ವಿಶ್ವದಾಖಲೆ ಬರೆದ ಯಶಸ್ವಿ ಜೈಸ್ವಾಲ್: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಬರೆದಿದ್ದು ಇದೇ ಮೊದಲು

Yashasvi Jaiswal: ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ 22 ಸಿಕ್ಸರ್‌’ಗಳನ್ನು ಬಾರಿಸಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಬ್ಯಾಟ್ಸ್‌ಮನ್ ಒಂದೇ ಟೆಸ್ಟ್ ಸರಣಿಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ್ದು ಇದೇ ಮೊದಲು.

Written by - Bhavishya Shetty | Last Updated : Feb 19, 2024, 12:58 PM IST
    • ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್
    • 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಬರೆದಿದ್ದು ಇದೇ ಮೊದಲು
    • ಟೆಸ್ಟ್ ಇನ್ನಿಂಗ್ಸ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್ (12) ಬಾರಿಸಿದ ದಾಖಲೆ
ವಿಶ್ವದಾಖಲೆ ಬರೆದ ಯಶಸ್ವಿ ಜೈಸ್ವಾಲ್: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಬರೆದಿದ್ದು ಇದೇ ಮೊದಲು title=
yashasvi jaiswal

India vs England 3rd Test: ರಾಜ್‌’ಕೋಟ್‌’ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅದ್ಭುತ ರೀತಿಯಲ್ಲಿ ದ್ವಿಶತಕ ಸಿಡಿಸಿದ್ದಾರೆ. ಟೆಸ್ಟ್‌’ನ ಎರಡನೇ ಇನ್ನಿಂಗ್ಸ್‌’ನಲ್ಲಿ 236 ಎಸೆತಗಳಲ್ಲಿ 214 ರನ್ ಗಳಿಸಿದ್ದು, ಇದರಲ್ಲಿ ಜೈಸ್ವಾಲ್ 14 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಇನ್ನಿಂಗ್ಸ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್ (12) ಬಾರಿಸಿದ ದಾಖಲೆಯನ್ನು ಸಹ ಯಶಸ್ವಿ ಜೈಸ್ವಾಲ್ ಸರಿಗಟ್ಟಿದ್ದಾರೆ. 1996 ರಲ್ಲಿ ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟಿಗ ವಾಸಿಂ ಅಕ್ರಮ್, ಜಿಂಬಾಬ್ವೆ ವಿರುದ್ಧ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇದನ್ನೂ ಓದಿ: General knowledge: ಭಾರತಕ್ಕಿಂತ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದ ದೇಶ ಯಾವುದು?   

ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ 22 ಸಿಕ್ಸರ್‌’ಗಳನ್ನು ಬಾರಿಸಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಬ್ಯಾಟ್ಸ್‌ಮನ್ ಒಂದೇ ಟೆಸ್ಟ್ ಸರಣಿಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ್ದು ಇದೇ ಮೊದಲು. ಯಶಸ್ವಿ ಜೈಸ್ವಾಲ್ ಅವರ ಸಿಕ್ಸರ್‌’ಗಳ ನೆರವಿನಿಂದ ಭಾರತ ತಂಡ ದೊಡ್ಡ ವಿಶ್ವ ದಾಖಲೆಯನ್ನೂ ಮುರಿದಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ಟೆಸ್ಟ್ ಸರಣಿಯಲ್ಲಿ ಗರಿಷ್ಠ 48 ಸಿಕ್ಸರ್‌’ಗಳನ್ನು ಬಾರಿಸಿದ ತಂಡವಾಗಿದೆ. ಭಾರತ ತನ್ನದೇ ಹಳೆಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 47 ಸಿಕ್ಸರ್‌’ಗಳನ್ನು ಬಾರಿಸಿತ್ತು. ಈ ಪಟ್ಟಿಯಲ್ಲಿ ಇಂಗ್ಲೆಂಡ್ (43) 3ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ (40) 4ನೇ ಸ್ಥಾನದಲ್ಲಿದೆ.

ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದು, ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ರಾಜ್‌ಕೋಟ್ ಟೆಸ್ಟ್‌’ನಲ್ಲಿ ಭಾರತ ತನ್ನ ಹೆಸರಿನಲ್ಲಿ 28 ಸಿಕ್ಸರ್‌’ಗಳನ್ನು ಹೊಂದಿದೆ. 2019 ರಲ್ಲಿ ವೈಜಾಗ್‌’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (27 ಸಿಕ್ಸರ್) ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು.

ಅಂದಹಾಗೆ ಮೂರನೇ ಟೆಸ್ಟ್‌ನಲ್ಲಿ 557 ರನ್‌’ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಎರಡನೇ ಇನ್ನಿಂಗ್ಸ್‌’ನಲ್ಲಿ 122 ರನ್‌’ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ರಾಜ್‌ಕೋಟ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಭಾರತ 434 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದು ರನ್‌ಗಳ ಲೆಕ್ಕದಲ್ಲಿ ಭಾರತಕ್ಕೆ ಅತಿ ದೊಡ್ಡ ಗೆಲುವಾಗಿದೆ. 2021ರಲ್ಲಿ ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ 372 ರನ್ ಅಂತರದಲ್ಲಿ ಗೆದ್ದಿದ್ದ ಭಾರತಕ್ಕೆ ಇದುವರೆಗೆ ಇದೇ ಅತಿದೊಡ್ಡ ಗೆಲುವಾಗಿತ್ತು.

ಇದನ್ನೂ ಓದಿ: ಅಘೋರ ಸಂಪ್ರದಾಯದ ಸಂಸ್ಥಾಪಕ: ಹುಟ್ಟಿದಾಗ 3 ದಿನ ಅಳಲಿಲ್ಲ, ಹಾಲು ಕುಡಿಯಲಿಲ್ಲ.!

ಭಾರತದ ನೆಲದಲ್ಲಿ ರನ್‌’ಗಳ ದೃಷ್ಟಿಯಿಂದ ಅತಿ ದೊಡ್ಡ ಗೆಲುವಿನ ದಾಖಲೆಯೂ ಆಗಿದೆ. ನಾಲ್ಕೇ ದಿನಗಳಲ್ಲಿ ಮೂರನೇ ಟೆಸ್ಟ್‌’ನಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯ ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಡೆಯಲಿದೆ. ರಾಜ್‌ಕೋಟ್‌’ನಲ್ಲಿ ಭಾರತ ತಂಡವು ಹೆಚ್ಚು ಆಕ್ರಮಣಕಾರಿ ರೀತಿಯಲ್ಲಿ ಕ್ರಿಕೆಟ್ ಆಡಿದ್ದು, ಇಂಗ್ಲೆಂಡ್ ವಿರುದ್ಧ 434 ರನ್‌’ಗಳಿಂದ ಜಯಗಳಿಸಿದೆ. 557 ರನ್‌’ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌’ನಲ್ಲಿ 122 ರನ್‌’ಗಳಿಗೆ ಆಲೌಟ್ ಆಗಿದೆ. ಎರಡನೇ ಇನ್ನಿಂಗ್ಸ್‌’ನಲ್ಲಿ ರವೀಂದ್ರ ಜಡೇಜಾ 41 ರನ್‌’ಗಳಿಗೆ ಐದು ವಿಕೆಟ್ ಪಡೆದಿರೆ, ಕುಲದೀಪ್ ಯಾದವ್ ಎರಡು ವಿಕೆಟ್, ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಭಾರತದ ಪರ ಎರಡನೇ ಇನ್ನಿಂಗ್ಸ್‌’ನಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಔಟಾಗದೆ 214, ಶುಭಮನ್ ಗಿಲ್ 91 ಮತ್ತು ಸರ್ಫರಾಜ್ ಖಾನ್ 68 ರನ್ ಗಳಿಸಿದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 319 ರನ್‌ಗಳಿಗೆ ಸೀಮಿತವಾಗಿದ್ದರೆ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News