ಈ ಸ್ಟಾರ್ ಬ್ಯಾಟ್ಸ್ ಮ್ಯಾನ್ ಗೆ ಕಾಡುತ್ತಿದೆ ಈ ಕಾಯಿಲೆ ! ವಿಶ್ವಕಪ್ ಮಧ್ಯೆಯೇ ಖುಲಾಸೆಯಾದ ಕಟು ಸತ್ಯ

World cup 2023 :ಟೂರ್ನಿಯಲ್ಲಿ ಆಡುತ್ತಿದ್ದ  ಸ್ಟಾರ್ ಬ್ಯಾಟ್ಸ್ ಮನ್ ನನ್ನು ಈ ಕಾಯಿಲೆ ಕಾಡುತ್ತಿದೆ.  ತಾನು ಈ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಈ ಬ್ಯಾಟ್ಸ್‌ಮನ್ ಬಹಿರಂಗಪಡಿಸಿದ್ದಾರೆ.    

Written by - Ranjitha R K | Last Updated : Nov 7, 2023, 01:38 PM IST
  • ವಿಶ್ವಕಪ್ 2023 ಈಗ ಅಂತಿಮ ಹಂತದತ್ತ ಸಾಗುತ್ತಿದೆ
  • ಸ್ಟಾರ್ ಬ್ಯಾಟ್ಸ್ ಮನ್ ನನ್ನು ಕಾಡುತ್ತಿದೆ ಈ ಕಾಯಿಲೆ
  • ತಂಡದಿಂದ ಹೊರಗುಳಿಯಲಿದ್ದಾರೆಯೇ ಸ್ಮಿತ್
ಈ ಸ್ಟಾರ್ ಬ್ಯಾಟ್ಸ್ ಮ್ಯಾನ್ ಗೆ ಕಾಡುತ್ತಿದೆ ಈ ಕಾಯಿಲೆ ! ವಿಶ್ವಕಪ್ ಮಧ್ಯೆಯೇ ಖುಲಾಸೆಯಾದ ಕಟು ಸತ್ಯ   title=

World cup 2023 : ವಿಶ್ವಕಪ್ 2023 ಈಗ ಅಂತಿಮ ಹಂತದತ್ತ ಸಾಗುತ್ತಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು  ಟಾಪ್ 4ರಲ್ಲಿ ಸ್ಥಾನ ಪಡೆದುಕೊಂಡಿದೆ. ಟಾಪ್ 4 ರಲ್ಲಿ ಸ್ಥಾನ ಪಡೆಯಲಿರುವ ಉಳಿದ ಎರಡು ಪಂದ್ಯಗಳು ಯಾವುವು ಎನ್ನುವುದು ಸದ್ಯದಲ್ಲಿಯೇ ತಿಳಿಯಲಿದೆ. ಇದೇ ವೇಳೆ ಟೂರ್ನಿಯಲ್ಲಿ ಆಡುತ್ತಿದ್ದ  ಸ್ಟಾರ್ ಬ್ಯಾಟ್ಸ್ ಮನ್ ನನ್ನು ಈ ಕಾಯಿಲೆ ಕಾಡುತ್ತಿದೆ.  ತಾನು ಈ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಈ ಬ್ಯಾಟ್ಸ್‌ಮನ್ ಬಹಿರಂಗಪಡಿಸಿದ್ದಾರೆ.  ಏಕಾಂಗಿಯಾಗಿ ತಂಡಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದುಕೊಂಡಿರುವ ಆಟಗಾರ ಇದೀಗ ಈ ಕಾಯಿಲೆಯಿಂದ ಬಳಲುತ್ತಿರುವುದು  ತಂಡಕ್ಕೆ ಆಘಾತಕಾರಿಯಾಗಿದೆ. 

ದಿಗ್ಗಜ ಬ್ಯಾಟ್ಸ್‌ಮನ್ ನನ್ನು ಕಾಡುತ್ತಿದೆ ಕಾಯಿಲೆ :
ಮಹತ್ವದ ಪಂದ್ಯಗಳಿಗೆ ಮುನ್ನವೇ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಈ ವಿಷಯವನ್ನು ಸ್ವತಃ ಈ ಸ್ಟಾರ್ ಆಟಗಾರ ಬಹಿರಂಗಪಡಿಸಿದ್ದಾರೆ. ಅವರು ಬಳಲುತ್ತಿರುವ ರೋಗದ ಹೆಸರು ವರ್ಟಿಗೋ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಈ ವಿಷಯವನ್ನು ಬಹಿರಂಗಪಡಿಸಿದ ಸ್ಮಿತ್, 'ಕಳೆದ ಒಂದೆರಡು ದಿನಗಳಿಂದ ತಲೆ ಸುತ್ತುವಿಕೆಯಂತಹ ಸಮಸ್ಯೆ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಈ ಸಮಸ್ಯೆಯಿಂದ ಶೀಘ್ರ ಗುಣಮುಖರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : IND vs AUS: ರೋಹಿತ್, ಕೊಹ್ಲಿ, ಗಿಲ್ ಔಟ್? ಆಸ್ಟ್ರೇಲಿಯಾ ಟಿ20 ಟೂರ್ನಿಗೆ ಭಾರತ ತಂಡ ಹೀಗಿರಲಿದೆ!

ತಂಡದಿಂದ ಹೊರಗುಳಿಯಲಿದ್ದಾರೆಯೇ ಸ್ಮಿತ್ : 
ಆಸ್ಟ್ರೇಲಿಯಾದ ಮುಂದಿನ ಪಂದ್ಯ ಅಫ್ಘಾನಿಸ್ತಾನದೊಂದಿಗೆ ನಡೆಯಲಿದೆ. ಆದರೆ, ಈ ಪಂದ್ಯದಲ್ಲಿ ಆಡುವ ಬಗ್ಗೆ ಸ್ಮಿತ್ ಇನ್ನೂ ಏನನ್ನೂ ಹೇಳಿಲ್ಲ. ಸ್ಮಿತ್ ಮುಂಬರುವ ಪಂದ್ಯಗಳಿಂದ ಹೊರಗುಳಿದರೆ ಅದು ತಂಡಕ್ಕೆ ದೊಡ್ಡ ಹೊಡೆತವಾಗಿರಲಿದೆ. ಗಾಯದ ಸಮಸ್ಯೆಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಈಗಾಗಲೇ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದು, ಮಿಚೆಲ್ ಮಾರ್ಷ್ ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಅವರು ಮತ್ತೆ ವಿಶ್ವಕಪ್ ಗೆ ಮರಳುವ ಬಗ್ಗೆ ಯಾವುದೇ ಅಪ್‌ಡೇಟ್ ಬಂದಿಲ್ಲ.

ವರ್ಟಿಗೋ ಎಂದರೇನು? : 
ವರ್ಟಿಗೋ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ವ್ಯಕ್ತಿಗೆ ಇದ್ದಕ್ಕಿದ್ದಂತೆ  ತಲೆ ಸುತ್ತಲು ಆರಂಭವಾಗುತ್ತದೆ. ಅನೇಕ ಬಾರಿ ಹಠಾತ್ ಬೀಳುವ ಪರಿಸ್ಥಿತಿಯೂ ಉಂಟಾಗುತ್ತದೆ. ವರ್ಟಿಗೋದಿಂದ ಬಳಲುತ್ತಿರುವ ಜನರು ಹೆಚ್ಚಾಗಿ ಮನೆಯಲ್ಲಿಯೇ ಇರಲು ಬಯಸುತ್ತಾರೆ.

ಇದನ್ನೂ ಓದಿ : ಸೆಮೀಸ್ ನಲ್ಲಿ ಭಾರತದೊಡನೆ ಸೆಣೆಸಾಡಲು ಈ ತಂಡಕ್ಕೆ ಭಯವಂತೆ ! ಇಂಡಿಯಾದೆದುರು ಗೆಲುವು ಸುಲಭವಲ್ಲ ಎಂದ ದಿಗ್ಗಜ ಬ್ಯಾಟ್ಸ್‌ಮನ್ !

ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ : 
ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ 7 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡ ಸೆಮಿಫೈನಲ್ ಪ್ರವೇಶಿಸಲು ಕೇವಲ ಒಂದು ಹೆಜ್ಜೆ ಬಾಕಿ ಇದೆ. ಮುಂದಿನ ಪಂದ್ಯದಲ್ಲಿ ಗೆಲ್ಲುವುದರೊಂದಿಗೆ ಆಸ್ಟ್ರೇಲಿಯಾ ಟಾಪ್ 4ಕ್ಕೆ ಅರ್ಹತೆ ಪಡೆದ ಮೂರನೇ ತಂಡ ಎನಿಸಿಕೊಳ್ಳಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News