World Cup 2023, Virat Kohli: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್’ನಿಂದ 2023ರ ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ 108.60 ರ ಅತ್ಯುತ್ತಮ ಸರಾಸರಿಯಲ್ಲಿ 543 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 4 ಅರ್ಧ ಶತಕ ಸೇರಿವೆ.
ಈ ಸಂದರ್ಭದಲ್ಲಿ ಯಾವ ವ್ಯಕ್ತಿ ನೀಡಿದ ಸಲಹೆಯಿಂದ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆ ಮೂಡಿದೆ ಎಂಬುದರ ಬಗ್ಗೆ ಸ್ವತಃ ಕೊಹ್ಲಿ ಅವರೇ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ತೆಂಗಿನೆಣ್ಣೆ ಜೊತೆ ಈ ಪುಡಿ ಬೆರೆಸಿ ತಲೆಗೆ ಹಚ್ಚಿದರೆ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ!
ಅದು ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್ ಸಂದರ್ಭ. ಆಗ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾನಸಿಕವಾಗಿ ಕುಗ್ಗಿದ್ದರಂತೆ. ಆ ವೇಳೆ ಟೀಮ್ ಇಂಡಿಯಾದ ಮಾಜಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಆಟದ ಮನೋಭಾವವನ್ನು ಮರಳಿ ಪಡೆಯಲು ಸಹಾಯ ಮಾಡಿದರು ಎಂದು ಹೇಳಿಕೊಂಡಿದ್ದಾರೆ.
2011 ರ ವಿಶ್ವಕಪ್ ತಂಡದಲ್ಲಿ ಪ್ಯಾಡಿ ಅಪ್ಟನ್ ಗ್ಯಾರಿ ಕರ್ಸ್ಟನ್ ಅವರ ಸಹಾಯಕ ತರಬೇತುದಾರರಾಗಿದ್ದರು. 2022 ರ T20 ವಿಶ್ವಕಪ್ ವೇಳೆ ಅವರನ್ನು ಭಾರತ ತಂಡವು ಅಲ್ಪಾವಧಿಗೆ ಮರುಸೇರ್ಪಡೆಗೊಳಿಸಿತ್ತು.
ಟಿ 20 ವಿಶ್ವಕಪ್’ನಲ್ಲಿ, ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 82 ರನ್ (ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್) ಇನಿಂಗ್ಸ್ ಆಡುವ ಮೂಲಕ ಪಾಕಿಸ್ತಾನ ವಿರುದ್ಧದ ಪಂದ್ಯದ ದಿಕ್ಕನ್ನು ಬದಲಾಯಿಸಿದರು. ಆಧುನಿಕ ಯುಗದ ಈ ಮಹಾನ್ ಬ್ಯಾಟ್ಸ್’ಮನ್ ಅಪ್ಟನ್ಜೊತೆಗೆ ನಿರಂತರ ಮಾತುಕತೆ ನಡೆಸಿ, ತಮ್ಮ ಮನೋಸ್ಥೈರ್ಯ ಗಟ್ಟಿಗೊಳಿಸಿದ್ದರು.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ವಿರಾಟ್ ಕೊಹ್ಲಿ, “ನಾನು ಅವರೊಂದಿಗೆ ಸಾಕಷ್ಟು ಮಾತನಾಡಿದ್ದೇನೆ. ಆ ಸಮಯದಲ್ಲಿ ನಾನು ಅವರನ್ನು ತುಂಬಾ ಮೆಚ್ಚಿದೆ. ಏಕೆಂದರೆ ಅವರು ನನ್ನ ನ್ಯೂನತೆಗಳನ್ನು ನಿಭಾಯಿಸಲು ನನಗೆ ಸಹಾಯ ಮಾಡಿದರು” ಎಂದು ಹೇಳಿದರು.
ಇದನ್ನೂ ಓದಿ: ಟೀಂ ಇಂಡಿಯಾದ ಪ್ಲೇಯಿಂಗ್ 11 ಪ್ರಕಟಿಸಿದ ದ್ರಾವಿಡ್! 4ನೇ ಸ್ಥಾನದಲ್ಲಿ ಬ್ಯಾಟ್ ಬೀಸೋದು ಇವರೇ..!
“ನನ್ನ ಮನಸಲ್ಲಿ ಏನಿತ್ತು, ನಾನು ಏನು ಅನುಭವ ಮಾಡುತ್ತಿದ್ದೇನೆ ಎಂದು ಅವರು (ಪ್ಯಾಡಿ ಆಪ್ಟನ್) ಕ್ರಿಕೆಟ್ ದೃಷ್ಟಿಕೋನದಿಂದ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಸ್ವತಃ ಕ್ರಿಕೆಟಿಗರಾಗಿ, ಕ್ರೀಡಾ ಮನಶ್ಶಾಸ್ತ್ರಜ್ಞರಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು” ಎಂದು ತನ್ನ ಬ್ಯಾಟಿಂಗ್ ಬಲಗೊಳ್ಳಲು ಸಹಾಯ ಮಾಡಿದ ಶಕ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ