ಗೊತ್ತಿರಲಿ..! ಈ ಐದು ಕ್ರಿಕೆಟ್‌ ದಾಖಲೆಗಳನ್ನು ಮುರಿಯುವುದೆಂದರೆ ಕನಸಿನ ಮಾತು...!

ಕ್ರೀಡೆಯಲ್ಲಿ ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎನ್ನುವ ಮಾತನ್ನು ನಾವು ಆಗಾಗ ಕೇಳಿರುತ್ತೇವೆ ಆದರೆ, ಕೆಲವು ದಾಖಲೆಗಳು ಹೇಗಿರುತ್ತವೆ ಎಂದರೆ ಅವುಗಳು ಹಲವು ಪೀಳಿಗೆಗಳವರೆಗೆ ಮುರಿಯದ ದಾಖಲೆಗಳಾಗಿರುತ್ತವೆ.ಹಾಗಾಗಿ ಈಗ ಮುರಿಯಲು ಬಹುತೇಕ ಅಸಾಧ್ಯವಾಗಿರುವ ಐದು ದಾಖಲೆಗಳನ್ನು ನಾವು ತಿಳಿಯೋಣ ಬನ್ನಿ..

Written by - Zee Kannada News Desk | Last Updated : Oct 1, 2022, 04:50 PM IST
  • ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಪಟ್ಟ ಸರ್ ಡೊನಾಲ್ಡ್ ಬ್ರಾಡ್‌ಮನ್ ಅವರು 52 ಟೆಸ್ಟ್ ಪಂದ್ಯಗಳಲ್ಲಿ ಆಡಿದರು,
  • ಇದರಲ್ಲಿ ಅವರು 99.94 ಸರಾಸರಿಯಲ್ಲಿ 6996 ರನ್‌ಗಳನ್ನು ಗಳಿಸಿದ್ದಾರೆ.ಈ ದಾಖಲೆ ನಿಜಕ್ಕೂ ಮುರಿಯಲು ಅಸಾಧ್ಯವಾಗಿದೆ.
 ನಿಮಗೆ ಗೊತ್ತಿರಲಿ..! ಈ ಐದು ಕ್ರಿಕೆಟ್‌ ದಾಖಲೆಗಳನ್ನು ಮುರಿಯುವುದೆಂದರೆ ಕನಸಿನ ಮಾತು...! title=

ನವದೆಹಲಿ: ಕ್ರೀಡೆಯಲ್ಲಿ ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎನ್ನುವ ಮಾತನ್ನು ನಾವು ಆಗಾಗ ಕೇಳಿರುತ್ತೇವೆ ಆದರೆ, ಕೆಲವು ದಾಖಲೆಗಳು ಹೇಗಿರುತ್ತವೆ ಎಂದರೆ ಅವುಗಳು ಹಲವು ಪೀಳಿಗೆಗಳವರೆಗೆ ಮುರಿಯದ ದಾಖಲೆಗಳಾಗಿರುತ್ತವೆ.ಹಾಗಾಗಿ ಈಗ ಮುರಿಯಲು ಬಹುತೇಕ ಅಸಾಧ್ಯವಾಗಿರುವ ಐದು ದಾಖಲೆಗಳನ್ನು ನಾವು ತಿಳಿಯೋಣ ಬನ್ನಿ..

1.ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳು

ಸಚಿನ್ ತೆಂಡೂಲ್ಕರ್ ಅವರು ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಆಟಗಾರ, ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟು ನೂರು ಶತಕಗಳನ್ನು ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ.ಅದರಲ್ಲಿ ಟೆಸ್ಟ್ ಪಂದ್ಯಗಳಲ್ಲಿ 51 ಶತಕಗಳನ್ನು ಸಿಡಿಸಿದ್ದರೆ ಏಕದಿನ ಪಂದ್ಯಗಳಲ್ಲಿ 49 ಶತಕಗಳನ್ನು ಸಿಡಿಸಿದ್ದಾರೆ.ಅಷ್ಟೇ ಅಲ್ಲದೆ ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಸೇರಿ ಒಟ್ಟಾಗಿ 34357 ರನ್ ಗಳಿಸುವ ಮೂಲಕ ಅತ್ಯಧಿಕ ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಇನ್ನೊಂದೆಡೆಗೆ ವಿರಾಟ್ ಕೊಹ್ಲಿ ಸದ್ಯ ಇಲ್ಲಿಯವರೆಗೆ 23358 ರನ್ ಗಳಿಸಿದ್ದಾರೆ. ಹಾಗಾಗಿ ಈ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಬಹುದು.

ಇದನ್ನೂ ಓದಿ-ವೊಡಾಫೋನ್-ಐಡಿಯಾ ಬಳಕೆದಾರರಿಗೆ ಎದುರಾಗಿದೆ ಸಮಸ್ಯೆ, ಫೋನ್‌ನಿಂದ ಕಣ್ಮರೆಯಾಗುವುದು ನೆಟ್‌ವರ್ಕ್

2. ಟೆಸ್ಟ್ ಕ್ರಿಕೆಟ್‌ನಲ್ಲಿ ಸರ್ ಡಾನ್ ಬ್ರಾಡ್‌ಮನ್ ಅವರ ಸರಾಸರಿ 99.94

ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಪಟ್ಟ ಸರ್ ಡೊನಾಲ್ಡ್ ಬ್ರಾಡ್‌ಮನ್ ಅವರು 52 ಟೆಸ್ಟ್ ಪಂದ್ಯಗಳಲ್ಲಿ ಆಡಿದರು, ಇದರಲ್ಲಿ ಅವರು 99.94 ಸರಾಸರಿಯಲ್ಲಿ 6996 ರನ್‌ಗಳನ್ನು ಗಳಿಸಿದ್ದಾರೆ.ಈ ದಾಖಲೆ ನಿಜಕ್ಕೂ ಮುರಿಯಲು ಅಸಾಧ್ಯವಾಗಿದೆ.

3. ಬ್ರಿಯಾನ್ ಲಾರಾ ಅವರ ಅತ್ಯಧಿಕ ಟೆಸ್ಟ್ ಇನ್ನಿಂಗ್ಸ್ ಸ್ಕೋರ್ 400

ಬ್ರಿಯಾನ್ ಲಾರಾ ಅವರ ಮ್ಯಾರಥಾನ್ ಇನ್ನಿಂಗ್ಸ್ 778 ನಿಮಿಷಗಳು, 582 ಎಸೆತಗಳು, ಇಂಗ್ಲೆಂಡ್ ವಿರುದ್ಧ 2004 ರಲ್ಲಿ ಅವರು ದಾಖಲೆಯ 400 ರನ್ ಗಳಿಸಿದರು, ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದೇ ಇನಿಂಗ್ಸ್ ನಲ್ಲಿ ಗಳಿಸಿದ ಅತ್ಯಧಿಕ ರನ್ ಆಗಿದೆ.

4. ಮುತ್ತಯ್ಯ ಮುರಳೀಧರನ್ ಅವರ 1300 ಅಂತಾರಾಷ್ಟ್ರೀಯ ವಿಕೆಟ್‌ಗಳು

ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರು ಟೆಸ್ಟ್ ನಲ್ಲಿ 800, ಏಕದಿನ ಪಂದ್ಯಗಳಲ್ಲಿ 534 ಹಾಗೂ ಟಿ20 ಯಲ್ಲಿ 13 ವಿಕೆಟ್ ಗಳ ಮೂಲಕ ಒಟ್ಟು ಅವರು 1347 ವಿಕೆಟ್ ಗಳನ್ನು ಕಬಳಿಸಿದ್ದಾರೆ.ಈ ಕಾಲದಲ್ಲಿ ಬೌಲರ್‌ಗಳು ನಿಯಮಿತವಾಗಿ ವಿಶ್ರಾಂತಿ ಪಡೆಯುತ್ತಾರೆ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಿಚ್‌ಗಳು ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿರುವುದರಿಂದ ಈ ದಾಖಲೆಯನ್ನು ಮುರಿಯಲು ಅಸಾಧ್ಯವಾಗಿದೆ.

5. ರೋಹಿತ್ ಶರ್ಮಾ ಅವರ ಗರಿಷ್ಠ ODI ಸ್ಕೋರ್ 264 ರನ್

ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್‌ನಿಂದ ಅತ್ಯಧಿಕ ಸ್ಕೋರ್ ದಾಖಲಿಸಿದ್ದಾರೆ: 2014 ರಲ್ಲಿ ಶ್ರೀಲಂಕಾ ವಿರುದ್ಧ 173 ಎಸೆತಗಳಲ್ಲಿ 264 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಮೂರು ಏಕದಿನ ದ್ವಿಶತಕಗಳನ್ನು ಸಿಡಿಸಿರುವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.

ಇದನ್ನೂ ಓದಿ-ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಿಂತ ಅಗ್ಗದ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವ ಶಾಪಿಂಗ್ ಸೈಟ್ ಗಳಿವು .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News