ICC Wide Ball Rule : ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ವಿಶ್ವಕಪ್ 2023ರ 17ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ನಂಬರ್-1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ವಿರಾಟ್ ಕೊಹ್ಲಿ ಅವರ ಅಜೇಯ ಶತಕದ (103) ನೆರವಿನಿಂದ 41.3 ಓವರ್‌ಗಳಲ್ಲಿ 261 ರನ್ ಗಳಿಸಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಅವರ ಸಿಕ್ಸರ್‌ಗಳು ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾಯಿತು. ವಿರಾಟ್ ಕೊಹ್ಲಿ ಶತಕದೊಂದಿಗೆ, ಆನ್-ಫೀಲ್ಡ್ ಅಂಪೈರ್ ರಿಚರ್ಡ್ ಕೆಟಲ್ಬ್ರೋ ಚರ್ಚೆಗೆ ಗ್ರಾಸವಾಗಿದ್ದಾರೆ.
ವೈಡ್ ಬಾಲ್ ನೀಡಲಿಲ್ಲ ಅಂಪೈರ್ :
ವಿರಾಟ್ ಕೊಹ್ಲಿ 97 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಟೀಂ ಇಂಡಿಯಾ ಗೆಲುವಿಗೆ 2 ರನ್ ಅಗತ್ಯವಿತ್ತು. ಶತಕ ಪೂರೈಸಲು ವಿರಾಟ್ ಗೆ 3 ರನ್ ಗಳು ಬೇಕಾಗಿತ್ತು. ಬೌಲಿಂಗ್ ಮಾಡುತ್ತಿದ್ದ ಬಾಂಗ್ಲಾದೇಶದ ಸ್ಪಿನ್ನರ್ ನಸುಮ್ ಅಹ್ಮದ್ 42ನೇ ಓವರ್‌ನ ಮೊದಲ ಎಸೆತವನ್ನು ಎಸೆದರು. ಆ ಬಾಲ್ ಲೆಗ್ ಸ್ಟಂಪ್‌ನ ಹೊರಗೆ ಹೋದರೂ ಅಂಪೈರ್ ರಿಚರ್ಡ್ ಕೆಟಲ್‌ಬ್ರೋ ಅದನ್ನು ವೈಡ್ ಎಂದು ಘೋಷಿಸಲಿಲ್ಲ. ಇದಾದ ನಂತರ ಮುಂದಿನ ಎಸೆತವು ಡಾಟ್ ಆಗಿತ್ತು. ಓವರ್ ನ ಮೂರನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸಿ ಶತಕ ಪೂರೈಸಿ ತಂಡಕ್ಕೆ ಜಯವನ್ನೂ ತಂದುಕೊಟ್ಟರು. 42ನೇ ಓವರ್ ನ ಮೊದಲ ಎಸೆತಕ್ಕೆ ಅಂಪೈರ್ ವೈಡ್ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
Umpire doesn't give wide to virat
Best moment of match. 🤣🔥🔥#INDvsBAN #ViratKohli pic.twitter.com/L621N4ciur— Saurabh Raj (@sraj57454) October 19, 2023
ಇದನ್ನೂ ಓದಿ : IND vs BAN: ಶತಕ ಸಿಡಿಸಿ ಸಚಿನ್ ಅವರ ಮೂರು ದಾಖಲೆಗಳನ್ನು ಮುರಿದ ವಿರಾಟ್ ಕೊಹ್ಲಿ
ವೈಡ್ ಬಾಲ್ ನಿಯಮಗಳೇನು? :
ವೈಡ್ ಬಾಲ್ ನಿಯಮ 22.1.2 ರ ಪ್ರಕಾರ, ಚೆಂಡು ಬ್ಯಾಟ್ಸ್‌ಮನ್‌ನ ವ್ಯಾಪ್ತಿಯಿಂದ ಹೊರಗಿರುವಾಗ ವೈಡ್ ಎಂದು ಘೋಷಿಸಲಾಗುತ್ತದೆ. ಬ್ಯಾಟ್ಸ್‌ಮನ್ ಸಾಮಾನ್ಯ ಕ್ರಿಕೆಟ್ ಶಾಟ್ ಹೊಡೆಯಲು ಸಾಧ್ಯವಾದರೆ ಆ ಬಾಲ್ ವೈಡ್ ಎಂದು ಘೋಷಿಸಲಾಗುವುದಿಲ್ಲ. 22.1.1 ನಿಯಮಗಳ ಪ್ರಕಾರ ತೀರ್ಪು ನೀಡುವುದು ಅಂಪೈರ್‌ನ ಕೆಲಸ. ವಿರಾಟ್ ಕೊಹ್ಲಿ ಲೆಗ್ ಸ್ಟಂಪ್ ಮೇಲೆ ನಿಂತಿದ್ದರು. ಬೌಲರ್ ಬೌಲ್ ಹಾಕುವಾಗ, ಕೊಹ್ಲಿ ಆಫ್ ಸ್ಟಂಪ್ ಕಡೆಗೆ ಮೂವ್ ಆದರು. ಅಗ ಚೆಂಡು ವಿಕೆಟ್‌ಗಳನ್ನು ಮಿಸ್ ಮಾಡಿಕೊಂಡು ಕೀಪರ್ ಬಳಿ ಹೋಯಿತು. ಹೀಗಾಗಿ ಅಂಪೈರ್ ಆ ಬಾಲ್ ಗೆ ವೈಡ್ ನೀಡಲಿಲ್ಲ.
Umpire be like:- Virat Kohli Ka century Dekh ke hi jayega mai
hats off to you Legend ♥️♥️
#indiavsbangladesh #ViratKohli #KLRahul #Umpire pic.twitter.com/Ek84XCfH2A— Ankit Pandey (@ankit84069) October 19, 2023
ಇದನ್ನೂ ಓದಿ : ಶುಬ್ಮನ್ ಗಿಲ್ ಸಿಡಿಸಿದ ಸಿಕ್ಸರ್‌ಗೆ ಸಂಭ್ರಮಿಸಿದ ಸಾರಾ ತೆಂಡೂಲ್ಕರ್.. ವಿಡಿಯೋ ವೈರಲ್
ವೈರಲ್ ಆಯಿತು ಅಂಪೈರ್ ರಿಯಾಕ್ಷನ್ :
42ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅಂಪೈರ್ ರಿಚರ್ಡ್ ಕ್ಯಾಟಲ್‌ಬ್ರೋ ಅವರ ಮುಂದೆ ನಿಂತಿದ್ದರು. ವೈಡ್ ಡಿಕ್ಲೇರ್ ಮಾಡದ ನಂತರ, ಅವರೂ ನೀಡಿದ ರಿಯಾಕ್ಷನ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.